
ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ- ತಾರಾ ಆರ್ ಬಂಗೇರ
ಉದರ ಪೋಷಣೆಗಾಗಿ ನಾವೆಲ್ಲಾ ನಮ್ಮ ಹುಟ್ಟೂರನ್ನು ಬಿಟ್ಟು ಮುಂಬೈಗೆ ಬಂದಿದ್ದರೂ ನಮ್ಮ ಇತರ ಕೆಲಸಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಇಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವೆಂದು ತಿಳಿದು ಅದನ್ನು ಮುಂದಿನ ಜನಾಂಗಕ್ಕೂ ಪರಿಚಯಿಸುತ್ತಿರುವುದು ತುಂಬಾ ಸಂತೋಷದ ಸಂಗತಿ” ಹೀಗಂದವರು ಹೆಸರಾಂತ ರಂಗ ನಟಿ, ನಿರ್ದೇಶಕಿ, ಲೇಖಕಿ ತಾರಾ ಆರ್ ಬಂಗೇರ. ಅವರು ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ನವಿ ಮುಂಬಯಿ ಶಾಖಯ ಮಹಿಳಾ ವಿಭಾಗದ ವತಿಯಿಂದ ಫೆಬ್ರವರಿ 1 ರಂದು ವಾಶಿ ಬಸ್ ಡೆಪೋದ ಬಳಿಯ ಗುರವ್ ಜ್ಞಾತಿ ಸಭಾಗೃಹದಲ್ಲಿ ಏರ್ಪಡಿಸಲಾಗಿದ್ದ ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು. ಇಂತಹ ಕಾರ್ಯಕ್ರಮಗಳನ್ನು ಜರಗಿಸುವ ಮೂಲಕ ನಾವು ನಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು ಸಮಾಜಮುಖಿ ಸೇವೆ ಮಾಡಲು ಸಾಧ್ಯ ಎಂದರು.




ಕವಯಿತ್ರಿ, ಲೇಖಕಿ ಡಾ.ಜಿ,ಪಿ ಕುಸುಮಾ ಅವರು ಅಂದಿನ ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದು, ಅವರು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋಗುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಹಿಂದೂ ಧರ್ಮದಲ್ಲಿ ಅರಿಶಿನ ಮತ್ತು ಕುಂಕುಮಕ್ಕೆ ಪವಿತ್ರ ಸ್ಥಾನವಿದೆ ಎಂದರು, ಅವರು ಮುಂದುವರಿಯುತ್ತಾ ಮಹಿಳಾ ವಿಭಾಗದವರು ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಪರಿಸರದ ಮಹಿಳೆಯ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದರು. ಮಹಿಳಾ ವಿಭಾಗದ ಅಧ್ಯಕ್ಷೆ ಜಾನಕಿ ಬಂಗೇರರು ಆ ಬಳಿಕ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ಜರಗಿಸಲಾಗುತ್ತಿದೆ ಎನ್ನತ್ತಾ ಇದಕ್ಕೆ ಸದಸ್ಯೆಯರು ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿರುವ ಸಲುವಾಗಿ ಸಂತೋಷ ವ್ಯಕ್ತಪಡಿಸಿದರು.
ಮಂಡಳಿಯ ಅಂಧೇರಿ ಮುಖ್ಯ ಕಛೇರಿಯ ಮಹಿಳಾ ವಿಭಾಗದ ಅಧ್ಯಕ್ಷೆ ರಾಜೇಶ್ವರಿ ಉಪ್ಪೂರ್ ಕಾರ್ಯಕ್ರಮದಲ್ಲಿ ಮಹಿಳೆಯರ ಉತ್ಸಾಹವನ್ನು ಕಂಡು ಸಂತೋಷ ಪಟ್ಟರಲ್ಲದೆ ಮಂಡಳಿಯ ಎಲ್ಲಾ ನಾಲ್ಕು ಶಾಖೆಗಳು ಪರಸ್ಪರ ಒಗ್ಟಟ್ಟನ್ನು ಕಾಪಾಡಿಕೊಳ್ಳಬೇಕೆಂದರು.
