
ಬಿಲ್ಲವರ ಅಸೋಸಿಯಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ದಿನಾಂಕ 22.02.2025 ರಂದು ಶನಿವಾರ ಆಯೋಜಿಸಿದ್ದ ಸಾಮೂಹಿಕ ಶನಿ ಪೂಜೆಯು ಬಹಳ ವಿಜೃಂಭನೆಯಿಂದ ಸಂಪನ್ನ ಗೊಂಡಿತು.
ಅಂದು ಬೆಳಿಗ್ಗೆ ಅರ್ಚಕರಾದ ಈಶ್ವರ್ ಕೋಟ್ಯಾನ್ ಇವರಿಂದ ಗುರು ಪೂಜೆಯು ಜರಗಿತು .

ತದ ನಂತರ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಪ್ರದಾನ ಅರ್ಚಕರಾದ ಸತೀಶ್ ಏನ್ ಕೋಟ್ಯಾನ್ ರವರ ದಿವ್ಯ ಹಸ್ತದಿಂದ ಶ್ರೀ ಶನಿ ದೇವರ ಕಳಶ ಪ್ರತಿಷ್ಠೆ ಜರಗಿತು.

ಪೂಜಾ ಸಂಕಲ್ಪಕ್ಕೆ ಕೃಷ್ಣ ಎಲ್ ಪೂಜಾರಿ ದಂಪತಿಗಳು, ಮಂಟಪ ಶೃಂಗಾರ ನಾರಾಯಣ್ ಪೂಜಾರಿ ಮತ್ತು ಪುರುಷೋತ್ತಮ ಪೂಜಾರಿ ಸಹಕರಿಸಿದರು. ನಂತರ ಮಹಿಳಾ ವಿಭಾಗದವರಿಂದ ಭಜನಾ ಕಾರ್ಯಕ್ರಮ ಜರಗಿತು.
ಮದ್ಯಾಹ್ನ 2 ರಿಂದ ಶ್ರೀ ಶನೀಶ್ವರ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ತಾಳ ಮದ್ದಳೆ ರೂಪದಲ್ಲಿ ಮುಂಬಯಿಯ ನುರಿತ ಕಲಾವಿದರು ಸಾದರ ಪಡಿಸಿದರು.

ಗಿರಿಜಾ ಎಸ್ ಪಾಲನ್, ನವೀನ್ ಮಮತ ಅಂಚನ್ , ರವಿ ಪೂಜಾರಿ,
ರಾಮಚಂದ್ರ ಜೇ ಬಂಗೇರ, ಶ್ರೀಮತಿ ಗುಲಾಬಿ ಬಾಬು ಪೂಜಾರಿ, ಅನಿತ ಸುಮಿತ್ ಸುವರ್ಣ, ಪ್ರವೀಣ ಕೆ ಗುಜರನ್, ರಾಜು ಪೂಜಾರಿ ಮತ್ತು ಸೌಜನ್ಯ ಸತೀಶ್ ಕೋಟ್ಯಾನ್, ಹಾಗೂ ಗಿರಿಜಾ ಕೆ ಅಂಚನ್, ಮತ್ತು ಇತರ ಧಾನಿಗಳಿಂದ ಅನ್ನಧಾನ ಸೇವೆ ಜರಗಿತು.

ಮಾತ್ರವಲ್ಲದೆ ಸ್ಥಳೀಯ ಕಛೇರಿಗೆ ಸುಮಾರು 30 ಸಾವಿರ ಬೆಲೆ ಬಾಳುವ ಪೂಜಾ ಸಾಮಗ್ರಿಗಳನ್ನು ಧಾನ ರೂಪವಾಗಿ ನೀಡಿದ ಮಾಜಿ ಕಾರ್ಯಾಧ್ಯಕ್ಷರಾದ ದೇವರಾಜ್ ಪೂಜಾರಿ ಮತ್ತು ದಂಪತಿಯವರನ್ನು ಪೂಜಾ ಸಂದರ್ಭದಲ್ಲಿ ಗೌರವಿಸಲಾಯಿತು.

ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಉಪಾಧ್ಯಕ್ಷರಾದ ಪುರುಷೋತ್ತಮ್ ಎಸ್ ಕೋಟ್ಯಾನ್, ಸುರೇಶ್ ಕುಮಾರ್, ಗೌ. ಕೋಶಾಧಿಕಾರಿ ರವಿ ಎಸ್ ಸನಿಲ್, ಮತ್ತು ಎಲ್ಲಾ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ತಿತರಿದ್ದರು.

ಪ್ರಾರಂಭದಲ್ಲಿ ಗೌ. ಪ್ರದಾನ ಕೋಶಾಧಿಕಾರಿ ರವಿ ಎಸ್ ಸನಿಲ್, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಎಸ್ ಪಾಲನ್, ಸಚಿನ್ ಎಸ್ ಪೂಜಾರಿ ಮತ್ತು ಕೋಶಾಧಿಕಾರಿ ಆನಂದ್ ಪೂಜಾರಿ, ಗೌ. ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿ, ಮತ್ತು ಪೂಜಾ ಕಮಿಟಿಯ
ಕಾರ್ಯಧ್ಯಕ್ಷರಾದ ಅನ್ನು ಪೂಜಾರಿ ಮತ್ತು ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಡೊಂಬಿವಲಿ ಪರಿಸರದ ಹೆಚ್ಚಿನ ಭಕ್ತರು ಪೂಜೆಗೆ ಆಗಮಿಸಿ ಶನಿ ದೇವರ ಕೃಪೆಗೆ ಪಾತ್ರರಾದರು. ಗೌ. ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು.