23.5 C
Karnataka
April 4, 2025
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ – ಭಾಯಂದರ್ ಶಾಖೆಯ ವಾರ್ಷಿಕೋತ್ಸವ 



ಸಂಘಟನೆಯಲ್ಲಿ ಸಮಾಜ ಬಾಂಧವರು ಹೆಚ್ಚು ತೊಡಗಿ ಕೊಳ್ಳಬೇಕು : ಹೊಸಬೆಟ್ಟು. ಅರುಣ್ ಕುಮಾ‌ರ್

ಚಿತ್ರ ವರದಿ : ದಿನೇಶ್ ಕುಲಾಲ್ 

  ಮುಂಬಯಿ ಪೆ 13.ಸಮಾಜದ ಹಿರಿಯರು ಮಹಾನ್ ಉದ್ದೇಶದೊಂದಿಗೆ ವ್ಯವಸ್ಥಾಪಕ ಮಂಡಳಿಯನ್ನು  ಅದರೊಟ್ಟಿಗೆ ದಾರ್ಮಿಕರ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ

 ಅದನ್ನು ಸಮರ್ಥ ರೀತಿಯಲ್ಲಿ ಸಮಾಜ ಬಾಂಧವರು ಬೆಳೆಸುತ್ತಿದ್ದಾರೆ ,ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈಯ ತುಳು ಕನ್ನಡಿಗರ ಅತಿ ಹಿರಿಯ ಸಂಸ್ಥೆ. ಸಾಮಾಜಿಕ ಶೈಕ್ಷಣಿಕ ಸೇವೆಯ ಮೂಲಕ ಸಮಾಜ ಬಾಂಧವರನ್ನು ಅಲ್ಲದೆ ತುಳು ಕನ್ನಡಿಗರಿಗೂ ಬಹಳಷ್ಟು ಆಶ್ರಯದ ಸೇವೆಯನ್ನು ಮಾಡುತ್ತಿದೆ. ಮಂಡಳಿಯ ಮೂರು ಶಾಖೆಗಳು ಸಕ್ರಿಯವಾಗಿ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸುತ್ತಿದೆ ,ಮೀರಾ ಭಯಂದರ್ ಪರಿಸರದಲ್ಲಿ ಸಂಘಟನೆ ಬೆಳೆಯುವುದರೊಂದಿಗೆ ಶಿಕ್ಷಣ ಸಂಸ್ಥೆ ಮತ್ತು ಮೊಗವೀರ ಭವನ ನಿರ್ಮಾಣದ ಸೇವಾ ಕಾರ್ಯಗಳನ್ನು ರೂಪಿಸಿಕೊಂಡಿದ್ದು ಅದು ವೇಗದಲ್ಲಿ ಆಗುವ ಸಿದ್ಧತೆಗಳು ಶಾಖೆಯ ಪದಾಧಿಕಾರಿಗಳು ಮಾಡುತ್ತಿರುವುದು ಅಭಿನಂದನೆಯ, ಅದಕ್ಕೆ ವ್ಯವಸ್ಥಾಪಕ ಮಂಡಳಿಯ ಎಲ್ಲಾ ರೀತಿಯ ಬೆಂಬಲವಿದೆ, ಸಮಾಜ ಬಾಂಧವರು ನಮ್ಮ ವ್ಯವಸ್ಥಾಪಕ ಮಂಡಳಿಯಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿ ಕೊಳ್ಳಬೇಕು, ಸಮಾಜವನ್ನು ಬಲಿಷ್ಠ ಗೊಳಿಸಬೇಕು ಎಂದು ಮುಂಬೈಯ ಹಿರಿಯ ಜಾತಿಯ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಹೊಸಬೆಟ್ಟು ಅರುಣ್ ಕುಮಾರ್ ನುಡಿದರು,

  ಪೆ 8 ರಂದು  ಮೀರಾ ರೋಡಿನ ಕನಾಕಿ ರಸ್ತೆಯಲ್ಲಿರುವ ಶೆಹನಾಯಿ ಸಭಗ್ರಹದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ ಭಾಯಂದರ್ ಶಾಖೆ ಯ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಮಾತನಾಡುತ್ತಾ

 ಮೀರು-ಭಾಯಂದರ್ ಪ್ರದೇಶದಲ್ಲಿ ಶೈಕ್ಷಣಿಕ ಸಂಸ್ಥೆ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡಿದೆ ಮುಂದೆ ದೊಡ್ಡಮಟ್ಟದಲ್ಲಿ ಸಂಸ್ಥೆ ಬೆಳೆಯವ ಸಿದ್ಧತೆ ಮಾಡಿರೋದು ಅದಕ್ಕೆ ದಾನಿಗಳು ಸಮಾಜ ಬಾಂಧವರು ಸಹಕಾರ ನೀಡಬೇಕು,, ಯುವ ಸಮುದಾಯದ ಹೊಸ ಚಿಂತೆನೆಗೆ  ಮೂಲಕ ನಮ್ಮ ಹಿರಿಯರಕನಸನ್ನು ಸಾಕ್ಷಾತ್ಕಾರಗೊಳಿಸುವುದು ನಮ್ಮೆಲ್ಲರೆ ಕರ್ತವ್ಯವಾಗಿದೆ. ನಿಮ್ಮ ಆಕೆಯ, ಆಕಾಂಕ್ಷೆಗಳಿಗೆ ಮಂಡಳಿ ಸದಾ ಸ್ಥಡಿಸಲಿದೆ ಎಂದರು.

ಮೊಗವೀರ ಆಪರೇಟನ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಭಾಸ್ಕರ್ ಸಾಲಿಯಾನ್ ಮಾತನಾಡಿ, ಪ್ರತಿ ಒಬ್ಬನು ಸಮಾಜ ಸೇವೆ ಬಹುಮುಖ್ಯ ಅಂಗ, ಯುವಕರ ಹಿರಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತವಾಗಿ ನೀಡಿರುವರು, ಸಮಾಜ ಬಾಂಧವರ ಪ್ರತಿಭೆ ಅನಾವರಣಗೊಳ್ಳಲು ಇಂಥ ವೇದಿಕೆ ಅಗತ್ಯ ಆಗಿದೆ

 ಸ್ವಾತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಮೊಗವೀರ ಬ್ಯಾಂಕ್ ಪ್ರಗತಿಗಾಗಿ ಸಮಾಜ ಬಾಂಧವರು ಸೇರುದಾರರಾಗಿ ಸಹ ಕರಿಡಬೇಕು. ಐತಿಹಾಸಿಕ ಹಿನ್ನೆಯಲ್ಲಿರುವ ನಮ್ಮ ಮಂಡಳಿ ಮತ್ತು ಹಣಕಾಸು ಸಂಸ್ಥೆಗೆ ಬೆಳವಣಿಗೆಗೆ ಸಮಾಜ ಬಾಂಧವರು ಮುಂದೆ ಎಂದು ನುಡಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ವಿಶ್ವಸ್ಥರಾದ ಅಜಿತ್ ಸುವರ್ಣ ಮಾತನಾಡುತ್ತಾ ಈ ಶಾಖೆಯ ಸದಸ್ಯರ ಉತ್ಸಾಹ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ ಅವರ ಸೇವಕಾರಿಗಳು ನಿರಂತರವಾಗಿ ಬೇಕಾಗಿದೆ, ಸಮಾಜ ಸೇವೆಯನ್ನು ಕರ್ತವ್ಯವಾಗಿ ಸ್ವೀಕರಿಸಬೇಕು. ನಮ್ಮ ಕರ್ತವ್ಯ ಇತರರಿಗೆ ಮಾದರಿಯಾಗಬೇಕು ಮಹತ್ತರ ಸಾಧನೆಗೈದೆ ನಮ್ಮ ಶೈಕ್ಷಣಿಕ ಸಂಸ್ಥೆ ಸಮಾಜ ಬಾಂಧವರ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಶಿಕ್ಷಣ ಇಡಬೇಕು ಎಂದು ನುಡಿದರು

