ಮೀರಾರೋಡ್, ಫೆ. 24; ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್, ಮೀರಾ ಗಾಂವ್,ಇಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಬಾಬಾ ರಂಜನ್ ಶೆಟ್ಟಿಯವರ ಮುಂದಾಳತ್ವದಲ್ಲಿ ತಾರೀಕು 26.02.2025 ರ ಬುದವಾರದಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಆ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.
ಬೆಳಿಗ್ಗೆ 6 ರಿಂದ 7 ರುದ್ರಾಭಿಷೇಕ.
ಮದ್ಯಾಹ್ನ 1 ಘಂಟೆಗೆ ಮಹಾಪೂಜೆ.
ಸಾಯಂಕಾಲ 5.30 ರಿಂದ 6.30 ರ ವರೆಗೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.
6.30 ರಿಂದ 7.30 ಕ್ಕೆ ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದಿಂದ ಸಂಗೀತ ರಸಮಂಜರಿ.
ರಾತ್ರಿ 7.30 ಗಂಟೆಯಿಂದ 8.30 ಗಂಟೆಯವರೆಗೆ ಮಕ್ಕಳಿಂದ ಕುಣಿತ ಭಜನೆ.
ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ಬಾಲಕಲಾವಿದರಿಂದ ಬಂಟ್ಸ್ ಫೋರಂನ ಬಾಲಕಲಾವಿದರಿಂದ ಬಿಲ್ಲವರ ಅಸೋಸಿಯೇಶನ್ ಸ್ಥಳೀಯ ಕಛೇರಿ ಮೀರಾ ರೋಡ್ ಇವರಿಂದ
ಬಾಲಕೃಷ್ಣ ಭಜನಾ ಮಂಡಳಿ ಭಯಂದರ್
8.30 ರಿಂದ ರಂಗಪೂಜೆ ಹಾಗು ಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾದಿಗಲೆಲ್ಲರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ,ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸುವ,
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್. ಮೀರಾ ಗಾವ್.
ತಮ್ಮೆಲ್ಲರ ಆಗಮನಾಭಿಲಾಶಿ
ಶ್ರೀ ಸಾಣೂರು ಸಾಂತಿಂಜ ಜನಾರ್ಧನ್ ಭಟ್.