September 6, 2026
Mumbai News Kannada
ಪ್ರಕಟಣೆ

ಮಾ. 9, ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ಮಹಿಳಾ ಸಂಪದ ಸಂಯೋಜನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ





ಥಾಣೆ;  ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ, ಮಹಿಳಾ ಸಂಪದ ಸಂಯೋಜನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮನೋರಂಜನಾ ಕಾರ್ಯಕ್ರಮವು ಮಾರ್ಚ್ 9 ರ ರವಿವಾರದಂದು  ಥಾಣೆ ಪಶ್ಚಿಮದ ಶಿವಾಜಿ ಪಥ, ಜಗದೀಶ್ ಬುಕ್ ಡೀಪೊದ ಹತ್ತಿರದ ಸಂತೋಷಿ ಮಾತ ಸಭಾಗೃಹದಲ್ಲಿ ಅಪರಾಹ್ನ 3.30 ಗಂಟೆಗೆ ಸರಿಯಾಗಿ ಸಂಘದ ಅಧ್ಯಕ್ಷರಾದ ಸಿ.ಎ.ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾದ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ, ಗೌರವ ಅತಿಥಿಯಾಗಿ ಉದ್ಯಮಿ ಸಮಾಜ ಸೇವಕಿ ಯಶೋದ ಎನ್. ಪೂಜಾರಿ, ಅತಿಥಿಯಾಗಿ ಸೆಂಟ್ ಲಾರೆನ್ಸ್ ಇಂಟರ್ನ್ಯಾಷನಲ್ ಸ್ಕೂಲ್ ನ ಶಿಕ್ಷಕಿ ಸರೋಜ ಎಸ್.ಅಮಾತಿ , ಅತಿಥಿಯಾಗಿ ಶಿಕ್ಷಣ ಕಾರ್ಯಕ್ರಮದ ನೇತೃತ್ವ ವಹಿಸಿದ ರೂಪ ಪಿ. ಬಿಲ್ಲವ ಭಾಗವಹಿಸಲಿದ್ದಾರೆ.
ಈ ಸಂದರ್ಭ ಸಂಘದ  ಪ್ರಥಮ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಸಮಾಜ ಸೇವಕಿ, ಸಂಘದ ಪೋಷಕರಾದ ಗುಲಾಬಿ ಬಾಬು ಪೂಜಾರಿ ಹಾಗೂ ಜಲಜ ಅಣ್ಣಯ್ಯ ಕೋಡಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ವಿಭಾಗದ ಸದಸ್ಯರಿಂದ ಮತ್ತು ಮಕ್ಕಳಿಂದ ನೃತ್ಯ ವಿವಿಧ ವಿನೋದಾವಳಿ ನಡೆಯಲಿದೆ. ಕುಂದಾಪುರ ಬಿಲ್ಲವ ಸೇವಾ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಸಂಘದ ಗೌರವ ಅಧ್ಯಕ್ಷರಾ್ ಸುರೇಶ್ ಪೂಜಾರಿ, ಅಧ್ಯಕ್ಷ ಸಿ.ಎ ಪೂಜಾರಿ, ಉಪಾಧ್ಯಕ್ಷರಾದ ಎಸ್.ಕೆ.ಪೂಜಾರಿ, ಬೇಬಿ ರಂಗ ಪೂಜಾರಿ, ಗೌ.ಪ್ರ ಕಾರ್ಯದರ್ಶಿ ಸುಧಾಕರ ಸಿ.ಪೂಜಾರಿ, ಗೌ. ಕೋಶಾಧಿಕಾರಿ ಭಾಸ್ಕರ ಕೆ.ಪೂಜಾರಿ, ಯುವ ಸಂಪದ ಸಮಿತಿಯ ಕಾರ್ಯಾಧ್ಯಕ್ಷ ಉದಯ ಪೂಜಾರಿ, ಧಾರ್ಮಿಕ ಮತ್ತು ಸಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಪೂಜಾರಿ, ಮಹಿಳಾ ಸಂಪದ ಕಾರ್ಯಾಧ್ಯಕ್ಷೆ ಸುಶೀಲಾ ಸುರೇಶ್ ಪೂಜಾರಿ, ಉಪಕಾರ್ಯಾಧ್ಯಕ್ಷೆ ಗಿರಿಜ ಕೆ.ಹೊಕ್ಕೊಳ್ಳಿ, ಸುಮತಿ ಎಸ್. ಪೂಜಾರಿ, ಮಹಿಳಾ ಸಂಪದ ಕಾರ್ಯದರ್ಶಿ ಶಾರದಾ ಬಾಬು ಪೂಜಾರಿ, ಜತೆ ಕಾರ್ಯದರ್ಶಿ ವಿಮಲಾ ಎಸ್ . ಪೂಜಾರಿ, ಸುಜಾತ ಪೂಜಾರಿ ಹಾಗೂ ಅಡಳಿತ ಮಂಡಳಿ, ಉಪ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಶ್ರೀ ಮಹಾವಿಷ್ಣು ಮಂದಿರ: ಜುಲೈ 26 ರಂದು 49ನೇ ವಾರ್ಷಿಕ ಮಹಾಸಭೆ

Mumbai News Desk

ಮಾ.3, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿ ಕುಂದರಂಜನಿ – 2024

Mumbai News Desk

ಮಾ.7: ಸಸಿಹಿತ್ಲು ಭಗವತಿಗೆ ಕಲಾಸೌರಭದ ಸ್ವರ ಸಂಗೀತಾಭಿಷೇಕಂ

Mumbai News Desk

ಪುನೀತ್ ನ ಚಿಕಿತ್ಸೆ ನೆರವಿಗಾಗಿ ಮನವಿ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಏಪ್ರಿಲ್ 1 ರಿಂದ 8 ರವರೆಗೆ ಜಾತ್ರೆ; ಏಪ್ರಿಲ್ 7 ರಂದು ರಥೋತ್ಸವ

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk