
ಮುಂಬಯಿ, ಫೆ.14 : ಮಹಾ ನಗರದಲ್ಲಿರುವ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲೊಂದಾದ ಕುಮಾರ ಕ್ಷತ್ರಿಯ ಸಂಘ, ಮುಂಬಯಿ ಇದರ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸತ್ಯ ನಾರಾಯಣ ಮಹಾಪೂಜೆ ಫೆಬ್ರವರಿ , ರವಿವಾರ ದಿನಾಂಕ 16ರಂದು ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವಭವನ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಂ.ಡಿ. ರಾವ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಂತರ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ನೆರವೇರಲಿದೆ. ಮಧ್ಯಾಹ್ನ 12.15 ಗಂಟೆಗೆ ಕುಮಾರ ಕ್ಷತ್ರಿಯ ಸಂಘ, ಮುಂಬಯಿಯ ಅಧ್ಯಕ್ಷ ಎಂ ಡಿ ರಾವ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ನೆರವೇರಲಿದೆ. ಇದೇ ಸಂದರ್ಭದಲ್ಲಿ ಸಮಾಜ ಮತ್ತು ಸಂಘದ ಪ್ರಗತಿಗೋಸ್ಕರ ಶ್ರಮಿಸಿದ ದಿವಂಗತ ಕಾರ್ಯಕರ್ತರ ಕುಟುಂಬದವರನ್ನು ಮತ್ತು ಸಂಸ್ಥೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸದಸ್ಯರನ್ನು ಸನ್ಮಾನಿಸಲಾಗುವದು.
ಈ ಸಂದರ್ಭದಲ್ಲಿ ಲಘು ಉಪಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೊಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕುಮಾರ ಕ್ಷತ್ರಿಯ ಸಂಘ ಮುಂಬಯಿವತಿಯಿಂದ ಉಪಾಧ್ಯಕ್ಷ ರವಿ ಜಿ. ಚಂದ್ರಗಿರಿ, ಗೌ. ಪ್ರ. ಕಾರ್ಯದರ್ಶಿ ಉಮಾನಾಥ ವಿ. ರಾವ್, ಕೋಶಾಧಿಕಾರಿ ಶಾಂತಾರಾಮ್ ಜೆ. ಮಾಂಗಾಡ್, ಜೊತೆ ಕೋಶಾಧಿಕಾರಿ ಸುರೇಂದ್ರ ಎಚ್. ಎ. ಮತ್ತು ಜೊತೆ ಕಾರ್ಯದರ್ಶಿ ಸುರೇಂದ್ರ ಎಚ್ ಎ ಜೊತೆ ಕೋಶಾಧಿಕಾರಿ ಸಾಗರ ಪಿ. ರಾವ್ ಮತ್ತು ಸಮಿತಿ ಸದಸ್ಯರಾದ ಕೆ. ಎಂ. ರಾವ್, ರವಿ ಎಸ್. ಕಲ್ನಾಡ್, ವಿವೇಕ್ ಜಿ. ರಾವ್, ಅನಿಲ್ ಜಿ. ರಾವ್, ಪ್ರಶಾಂತ್ ನಾಥ್, ಪ್ರಶಾಂತ ಆರ್. ರಾವ್, ಅನುಪ್ ಜೆ.ರಾವ್ ಮಹಿಳಾ ವಿಭಾಗದವತಿಯಿಂದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್, ಉಪ ಕಾರ್ಯಾಧ್ಯಕ್ಷೆ ಉಮಾ ಎಸ್. ರಾವ್, ಕಾರ್ಯದರ್ಶಿ ಕವಿತಾ ರೋಹನ್, ಜೊತೆ ಕಾರ್ಯದರ್ಶಿ ಕಲ್ಪನಾ ಎಸ್. ರಾವ್, ಸಲಹೆಗಾರರಾದ ಪ್ರಭಾ ಎಂ. ರಾವ್ ಮತ್ತು ಕೋಶಾಧಿಕಾರಿ ಇಂದುಮತಿ ಎ. ರಾವ್ ಹಾಗೂ ಮಹಿಳಾ ಸಮಿತಿ ಸದಸ್ಯರಾದ ವಿಶಾಲಾಕ್ಷಿ ಎ. ಚಂದ್ರಗಿರಿ, ಛಾಯಾ ಯತೀಶ್ ಕುಮಾರ್, ಬಿಂದು ಕುಂದರ್ , ರಮ್ಯಾ ಎಸ್. ಮಾಂಗಾಡ್ , ಶಯಾತ್ರಿ ವಿ. ರಾವ್ ಮತ್ತು ರೇಖಾ ಸಾವಂತ್ ಇವರೆಲ್ಲರೂ ಪತ್ರಿಕಾ ಪ್ರಕಟನೆಯ ಮೂಲಕ ವಿನಂತಿಸಿ ಕೊಂಡಿದ್ದಾರೆ.