
ಚಿತ್ರ : ಧನಂಜಯ ಪೂಜಾರಿ
ವರದಿ : ಇನ್ನಂಜೆ ಜಯರಾಮ್
ಮಹಾರಾಷ್ಟ್ರದ ಮಿನಿ ತುಳುನಾಡು ಎಂದೇ ಬಿಂಬಿತವಾಗಿರುವ ಡೊಂಬಿವಲಿಯ ಅಜ್ದೇಗಾಂವ್ ನ
ಶ್ರೀ ಜೈ ಭವಾನಿ ಮಿತ್ರ ಭಜನಾ ಮಂಡಳಿ ಸಂಚಾಲಿತ
ಶ್ರೀ ಜೈ ಭವಾನಿ ಶನೀಶ್ವರ ಮಂದಿರ ದ 35 ನೇ ವಾರ್ಷಿಕ ಮಂಗಳೋತ್ಸವ ಫೆಬ್ರವರಿ 8 ರ ಶನಿವಾರ ಮಂದಿರದ ಪ್ರಧಾನ ಅರ್ಚಕ ಪ್ರಕಾಶ್ ಭಟ್ ಕಾನಂಗಿ ಅವರ ಪೌರೋಹಿತ್ಯ ದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ
ಶ್ರದ್ದೆ ಭಕ್ತಿಯಿಂದ ಜರುಗಿತು.







ಬೆಳಿಗ್ಗೆ ತೋರಣ ಮಹೂರ್ತ, ಗಣಹೋಮ, ನಡೆದು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ, ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.






ನಂತರ ಶನಿ ದೇವರ ಕಲಶ ಪ್ರತಿಷ್ಠೆ ನಡೆದು ಗ್ರಂಥ ಪಾರಾಯಣ ನಡೆಯಿತು.
ನಂತರ ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಪಾರಾಯಣ ಮುಂದುವರೆಯಿತು…
ನಗರದ ಪ್ರಸಿದ್ಧ ಭಾಗವತರು, ವಚಕರು, ಹಿಮ್ಮೇಳ ಕಲಾವಿದರು ಹಾಗೂ ಆರ್ಥಧಾರಿಗಳು ಶನಿದೇವರ ಮಹಿಮೆಯನ್ನು ತಮ್ಮ ವಾಕ್ ಚಾತುರ್ಯ ದ ಮೂಲಕ ಪ್ರಸ್ತುತ ಪಡಿಸಿದರು.
ನಂತರ ಶ್ರೀ ಶನೀಶ್ವರ ದೇವರಿಗೆ ಮಂಗಳಾರತಿ ಬೆಳಗಿ, ತೀರ್ಥ ಪ್ರಸಾದ ವಿತರಿಸಲಾಯಿತು.












ರಾಜಕೀಯ ಧುರೀಣರು, ವಿವಿಧ ಧಾರ್ಮಿಕ, ಸಾಮಾಜಿಕ ಸಂಸ್ಥೆಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಕಳೆದ 35 ವರ್ಷಗಳಿಂದ ಸಣ್ಣ ಕೊಠಡಿಯಲ್ಲಿನ ಮಂದಿರದಲ್ಲಿ ಶ್ರೀ ಜೈ ಭವಾನಿ ಹಾಗೂ ಶನೀಶ್ವರ ದೇವರನ್ನು ಆರಾಧಿಸಿ ಕೊಂಡು ಬರುತ್ತಿರುವ ಭಕ್ತರು, ಕಳೆದ ವರ್ಷ ನವಿಕೃತ ಮಂದಿರದಲ್ಲಿ ದೇವರನ್ನು ಪುನರ್ಪ್ರತಿಷ್ಠಾಪಿಸಿ ಇದೀಗ ಮಂದಿರದ ಗೌರವ ಅಧ್ಯಕ್ಷರಾದ ರವಿ ಎಂ ಸುವರ್ಣ, ಅಧ್ಯಕ್ಷರಾದ ಸೂರಜ್ ಡಿ ಸಫಲಿಗ ಅವರ ಮುತುವರ್ಜಿ ಯಲ್ಲಿ ಉಪಾಧ್ಯಕ್ಷ ಸಂಜೀವ ಪಿ ಪಾಲನ್, ಕಾರ್ಯದರ್ಶಿ ಗಣೇಶ್ ಜಿ ಪೂಜಾರಿ, ಕೋಶಾಧಿಕಾರಿ ಜೈಕಿಶ್ ಆರ್ ಸನಿಲ್, ಜೊತೆ ಕಾರ್ಯದರ್ಶಿ ಪ್ರದೀಪ್ ಎಸ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ರಕ್ಷಿತ್ ಸಾಲ್ಯಾನ್, ಪ್ರಧಾನ ಅರ್ಚಕ ಕಾನಂಗಿ ಪ್ರಕಾಶ್ ಭಟ್, ಸಹ ಅರ್ಚಕ ಪ್ರವೀಣ್ ಪೂಜಾರಿ, ಸಲಹೆಗಾರರಾದ ಭಾಸ್ಕರ್ ಎಲ್ ಅಮಿನ್, ಮಹಿಳಾ ವಿಭಾಗದ ಅಧ್ಯಕ್ಷೆ ಪಾರ್ವತಿ ಸಾಲ್ಯಾನ್, ಕಾರ್ಯದರ್ಶಿ ದಯಾ ಶೆಟ್ಟಿ, ಕೋಶಾಧಿಕಾರಿ ಶ್ಯಾಮಲ ಪೂಜಾರಿ ಹಾಗೂ ಹಾಗೂ ಪದಾಧಿಕಾರಿಗಳ, ಯುವ ವಿಭಾಗದ ಸದಸ್ಯರ ಮತ್ತು ಎಲ್ಲಾ ಭಕ್ತರ ಸಹಕಾರದಿಂದ 35 ನೇ ವಾರ್ಷಿಕ ಮಹಾಪೂಜೆಯನ್ನು ಶ್ರದ್ಧ ಭಕ್ತಿಯಿಂದ ವೈಭವವಾಗಿ ಆಚರಿಸಿಕೊಂಡಿತು