ಶಾಖೆಯ ಸಮನ್ವಯಕರಾದ ಸುರೇಶ್ ಕುಂದರ್ ಮಾತನಾಡುತ್ತಾ ಶಾಖೆಯ ಸದಸ್ಯರ ಅನ್ಯೂನ್ಯ ಸಂಬಂಧ ಈ ಪರಿಸರದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಸದೃಢವಾಗಿ ಬೆಳೆಯುತ್ತಿದೆ ಅವರ ಎಲ್ಲಾ ವಿಚಾರಧಾರೆಗಳಿಗೆ ನಮ್ಮ ಸ್ಪಂದನೆ ಇದೆ. ಈ ಪರಿಸರದಲ್ಲಿ ನಮ್ಮ ಮಹತ್ವವಾದ ಯೋಜನೆಗಳಿಗೆ ಅದಕ್ಕೆ ದಾನಿಗಳು ಸಹಕಾರ ನೀಡಬೇಕು ಸಮಾಜ ಬಾಂಧವರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು, ನಮ್ಮೊಳಗೆ ಒಗ್ಗಟ್ಟಿದ್ದಾಗ ಸಮಾಜವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯ ಎಂದು ನುಡಿದರು,

ಗೌರವ ಅತಿಥಿಯಾಗಿದ್ದ ಸೇವಾರ್ಥ ಸೇವಾ ಫೌಂಡೇನಕನೆ ಸಹ ಸಂಸ್ಥಾಪಕ ಪ್ರಜ್ವಲ್ ದೇವದಾಸ್ ಸಾಲ್ಯಾನ್ ಮಾತನಾಡಿ, ಸಂಘ-ಸಂಸ್ಥೆಗಳು ಸದಾ ಕ್ರಿಯಾಶೀಲರಾಗಿರಲು ವಾರ್ಷಿಕೋತ್ಸವದಂತಹ ಕಾಠ್ಯಕ್ರಮಗಳು ಮಾಡಬೇಕು. ಯುವ ಶಕ್ತಿಯ ಸದ್ಬಳಕೆ ಯಿಂದ ತ್ವಂತವಾಗಿ ಸಂಸ್ಥೆಯ ಬೆಳವಣಿಗೆ ಸಾಧ್ಯ ಮೀನಾ-ಭಾಯಂದರ್ ಶಾಖೆಯ ಫೌಂಡೇಶನ್ ಮೂಲಕ ಸಹಾಯ ಮಾಡಲು ಸದಾ ಸಿದ್ಧ ಎಂದರು.

ಗೌರವ ಅತಿಥಿ ಗೂಗಲ್ ಇಂಡಿಯಾ ಸೀನಿ ಯರ್ ಮ್ಯಾನೇಜರ್ ಅಮೇಯ್  ಸುವರ್ಣ ಮಾತನಾಡಿ,  ಆಧುನಿಕ ಬಗತ್ತು ಅವಕಾಶಗಳಿಂದ ಕೂಡಿದ್ದು, ಯುವ  ಪ್ರತಿಭೆ  ತಮ್ಮ ಸಾಧನೆ ಮತ್ತು ಆತ್ಮ ವಿಶ್ವಾಸ  ಮೂಲಕ ಮುನ್ನಡಬೇಕು , ಆದಾಯದ  ಅಲ್ಲ ಭಾಗ ವನ್ನು ಸಮಾಜಕ್ಕೆ ವಿನಿಯೋಗಿಸಬೇಕು ಎಂದು ನುಡಿದರು 

ವೇದಿಕೆ ಧನ್ಯರು ಶಾಖೆಯ ವಾರ್ಷಿಕ ಮರಣ ಹಂಚಿಕೆಯನ್ನು ಪೆನ್ ಡ್ರೈವ್  ಬಿಡುಗಡೆಗೊಳಿಸಿದರು.