ಉಷಾ ಕರ್ಕೇರ, ತೇಜಸ್ವಿ ಮಲ್ಪೆ ಮತ್ತು ಹೇಮಲತಾ ಕೋಟ್ಯಾನ್ ಪ್ರಾರ್ಥನೆ ಹಾಡಿದರು, ಭಾರತಿ ಮೊಗವೀರ ಮತ್ತು ಪ್ರತಿಭಾ ಸಾಲ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ತೇಜಸ್ವಿ ಮಲ್ಪೆ ವಂದನಾರ್ಷಣೆಗೖದರು. ಅಶ್ವಿನಿ ಕೋಟ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಆ ಬಳಿಕ ಸದಸ್ಯೆಯರು ಅರಿಶಿನ ಮತ್ತು ಕುಂಕುಮವನ್ನು ಹಚ್ಚಿಕೊಳ್ಳುವ ಮೂಲಕ ಪರಸ್ಪರರನ್ನು ಅಭಿನಂದಿಸಿ ಸಂಭ್ರಮಿಸಿದರು. .ಈ ನಿಮಿತ್ತ ಎಲ್ಲರಿಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಯ್ತು.
ಕಾರ್ಯಕ್ರಮದಲ್ಲಿ ಅಂಧೇರಿ ಮುಖ್ಯ ಕಛೇರಿಯ ಮಹಿಳಾ ವಿಭಾಗದ ಅಧ್ಯಕ್ಷೆ ರಾಜೇಶ್ವರಿ ಉಪ್ಪೂರ್, ಸಮಿತಿ ಸದಸ್ಯೆ ರೇಖಾ ಕಾಂಚನ್, ಡೋಂಬಿವಿಲಿ ಶಾಖೆಯ ಮಹಿಳಾ ವಿಭಾಗದ ಅಧ್ಯಕ್ಷೆ ದಮಯಂತಿ ಕೋಟ್ಯಾನ್, ಉಪಾಧ್ಯಕ್ಷೆ ರೋಹಿಣಿ ಕರುಣಾಕರ್, ಕಾರ್ಯದರ್ಶಿ ಗೀತಾ ಮೆಂಡನ್, ಕೋಶಾಧಿಕಾರಿ ಸವಿತಾ ಸಾಲ್ಯಾನ್, ಪುಷ್ಪಾ ;ಉವರ್ಣ, ಉಷಾ ಕರ್ಕೇರ, ಶೋಭಾ ಪುತ್ರನ್, ವಸಯಿ -ವಿರಾರ್ ಶಾಖೆಯ ಮಹಿಳಾ ವಿಭಾದ ಅಧ್ಯಕ್ಷೆ ವೇದಾ ಸಾಲ್ಯಾನ್ ಮತ್ತು ಸಮಿತಿ ಸದಸ್ಯೆ ಚಂದ್ರ ಮೈಂದನ್ ಉಪಸ್ಥಿತರಿದ್ದರು.
ತದನಂತರ ನಡೆದ ಸ್ಪರ್ಧೆಯಲ್ಲಿ ಜಾನಕಿ ಬಂಗೇರ [ಪ್ರಥಮ], ಜಯಾ ವಿಶಾಲ್ ಸಾಲ್ಯಾನ್ [ದ್ವಿತೀಯ] ಬಹುಮಾನ ಪಡೆದುಕೊಂಡರು. ಅಂತರ ಶಾಖೆ ಸಂಗೀಯ ಕುರ್ಚಿ ಸ್ಪರ್ಧೆಯಲ್ಲಿ ನವಿ ಮುಂಬಯಿ ಶಾಖೆಯ ಪಾಯಲ್ ಚಿರಾಗ್ ಪುತ್ರನ್ ಪ್ರಥಮ ಹಾಗೂ ಡೋಂಬಿವಿಲಿ ಶಾಖೆಯ ಸವಿತಾ ಸಾಲ್ಯಾನ್ ದ್ವಿತೀಯ ಹಾಗೂ ಅದೇ ಶಾಖೆಯ ಪುಪ್ಪಾ ಸುವರ್ಣ ತೃತೀಯ ಬಹುಮಾನ ಪಡೆದರು.
ಲಘು ಉಪಾಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡತು.
ವರದಿ: ಸೋಮನಾಥ ಎಸ್.ಕರ್ಕೇರ, 9819321186