
ಡೊಂಬಿವಲಿ 22- ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಸಂಘ ಡೊಂಬಿವಲಿಯ ಲಲಿತಕಲಾ ವಿಭಾಗದ ವತಿಯಿಂದಾ ಫೆಬ್ರವರಿ 23ರಂದು ರವಿವಾರ ಬೆಳಿಗ್ಗೆ 11ರಿಂದ ಡೊಂಬಿವಲಿ ಪೂರ್ವದ ಎಂ ಆಯ್ ಡಿ ಸಿ ಪರಿಸರದ ಶಿವಂ ಹೋಟೆಲ್ ಸಭಾಗೃಹದಲ್ಲಿ ದಾಸಾಗ್ರೇಸರಲ್ಲಿ ಶ್ರೇಷ್ಠರೆನಿಸಿದ ಶ್ರೀಪುರಂದರ ದಾಸರ ಆರಾಧನಾ ಮಹೋತ್ಸವದ ನಿಮಿತ್ತ ಶ್ರೀಪುರಂದರ ದಾಸರ ಭಜನೆ ಹಾಗೂ ಮಕ್ಕಳಿಗಾಗಿ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ಸುಕುಮಾರ ಎನ್ ಶೆಟ್ಟಿ ವಹಿಸಲಿದ್ದು,ಕಾರ್ಯಾಧ್ಯಕ್ಷ ಡಾ.ಇಂದ್ರಾಳಿ ದಿವಾಕರ ಶೆಟ್ಟಿ ಅವರು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಇದೆ ಸಂದರ್ಭದಲ್ಲಿ ದಾಸ ಸಾಹಿತ್ಯದ ಅಭ್ಯಾಸಕ ಹಾಗೂ ಖ್ಯಾತ ಹರಿದಾಸ ಕಾರ್ಕಳದ ಚಂದ್ರಕಾಂತ್ ಭಟ್ ಅವರು ದಾಸ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಭಜನಾ ಸ್ಪರ್ಧೆಯಲ್ಲಿ ಮುಂಬಯಿ ಹಾಗೂ ಉಪನಗರಗಳ ಪ್ರತಿಷ್ಠಿತ ಭಜನಾ ಮಂಡಳಗಳಾದ ಶ್ರೀ ಮಹಾ ವಿಷ್ಣು ಮಂದಿರ ಭಜನಾ ಮಂಡಳಿ ಡೊಂಬಿವಲಿ ಶ್ರೀವರದ ಸಿದ್ಧಿವಿನಾಯಕ ಭಜನಾ ಮಂಡಳಿ ಡೊಂಬಿವಲಿ. ಶ್ರೀಜಗದಂಬಾ ಮಂದಿರ ಭಜನಾ ಮಂಡಳಿ ಡೊಂಬಿವಲಿ. ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ. ಶ್ರೀ ಜೈ ಭವಾನಿಶನೀಶ್ವರ ಮಂದಿರ ಭಜನಾ ಮಂಡಳಿ ಡೊಂಬಿವಲಿ. ಶ್ರೀರಾಧಾಕೃಷ್ಣ ಶನೀಶ್ವರ ಮಂದಿರ ಭಜನಾ ಮಂಡಳಿ ಡೊಂಬಿವಲಿ. ಶಬರಿ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಡೊಂಬಿವಲಿ. ಕನ್ನಡ ಸಂಘ ವರ್ತಕ ನಗರ ಠಾಣೆ. ನವೋದಯ ಕನ್ನಡ ಸೇವಾ ಸಂಘ ಠಾಣೆ. ಶ್ರೀವರದ ಸಿದ್ಧಿವಿನಾಯಕ ಸೇವಾ ಮಂಡಳ ಭೋಪರ್ ರಸ್ತೆ ಡೊಂಬಿವಲಿ. ಶ್ರೀ ಪದ್ಮಶಾಲಿ ಭಜನಾ ಮಂಡಳಿ ಶ್ರೀ ಬಸವೇಶ್ವರ ಭಜನಾ ಮಂಡಳಿ ಧಾರಾವಿ ಮುಂಬಯಿ. ಸ್ವಾವಲಂಬನ ಫ್ರೆಂಡ್ಸ್ ವೆಲ್ಫೇರ್ ಡೊಂಬಿವಲಿ ಹಾಗೂ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಭಜನಾ ಮಂಡಳಿ ಡೊಂಬಿವಲಿ ತಂಡಗಳು ಭಾಗವಹಿಸಲಿವೆ.
ಮಕ್ಕಳ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀಮಹಾವಿಷ್ಢು ಮಂದಿರ ಡೊಂಬಿವಲಿ. ಕನ್ನಡ ಸಂಘ ವರ್ತಕ ನಗರ ಠಾಣೆ. ಸ್ವಾವಲಂಬನ ಫ್ರೆಂಡ್ಸ್ ವೆಲ್ಫೇರ್ ಡೊಂಬಿವಲಿ. ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಚಿಣ್ಣರ ತಂಡ ಡೊಂಬಿವಲಿ .ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ .ಡಿವೈನ್ ಗ್ರೂಪ್ ಡೊಂಬಿವಲಿ. ತುಳು ವೆಲ್ಫೇರ್ ಅಸೋಸಿಯೇಷನ್ ಡೊಂಬಿವಲಿ. ನವೋದಯ ಕನ್ನಡ ಸೇವಾ ಸಂಘ ಠಾಣೆ. ಅಂಧೆರಿ -ಬಾಂದ್ರಾ ಬಂಟ್ಸ ಸಂಘ. ಹಾಗೂ ಶ್ರೀದುರ್ಗಾಂಬಿಕಾ ಮಕ್ಕಳ ತಂಡ ಅಸಲ್ಫಾ ಘಾಟಕೋಪರ ತಂಡಗಳು ಭಾಗವಹಿಸಲಿವೆ. ನಮ್ಮ ದಾಸ ಸಾಹಿತ್ಯದ ವಿಶೇಷವಾಗಿ
ಶ್ರೀ ಪುರಂದರದಾಸರ ಸಾಹಿತ್ಯದ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ನಡೆಯಲಿರುವ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ತಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೋಳಿಸಬೇಕೆಂದು ಕರ್ನಾಟಕ ಸಂಘ ಡೊಂಬಿವಲಿ ಉಪಾಧ್ಯಕ್ಷ ಲೋಕನಾಥ ಎ ಶೆಟ್ಟಿ. ಉಪಕಾರ್ಯಾಧ್ಯಕ್ಷ ದೇವದಾಸ್ ಕುಲಾಲ.ಗೌ.ಕಾರ್ಯದರ್ಶಿ ಪ್ರೋ.ಅಜೀತ ಉಮರಾಣಿ .ಸಹಕಾರ್ಯದರ್ಶಿ ದಿನೇಶ್ ಕುಡ್ವ. ಕೋಶಾಧಿಕಾರಿ ತಾರಾನಾಥ ಎಸ್ ಅಮೀನ್. ಸಹಕೋಶಾಧಿಕಾರಿ ಶ್ರೀಮತಿ ವಿಮಲಾ ವಿ ಶೆಟ್ಟಿ.ಲಲಿತಕಲಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಷ್ಮಾ ಡಿ ಶೆಟ್ಟಿ. ಕಾರ್ಯದರ್ಶಿ ರಮೇಶ್ ಎ ಶೆಟ್ಟಿ ಹಾಗೂ ಸಂಘದ ಸಮಸ್ತ ಕಾರ್ಯಕಾರಿ ಮಂಡಳಿಯ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.