
ತನು-ಮನ-ಧನದ ಸಹಕಾರಕ್ಕೆ ಹಳೆ ವಿದ್ಯಾರ್ಥಿಗಳಿಗೆ ಕರೆ
ವಿಜ್ಞಾಪನ ಪತ್ರ
ವಿದ್ಯಾಭಿಮಾನಿಗಳೇ,
ನಮ್ಮ ಊರಿನ ಹೆಮ್ಮೆಯ ಶಾಲೆಗೆ ಶತಮಾನೋತ್ಸವದ ಸಂಭ್ರಮ. ಈಗಾಗಲೇ 105 ವರ್ಷಗಳನ್ನು ದಾಟಿ ಮುನ್ನುಗ್ಗುತ್ತಿರುವ ಶಾಲೆಯಲ್ಲಿ ಸಾವಿರಾರು ಮಕ್ಕಳು ಓದಿ, ಕಲಿತು, ಆಡಿ ನಲಿದು ಹಾಡಿ, ಕುಣಿದು ಜ್ಞಾನದ ಹಸಿವನ್ನು ನೀಗಿಸಿದ ವಿದ್ಯಾದೇಗುಲ ಎನಿಸಿಕೊಂಡಿದೆ. ಮಕ್ಕಳಿಗೆ ಅಕ್ಷರಾನ್ನವನು ಉಣಿಸಿ -ತಣಿಸಿ ಬೆಳೆಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ.
ಅಂದು 1920ರಲ್ಲಿಯೇ ನಮ್ಮ ಊರಿನ ಮಕ್ಕಳು ವಿದ್ಯಾವಂತರಾಗಿ ಬೆಳೆಯಬೇಕು ಎಂಬ ಕನಸು ಕಂಡು ತಮ್ಮ ಹಳೆ ಮನೆಯ ಮಾಳಿಗೆಯಲ್ಲಿಯೇ ಶಾಲೆಯನ್ನು ತೆರೆದು ಜ್ಞಾನದ ದೀಪ ಹಚ್ಚಿದ ಧುರೀಣ ನೆಲ್ಲಿಕಾರು ಹಳೆಮನೆ ಶ್ರೀ ಶ್ರೀವರ್ಮ ಜೈನ್ ಇವರ ದೂರದೃಷ್ಟಿ, ಅಹರ್ನಿಶಿ ಪ್ರಯತ್ನದ ಫಲಶೃತಿಯೇ ನಮ್ಮ ಇಂದಿನ ಶಾಲೆ. ಅಂದಿನಿಂದ ಇಂದಿನವರೆಗೆ ಅದೇಷ್ಟೋ ಸಾವಿರಾರು ಮಕ್ಕಳು ಇಲ್ಲಿ ವಿದ್ಯಾಭ್ಯಾಸಗೈದು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ನಮ್ಮ ಅರಿವು ತಿಳುವಳಿಕೆಗೆ ಬೆಳಕಾದ ಮಾದರಿ ಶಾಲೆ ಎಂದೆನಿಸಿಕೊಂಡ ನಮ್ಮ ಶಾಲೆಯ ಶತಮಾನೋತ್ಸವವನ್ನು ಮನೆ-ಮನಗಳಲ್ಲಿ ಆಚರಿಸಿ,ಊರ ಹಬ್ಬವಾಗಿಸಿ, ನಾಡ ಉತ್ಸವದಂತೆ ಸಂಭ್ರಮಿಸುವುದಕ್ಕಾಗಿ ಶಾಲೆಯ ಅಭಿವೃದ್ಧಿ ಸಮಿತಿ, ಹಳೆವಿದ್ಯಾರ್ಥಿ ಸಂಘ, ಶಾಲಾ ಶತಮಾನೋತ್ಸವ ಸಮಿತಿ ಹಾಗೂ ಊರ ಬಾಂಧವರು ಬಯಸಿದ್ದಾರೆ.
2025ರ ಮೇ ತಿಂಗಳ ದಿನಾಂಕ 3 ಮತ್ತು 4 ಶತಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದು, ಶಾಲೆಯ ಸರ್ವತೋಮುಖ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಗುರುವರೇಣ್ಯರನ್ನು ಗೌರವಿಸುವ “ಗುರುವಂದನ”, ಶಾಲೆಗೆ ತನು-ಮನ-ಧನಗಳಿಂದ ಕೃತಜ್ಞತೆ ಸಲ್ಲಿಸಿದ ಗೌರವಾನ್ವಿತರಿಗೆ ಅಭಿವಂದನ, ಹಳೆವಿದ್ಯಾರ್ಥಿಗಳು, ಶಾಲಾ ಮಕ್ಕಳು ಹಾಗೂ ಆಹ್ವಾನಿತ ಕಲಾತಂಡಗಳಿಂದ ಮನರಂಜನಾ ಕಾರ್ಯಕ್ರಮ ಸಾಂಸ್ಕೃತಿಕ ವೈಭವ ನಡೆಸಬೇಕೆಂದು ತೀರ್ಮಾನಿಸಲಾಗಿದೆ.