 ಮಾನ್ವಿ ಪುತ್ರನ್, ಸುಜಾತ ನಾಯ್ಕ್, ಮನೋರಮಾ ಅಮೀನ್, ಲಕ್ಷ್ಮ ತಿಂಗಳಯ ಆಶಿಕ ಕಾಂಚನ್ ಸುಮಿತ್ರ ಶ್ರೀಯಾನ್ , ವಿದ್ಯಾ ಪುತ್ರನ್ ಅತಿಥಿಗಳನ್ನು ಮಚಯಿಸಿದರು. ವ್ಯವಾಪಕ ಮಂಡಳಿಯ ಗೌರವ ಕಾವ್ಯದರ್ಶಿ ದಿಲೀಪ್ ಕುಮಾರ್ ಮೂಲ್ಕಿ , ಗೌರವಕಶ ಧಿಕಾರಿಪ್ರತಾಪ್ ಕುಮಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾವತಿ ಎಚ್. ಅಮೀನ್ ಪಾಲ್ಗೊಂಡಿದ್ದರು,

 ಈ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ ಚಾಂಪಿಯನ್ ಚಿನ್ನದ ಪದಕ ವಿಜೇಶ. ಜಿಮ್ ಮಾಲಕ ಮೋಹನ್ ಎಸ್. ಪುತ್ರನ್ ಮತ್ತು  ದಂಪತಿಯನ್ನು ಸಮ್ಮಾನಿಸಲಾಯಿತು.

ಶಾಖೆಯ ಮಹಿಳಾ ವಿಭಾಗದವರಿಂದ ಹಳದಿ ಕುಂಕುಮ ಜರಗಿ, ನಂತರ ವಿವಿಧ ನೃತ್ಯ ಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ,  ಶಾಖೆಯ ಸದಸ್ಯರಿಂದ ತುಳು ನಾಟಕ  ಮತ್ತು ಮನೋರಂಜನ ಕಾರ್ಯಕ್ರಮಗಳು ಜರಗಲಿದ್ದು ,ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮಂಡಳಿಯ ಸದಸ್ಯರು ಸ್ವಜಾತಿ ಬಾಂಧವರು ತುಳು ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು,

——**

ಮೀರಾ ಭಯಂದರ್ ಪರಿಸರದಲ್ಲಿ ಮೊಗವೀರ ಭವನ ಶಿಕ್ಷಣ ಸಂಸ್ಥೆ ನಿರ್ಮಾಣದ ಯೋಜನೆ  : ಗಂಗಾಧರ್ ಬಂಗೇರ

  ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೀರಾ ಭಯಂದರ್ ಶಾಖೆಯ ಕಾರ್ಯ ಧ್ಯಕ್ಷ ಗಂಗಾಧರ ಎಸ್. ಬಂಗೇರ  ಮಾತನಾಡಿ. ಮೊಗವೀರ ವ್ಯವಸ್ಥಾಪಕ ಮಂಡಳಿ ಸಮಾಜಕ್ಕೆ ಆಶಯವಾಗಿ ಬೆಳೆದಂತೆ ಮೀರಾಬಂದರ್ ಪರಿಸರದಲ್ಲಿ ಅದರ ಶಾಖೆ ಸುಧಾರಣವಾಗಿ ಸಮಾಜ ಬಾಂಧವನು ಒಗ್ಗಟ್ಟಾಗಿ ಬೆಳೆಸುತ್ತಿದೆ, ಶಾಖೆಯ ಈ ಇಂದಿನ ಪದಾಧಿಕಾರಿಗಳು ಹಾಗೂ ಈಗಿನ ಪದಾಧಿಕಾರಿಗಳ ಪರಿಶ್ರಮ ದಿಂದಾಗಿ ಮಂಡಳಿಯ ಅಂಕುರ್ ಶಿಕ್ಷಣ ಸಂಸ್ಥೆ ಸಣ್ಣ ರೀತಿಯಲ್ಲಿ ಬೆಳೆದಿದೆ ಮುಂದೆ ಎಮ್ಮರವಾಗಿ ಬೆಳೆಯಲಿದೆ ಅದರೊಟ್ಟಿಗೆ ಮೊಗವೀರ ಸಮುದಾಯ ಭವನ ಕೂಡ ಪರಿಸರದಲ್ಲಿ ನಿರ್ಮಾಣ ಆಗುವ ಕನಸಿದೆ, ಪ್ರತಿ ಸದಸ್ಯರ ಶ್ರಮ ಮತ್ತು ಯೋಗದಾನ ಬಾಳಷ್ಟಿದೆ ಯುವಕರು ಮಹಿಳೆಯರು ಬಹಳಷ್ಟು ಉತ್ಸಾಹದಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ ಮುಂದಿನ ದಿನದಲ್ಲೂ ಕೂಡ ಸಂಘಟಿಕರಾಗಿ ಕೆಲಸ ಮಾಡಬೇಕಾಗಿದೆ ಎಂದು ನುಡಿದರು

