29.3 C
Karnataka
April 4, 2025
ಸುದ್ದಿ

ಭಾರತ್ ಬ್ಯಾಂಕ್ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿ, ವಿಷಾದ ವ್ಯಕ್ತ ಪಡಿಸಿದ ಇಂಗ್ಲಿಷ್ ಪತ್ರಿಕೆ



ಮುಂಬೈಯ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಭಾರತ್ ಬ್ಯಾಂಕ್ ಇದರ ಬಗ್ಗೆ ಫೆಬ್ರವರಿ 20ರಂದು ಮುಂಬೈಯ ಆಂಗ್ಲ ಪತ್ರಿಕೆ ಒಂದರಲ್ಲಿ ಬ್ಯಾಂಕಿನ ಪ್ರತಿಷ್ಠೆಗೆ ಧಕ್ಕೆ ಬರುವಂತಹ ಸುಳ್ಳು, ಹಾಗೂ ಖಂಡನೀಯ ವಾರ್ತೆ ಪ್ರಸಾರವಾಗಿತ್ತು.
ಅ ಸುಳ್ಳು ವಾರ್ತೆಯ ಬಗ್ಗೆ ಇಂದು ರವಿವಾರ 23 ಫೆಬ್ರವರಿಯ ಅದೇ ಪತ್ರಿಕೆಯ ಆರನೇ ಪುಟದಲ್ಲಿ 20 ಫೆಬ್ರವರಿ ರಂದು ಭಾರತ್ ಬ್ಯಾಂಕಿನ ಬಗ್ಗೆ ಮುದ್ರಿಸಿದ ಅಪಪ್ರಚಾರದ ಸುಳ್ಳು ಸುದ್ದಿಯ ಬಗ್ಗೆ ಖೇದವನ್ನು ಪತ್ರಿಕೆಯು ವ್ಯಕ್ತಪಡಿಸಿದೆ.(The Error is Regretted – MID-DAY).

ನಗರದ ಶ್ರೇಷ್ಠ ಕೆಲವು ಸಹಕಾರಿ ಬ್ಯಾಂಕ್ ಗಳಿಗೆ ಆರ್ಥಿಕ ನಿಯಂತ್ರಣ ಹೇರಿದ್ದು ಸರಕಾರಿ ತನಿಖಾ ಏಜನ್ಸಿಗಳು ಶೋಧನೆಯನ್ನು ಮಾಡುತ್ತಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಭಾರತ್ ಬ್ಯಾಂಕ್ ನೀಡಿದ ಸ್ಪಷ್ಟನೆ ಹಾಗೂ ಆರ್ಥಿಕ ಅಂಕಿ ಅಂಶ ಗಳಿಂದಾಗಿ ಮಿಡ್ ಡೆ ಪತ್ರಿಕೆ ಇದೀಗ ತಪ್ಪು ವರದಿಗಾಗಿ ವಿಷಾದವನ್ನು ಪ್ರಕಟಿಸಿದೆ.
ಭಾರತ್ ಬ್ಯಾಂಕ್ ಆರ್ಥಿಕವಾಗಿ ಸಧೃಡವಾಗಿದ್ದು ಕ್ರೇರ್ ಅನುಪಾತವು 13.7% ಇದೆ. ಕ್ರೇರ್ ಸೂಚನೆ ಬ್ಯಾಂಕ್ ಒಂದರ ದೃಢತೆಯ ಸೂಚಿಯಂಕವಾಗಿದೆ.