ಈ ಸುಸಂದರ್ಭದಲ್ಲಿ ನಾವು ಕಲಿತ ಶಾಲೆಗೆ ಕೃತಜ್ಞತೆ ಸಲ್ಲಿಸುವ ಸುವರ್ಣಾವಕಾಶ ಒದಗಿ ಬಂದಿದೆ. ಶಾಲೆಗೆ ಕೈ ಜೋಡಿಸುವ ಮನಸ್ಸುಗಳು ಈ ಮುಂದಿನ ಸಂಪರ್ಕ ಸಂಖ್ಯೆಗೆ ಕರೆಮಾಡಿ ತಿಳಿಸಬಹುದು. ಮಹಾರಾಷ್ಟ್ರದಲ್ಲಿ ನೆಲೆಸಿರುವ ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳು ಶ್ರೀ ರಾಜವರ್ಮ ಜೈನ್ 9324079237 ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶಾಲೆಯ ಸ್ಥಾಪಕ ಮನೆತನದವರೇ ಆದ ಸಮಾಜಮುಖಿ ವ್ಯಕ್ತಿತ್ವದ ಹಳೆಮನೆ ಶ್ರೀ ಪ್ರವೀಣ್ ಕುಮಾರ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಶ್ರೇಣಿಕ್‌ರಾಜ್ ಜೈನ್ ಇವರ ಮುಂದಾಳತ್ವದಲ್ಲಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಮತ್ತು ಊರವರ ಸಹಕಾರದೊಂದಿಗೆ ಶತಮಾನೋತ್ಸವ ಸಮಿತಿಯ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ.
ತಾವು ಕಲಿತ ಬಾಲ್ಯದ ನೆನಪುಗಳನ್ನು, ಪ್ರಭಾವ ಬೀರಿದ ಶಿಕ್ಷಕರನ್ನು ಕುರಿತಂತೆ ಪದಪುಂಜಗಳಲ್ಲಿ ವ್ಯಕ್ತ ಪಡಿಸುವ, ಶೈಕ್ಷಣಿಕ ಕ್ಷೇತ್ರದ ಆಗುಹೋಗುಗಳ ಪ್ರಚಲಿತ ವಿದ್ಯಾಮಾನಗಳನ್ನು ಕುರಿತ ಬರಹಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಪ್ರಕಟಗೊಳ್ಳಲಿದೆ. ಈ ಶಾಲೆಯಲ್ಲಿ ಓದಿ ಇಂದು ಪರದೇಶ ಹಾಗೂ ಪರಊರಿನಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳಿಂದ ಬರಹವನ್ನು ಆಹ್ವಾನಿಸಲಾಗಿದೆ. 2025 ಮಾರ್ಚ್ 31ರ ಒಳಗೆ nellikarusanthosh92@gmail.com ಅಥವಾ 9449444240 ಈ ಸಂಪರ್ಕ ಸಂಖ್ಯೆಗೆ ಹಳುಹಿಸಿಕೊಡಲು ತಮ್ಮಲ್ಲಿ ವಿನಂತಿಸುತ್ತಿದ್ದೇವೆ. ತಮ್ಮೆಲ್ಲರ ತನು-ಮನ-ಧನದ ಸಹಕಾರವನ್ನು ಪ್ರೀತಿಯಿಂದ ಅಪೇಕ್ಷಿಸುತ್ತೇವೆ.
ಗೌರವಾಧ್ಯಕ್ಷರು ಶತಮಾನೋತ್ಸವ ಸಮಿತಿ ನೆಲ್ಲಿಕಾರು
ಶ್ರೀ ಉಮಾನಾಥ ಎ. ಕೋಟ್ಯಾನ್
ವಿಧಾನ ಸಭಾ ಸದಸ್ಯರು,
ಮೂಲ್ಕಿ -ಮೂಡಬಿದಿರೆ
ಶ್ರೀ ಕೆ. ಅಭಯಚಂದ್ರ ಜೈನ್
ಮಾಜಿಸಚಿವರು
ಕರ್ನಾಟಕ ಸರಕಾರ
ಶ್ರೀಮತಿ ಲತಾ
ಜಿಲ್ಲಾ ನ್ಯಾಯಾಧೀಶರು
ಶಿವಮೊಗ್ಗ
ಶ್ರೀ ಪ್ರವೀಣ್ ಕುಮಾರ್
ಹಳೆಮನೆ ಅಧ್ಯಕ್ಷರು ಶತಮಾನೋತ್ಸವ ಸಮಿತಿ ನೆಲ್ಲಿಕಾರು
9880694592
ಶ್ರೀ ಶ್ರೇಣಿಕ್ ರಾಜ್ ಜೈನ್
ಅಧ್ಯಕ್ಷರು, ಹಳೆವಿದ್ಯಾರ್ಥಿ ಸಂಘ
ನೆಲ್ಲಿಕಾರು
9900364597
ಶ್ರೀ ಉದಯ ಸಾಲಿಯನ್
ಹೋಟೆಲ್ ಮಯೂರ್ ಅಜ್ಮಾಡಿ ಉಪಾಧ್ಯಕ್ಷರು ಶತಮಾನೋತ್ಸವ ಸಮಿತಿ
ಶ್ರೀ ಗೋಪಾಲ್ ಪೂಜಾರಿ
ಜೊತೆ ಕಾರ್ಯದರ್ಶಿ
ಶತಮಾನೋತ್ಸವ ಸಮಿತಿ
ಶ್ರೀ ಉದಯ ಪೂಜಾರಿ ಬೊಬ್ಬಳ
ಜೊತೆ ಕಾರ್ಯದರ್ಶಿ
ಶತಮಾನೋತ್ಸವ ಸಮಿತಿ
ಶ್ರೀ ರಘುವೀರ್ ಹೆಗ್ಡೆ
ಮುಂಬೈ ಸಂಚಾಲಕರು
ಶ್ರೀ ರಾಜವರ್ಮ ಜೈನ್
ಮುಂಬೈ ಸಂಚಾಲಕರು
ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು
ಡಾ. ಶೀತಲ್ ಕುಮಾರ್ ಎನ್
ಮಾನವಿ ನೆಲ್ಲಿಕಾರು ಗೌರವಾಧ್ಯಕ್ಷರು ಹಳೆವಿದ್ಯಾರ್ಥಿ ಸಂಘ
ಶ್ರೀ ತಿಲಕ್ ಪ್ರಸಾದ್ ಜಿ.
ಗೌರವಾಧ್ಯಕ್ಷರು
ಹಳೆವಿದ್ಯಾರ್ಥಿ ಸಂಘ
ಶ್ರೀ ಪದ್ಮಪ್ರಸಾದ್ ಆಗಮ
ಉಪಾಧ್ಯಕ್ಷರು ಹಳೆವಿದ್ಯಾರ್ಥಿ ಸಂಘ
8277772677
ಶ್ರೀ ಹರೀಶ್ ಆಚಾರ್ಯ
ಕೋಶಾಧಿಕಾರಿ, ಶತಮಾನೋತ್ಸವ ಸಮಿತಿ
9449728920
ಶ್ರೀ ಎನ್. ಬಿ ಶಬ್ಬಿರ್
ಪ್ರಧಾನ ಕಾರ್ಯದರ್ಶಿ ಹಳೆವಿದ್ಯಾರ್ಥಿ ಸಂಘ ನೆಲ್ಲಿಕಾರು
9901702062
ಶ್ರೀ ಸುವೀರ್ ಜೈನ್
ಸಂಚಾಲಕರು
ಶತಮಾನೋತ್ಸವ ಸಮಿತಿ
ಶ್ರೀ ಪ್ರದೀಪ್ ಪುತ್ರನ್
ಪ್ರಚಾರ ಸಮಿತಿ
9482512063
ಶ್ರೀ ಹರೀಶ್ ಶೆಟ್ಟಿ
ಅಧ್ಯಕ್ಷರು ಹಾಗೂ ಸರ್ವಸದಸ್ಯರು
ಎಸ್ ಡಿ ಎಂ ಸಿ ನೆಲ್ಲಿಕಾರು
ಶ್ರೀ ಹರೀಶ್ ಕೆ. ಎಂ
ಮುಖ್ಯ್ಯೋಪಾಧ್ಯಯರು ಹಾಗೂ ಶಿಕ್ಷಕ ವೃಂದ ಸ. ಹಿ. ಪ್ರಾ. ಶಾಲೆ
8861259388
ಪೋಷಕರು, ವಿದ್ಯಾಭಿಮಾನಿಗಳು ಹಾಗೂ ಗ್ರಾಮಸ್ಥರ ಸವಿನಯ ಆಮಂತ್ರಣ
ಶತಮಾನೋತ್ಸವ ಸಮಿತಿ ಕೆನರಾಬ್ಯಾಂಕ್ ನಾರಾವಿ
A/c No. 110226604810
IFSC-CNRB0010171