
ಡೊಂಬಿವಲಿ – ಹೊರನಾಡ ಕನ್ನಡಿಗರ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಸಂಘ ಡೊಂಬಿವಲಿಯ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ ಹಾಗೂ ವೈದ್ಯಕೀಯ ವಿಚಾರ ಸಂಕಿರಣ ಮಾರ್ಚ್ 9ರಂದು ರವಿವಾರ ಸಂಜೆ 4ಘಂಟೆಗೆ ಡೊಂಬಿವಲಿ ಪೂರ್ವದ ಎಂ ಆಯ್ ಡಿ ಸಿ ಪರಿಸರದ ಶಿವಂ ಹೋಟೆಲ್ ಸಭಾಗೃಹದಲ್ಲಿ ವೈಶಿಷ್ಟ್ಯಪೂರ್ಣವಾಗಿ ಜರುಗಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷ ಡಾ.ದಿವಾಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದು ,ಅತಿಥಿಗಳಾಗಿ ಕನ್ನಡ ಭವನ ಎಜುಕೇಷನ್ ಸೊಸೈಟಿ,ಫೋರ್ಟ್ ಇದರ ಹೈಸ್ಕೂಲ್ ಹಾಗೂ ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅಮೃತ ಅಜಯ ಶೆಟ್ಟಿ ಹಾಗೂ ಖ್ಯಾತ ಪ್ರಕೃತಿ ಹಾಗೂ ಯೋಗ ಚಿಕಿತ್ಸಾ ತಜ್ಞೆ ಡಾ. ರಶ್ಮ ಮೋಹಿತ ಶೆಟ್ಟಿ ಅಗಮಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸಿಕೊಂಡ ಶ್ರೀಮತಿ ಶ್ರೀದೇವಿ ಹಾಗೂ ರತ್ನಾಕರ ಕೆ ಅತಿಕಾರಿ ದಂಪತಿಗಳ ಸನ್ಮಾನ ,ಡಾ. ರಶ್ಮ ಮೋಹಿತ ಶೆಟ್ಟಿ ಅವರಿಂದ ವೈದ್ಯಕೀಯ ವಿಚಾರ ಸಂಕಿರಣ,ಸಂಘದ ಮಹಿಳಾ ವಿಭಾಗದ ಸದಸ್ಯೆಯರಿಂದ ವೈವಿಧ್ಯಮಯ ನೃತ್ಯ ಹಾಗೂ ಕಿರು ಹಾಸ್ಯ ಪ್ರಹಸನ ಕಾರ್ಯಕ್ರಮಗಳು ಜರುಗಲಿದ್ದು ಸಮಸ್ತ ಕನ್ನಡ ಮನಸ್ಸುಗಳು ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ಸುಕುಮಾರ ಎನ್ ಶೆಟ್ಟಿ. ಉಪಾಧ್ಯಕ್ಷ ಲೋಕನಾಥ ಎ ಶೆಟ್ಟಿ. ಉಪಕಾರ್ಯಾಧ್ಯಕ್ಷ ದೇವದಾಸ ಎಲ್.ಕುಲಾಲ್.ಗೌ.ಕಾರ್ಯದರ್ಶಿ ಪ್ರೋ.ಅಜಿತ್ ಉಮರಾಣಿ.ಸಹ ಕಾರ್ಯದರ್ಶಿ ದಿನೇಶ್ ಬಿ. ಕುಡ್ವ.ಕೋಶಾಧಿಕಾರಿ ತಾರಾನಾಥ ಎಸ್ ಅಮಿನ್.ಸಹ ಕೋಶಾಧಿಕಾರಿ ಶ್ರೀಮತಿ ವಿಮಲಾ ವಿ.ಶೆಟ್ಟಿ. ಮಹಿಳಾ ವಿಭಾಗದ
ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಎಲ್ ಶೆಟ್ಟಿ. ಉಪಕಾರ್ಯಾಧ್ಯಕ್ಷೆ ಶ್ರೀಮತಿ ಯೋಗಿನಿ ಎಸ್ ಶೆಟ್ಟಿ. ಕಾರ್ಯದರ್ಶಿ ಶ್ರೀಮತಿ ಮಧುರಿಕಾ ಬಂಗೇರಾ.ಸಹ ಕಾರ್ಯಾಧ್ಯಕ್ಷ ಶ್ರೀಮತಿ ಸರೋಜ ಟಿ ರೈ.ಕೋಶಾಧಿಕಾರಿ ಶ್ರೀಮತಿ ದೇವಿಕಾ ಸಾಲಿಯಾನ್.ಸಹ ಕೋಶಾಧಿಕಾರಿ ಶ್ರೀಮತಿ ಜಯಂತಿ ಜೆ ಶೆಟ್ಟಿ ಹಾಗೂ ಸಂಘದ ಸಮಸ್ತ ಕಾರ್ಯಕಾರಿ ಮಂಡಳಿಯ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