———

 ಮೀರಾಬಾಯಿಂದರ್ ಪರಿಸರದಲ್ಲಿ ನಿರ್ಮಾಣವಾಗುವ ಯೋಜನೆಗೆ ನನ್ನ ಬೆಂಬಲವಿದೆ: ಉದ್ಯಮಿ ವೇದ್ ಪ್ರಕಾಶ್ ಶ್ರೀಯಾನ್,

ಗೌರವ ಅತಿಥಿಯಾಗಿದ್ದ ದಿವ್ಯಾ ಸಿಪ್ಪಿಂಗ್ ಆಡಳಿತ ನಿರ್ದೇಶಕ ವೇದಪ್ರಕಾಶ್ ಶ್ರೀಯಾನ್ ಸಸಿಹಿತ್ಲು ಮಾತನಾಡಿ, ಮಂಡಳಿಯ ಎಲ್ಲಾ ಶಾಖೆಗಳಲ್ಲೂ ಸದಸ್ಯರು ಉತ್ಸಹ ಕಂಡಾಗ ಬಹಳ ಸಂತೋಷವಾಗುತ್ತಿದೆ ನಮ್ಮ ಒಗ್ಗಟ್ಟು ಇನ್ನಷ್ಟು ಬಲಿಷ್ಠವಾಗಬೇಕು, ಪರಿಸರದ ಯುವಕರು ಮಹಿಳೆ ವಿಭಾಗದ ವಿಶೇಷ ಮುತುವರ್ಜಿಯಿಂದ ಈ ಶಾಖೆ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ. ಮೊಗವೀರ ಸಮಾಜಕ್ಕೆ ಬಹಳಷ್ಟು ಶ್ರಮಿಸುತ್ತಿರುವ ಮತ್ತು ಉಚ್ಚಿಲ್ಲ ಮಹಾಲಕ್ಷ್ಮಿ ದೇವಸ್ಥಾನದ ಭಕ್ತಸಾಗರ ಬಂದು ನೋಡುವಂತೆ ಮಾಡಿದ ಮಗವೀರ ಸಮಾಜದ ಜನನಾಯಕ ನಾಡೋದು: ಡಾ  ಜಿ. ಶಂಕರ್ ಅವರ ಮೂಲಕ ಈ ಪರಿಸರದಲ್ಲಿ ಶಾಖೆಯ ಯೋಜನೆಗಳಿಗೆ, ಆರ್ಥಿಕ ನೆರವು ನೀಡಲು ನಾನು ತಿಳಿಸುತ್ತೇನೆ ಅಲ್ಲದೆ ನನ್ನ ತಾಯಿಯ ಹೆಸರಿನಲ್ಲಿ ಕೂಡ ದೇನಿಗೆಯನ್ನು ನೀಡುತ್ತೇನೆ. ಎಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಮುನ್ನಡೆಸಿ ಎಂದು ನುಡಿದರು,

Related posts

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ )ಥಾಣೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್ ಆಯ್ಕೆ.

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಪರಿವಾರ ದೇವರಿಗೆ ರಜತ ಪೀಠ ಸಮರ್ಪಣೆ

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಆಶಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸುವರ್ಣ ಮಹೋತ್ಸವ ನಿಮಿತ್ತ ಪೂರ್ವಬಾವಿ ಸಭೆ

Mumbai News Desk

ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ 

Mumbai News Desk