ಬ್ಯಾಂಕ್ ತನ್ನ 101 ಶಾಖೆಗಳು, 3 ವಿಸ್ತರಣ ಕೌಂಟರ್‌ಗಳು, 104 ಆನ್-ಸೈಟ್ ಎಟಿಎಂ ಕೇಂದ್ರಗಳು ಮತ್ತು 3 ಆಫ್-ಸೈಟ್ ಎಟಿಎಂ ಕೇಂದ್ರಗಳ ಮೂಲಕ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಾದ್ಯಂತ ಸೇವೆಗಳನ್ನು ನೀಡುತ್ತಿದೆ.
ಎಲ್ಲಾ ಸಂಕಷ್ಟಗಳ ನಡುವೆಯೂ ಭಾರತ್ ಬ್ಯಾಂಕ್ ಗ್ರಾಹಕರ ಸೇವೆಯಲ್ಲಿ ಉನ್ನತ ಶ್ರೇಣಿಯ ಗುಣಮಟ್ಟವನ್ನು ಕಾಯ್ದುಕೊಂಡಿದ್ದು, ಬ್ಯಾಂಕ್ ನ ಷೇರುದಾರರ, ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಂಡಿದೆ.
ಭಾರತ್ ಬ್ಯಾಂಕ್ , ಪ್ರಾಮಾಣಿಕ ಮತ್ತು ಪಾರದರ್ಶಕ ಸೇವೆಗೆ ಖ್ಯಾತಿ ಹೊಂದಿದೆ. ಕಾರ್ಯದಕ್ಷರು ಮತ್ತು ನಿರ್ದೇಶಕರುಗಳ ಕಾರ್ಯದಕ್ಷತೆ,
ಹಾಗೂ ಬ್ಯಾಂಕ್ ನ ಸಿಬಂದಿಗಳ ನಗುಮೊಗದ ಸೇವೆಯಿಂದಲೂ ಭಾರತ್ ಬ್ಯಾಂಕ್ , ಪ್ರತಿ ಆರ್ಥಿಕ ವರ್ಷದಲ್ಲಿ ಹಲವಾರು ವರ್ಷಗಳಿಂದ ವಿವಿಧ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯುತ್ತಿದೆ.
ಭಾರತ್ ಬ್ಯಾಂಕ್ ಅಭಿವೃದ್ಫಿ ಹೊಂದುತ್ತಾ ಸಾಗುತ್ತಿರುವಾಗ ಪತ್ರಿಕೆ(mid day) ಯಾವುದೇ ಮಾಹಿತಿಗಳ ಬಗ್ಗೆ ಸತ್ಯತೆ ಅರಿಯದೇ ಸಾರ್ವಜನಿಕರಿಗೆ ಅರುಹಿ, ಪತ್ರಿಕಾ ಧರ್ಮವನ್ನು ಮರೆತಿರುವುದು ನಿಜಕ್ಕೂ ಖಂಡನೀಯ.

Related posts

ಬೊಂಡಾಲ ಬಯಲಾಟ ಸುವರ್ಣ ಸಂಭ್ರಮ ಕರೆಯೋಲೆ ಬಿಡುಗಡೆ

Mumbai News Desk

ಮಹಾರಾಷ್ಟ್ರದಲ್ಲಿ ಈದ್ ಮಿಲಾದ್ ರಜೆ ಸೆ.16 ರ ಬದಲು ಸೆ. 18ಕ್ಕೆ.

Mumbai News Desk

ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನ: ಸಚಿವ ಸೋಮಣ್ಣ

Mumbai News Desk

ಮಂಜೇಶ್ವರ – ಉಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲ.ಕಮಲಾಕ್ಷ ಪಂಜ

Mumbai News Desk

ಬಂಟರ ಸಂಘ ಬಂಟವಾಳ  ಯುವ ವಿಭಾಗದ    ಹಬ್ಬ ದೀಪಾವಳಿ ಸಂಭ್ರಮದ  ಬೊಲ್ಪುದ ಐಸಿರಿ-೨ . ಬಂಟರ   ಸಂಸ್ಕೃತಿಯನ್ನು ಬಿಂಬಿಸಿದೆ:  ಐಕಳ ಹರೀಶ್ ಶೆಟ್ಟಿ

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಡಿ ಕೆ ಶೆಟ್ಟಿ ಆಯ್ಕೆ

Mumbai News Desk