
ಗಣೇಶಪುರಿ ಫೆ 28: ಹೋಟೆಲ್ ಉದ್ಯಮಿಗಳ ಅನ್ನದಾತರಾದ ಭಗವಾನ್ ಶ್ರೀ ನಿತ್ಯಾನಂದರ ಸಮಾಧಿ ಕ್ಷೇತ್ರವಾದ ಗಣೇಶಪುರಿಯಲ್ಲಿ ಕಲ್ಯಾಣ್, ಉಲ್ಲಾನಗರ, ಅಂಬರ್ನಾಥ, ಶಹಾಡ್, ಟಿಟ್ವಾಲ, ಬದ್ಲಾಪುರ ಪರಿಸರದ ಹೋಟೆಲ್ ಉದ್ಯಮಿಗಳು ಒಂದಾಗಿ ಪ್ರತಿವರ್ಷದಂತೆ ಈ ವರ್ಷವೂ ಭಂಡಾರ ಸೇವೆಯನ್ನು ಭಕ್ತಿಯಿಂದ ನೀಡಿದರು.
1972 ರಲ್ಲಿ ಈ ಪರಿಸರದ ಹೋಟೆಲ್ ಉದ್ಯಮಿಗಳು ಶ್ರೀ ಸ್ವಾಮಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್, ಕಲ್ಯಾಣ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಈ ಸಂಸ್ಥೆಯ ಮೂಲಕ ಉದ್ಯಮಿಗಳು ಸೇರಿ ಗಣೇಶಪುರಿಯಲ್ಲಿ ಫೆಬ್ರವರಿ 28 ರಂದು ಭಂಡಾರ ಸೇವೆಯನ್ನು ಪ್ರಾರಂಭಿಸಿ ಭಗವಾನ್ ಶ್ರೀ ನಿತ್ಯಾನಂದರ ದರುಶನವನ್ನು ಪಡೆಯುತ್ತಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಫೆಬ್ರವರಿ 28 ರ ಶುಕ್ರವಾರದಂದು ಬೆಳಿಗ್ಗೆ ರಮೇಶ್ ಶೆಟ್ಟಿ ಯವರ ಹೋಟೆಲ್ ರಾಮ್ ದೇವ್ ನಲ್ಲಿ ಉಪಹಾರ ಸೇವಿಸಿ ಶ್ರೀ ಸ್ವಾಮಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ ಸುಮಾರು 8 ಬಸ್ಸುಗಳ ಮೂಲಕ ತುಳು- ಕನ್ನಡಿಗರು, ಮರಾಠಿಗರು ಸೇರಿ ಭಜನೆ ಯನ್ನು ಹಾಡುತ್ತ ಗಣೇಶಪುರಿಗೆ ಪ್ರಯಾಣ ಬೆಳೆಸಿದರು.

ಗಣೇಶಪುರಿಯಲ್ಲಿ ಭಂಡಾರ ಸಭಾಗೃಹದಲ್ಲಿ ಅನ್ನಪೂರ್ಣೇಶ್ವರಿಯ ಪೂಜೆಯನ್ನು ನೆರವೇರಿಸಿ ಭಗವಾನ್ ಶ್ರೀ ನಿತ್ಯಾನಂದರ ಸಮಾಧಿ ಮಂದಿರದಲ್ಲಿ ಭಜನೆಯನ್ನು ಹಾಡಿ, ಮಧ್ಯಾಹ್ನದ ಮಹಾಪೂಜೆಯ ಮೊದಲು ಮುಖ್ಯ ಪಾದುಕಾ ಪೂಜೆಯನ್ನು ಗುಂಡಿಬೈಲು ಸತೀಶ್ ಶೆಟ್ಟಿ ಮತ್ತು ಸವಿತಾ ಶೆಟ್ಟಿ ದಂಪತಿ, ನಾಗಕಿರಣ್ ಶೆಟ್ಟಿ ಮತ್ತು ಕವಿತಾ ಶೆಟ್ಟಿ ದಂಪತಿ ಮತ್ತು ಜಯ ಶೆಟ್ಟಿ ದಂಪತಿ ನೆರವೇರಿಸಿದರು ತದ ನಂತರ ಮಹಾಪೂಜೆ ನಡೆದು ಎಲ್ಲಾ ಭಕ್ತರಿಗೆ ಭಂಡಾರವನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳು, ಶ್ರೀ ಸ್ವಾಮಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಗುರುದೇವ್ ಭಾಸ್ಕರ್ ಎಸ್. ಶೆಟ್ಟಿ, ರಮೇಶ್ ಡಿ. ಶೆಟ್ಟಿ, ಜಗನ್ನಾಥ ಸಿ. ಶೆಟ್ಟಿ, ಚಂದ್ರಕಾಂತ ಅರ್. ಶೆಟ್ಟಿ, ಸುಂದರ್ ಎನ್. ಶೆಟ್ಟಿ , ಸುಧಕಾರ್ ಎಂ ಶೆಟ್ಟಿ, ಸಂತೋಷ್ ಬಿ. ಶೆಟ್ಟಿ, ಪ್ರಕಾಶ್ ಅರ್. ಶೆಟ್ಟಿ, ಪ್ರವೀಣ್ ವಿ.ಶೆಟ್ಟಿ ಸುಭೋದ್ ಡಿ. ಭಂಡಾರಿ, ಸುರೇಶ್ ಡಿ. ಶೆಟ್ಟಿ, ಸಂತೋಷ್ ಎಚ್. ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ಅಧಯಕ್ಷರಾದ ರಾಜೇಶ್ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು, ಬಂಟರ ಸಂಘ ಭಿವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸುಬೋಧ್ ಭಂಡಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಉಲ್ಲಾಸನಗರ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷ ರಾದ ಪ್ರಕಾಶ್ ಅರ್. ಶೆಟ್ಟಿ ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.