
ಅವಿಭಜಿತ ತುಳುನಾಡಿನ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ದೇಶದ ಅತಿ ಪುರಾತನ, ಐತಿಹಾಸಿಕ ಮತ್ತು ಚಾರಿತ್ರಿಕ ಮಹತ್ವದ ದೇವಾಲಯಗಳಲ್ಲೊಂದು.ಕ್ರಿಸ್ತಶಕ ಹತ್ತನೇ ಶತಮಾನ ಪೂರ್ವದ, ಅತಿ ವಿಶಿಷ್ಟ ಮತ್ತು ಅಪೂರ್ವವೆಂಬ ಹೆಗ್ಗಳಿಕೆ ಹೊಂದಿರುವ, ಭಾರತದ ಹಿಂದೂ- ಭೌದ್ದ ವಾಸ್ತು ವಿಶೇಷದ ಪ್ರಚ್ಚನ್ನ ಸಾಕ್ಷಿಯಾಗಿರುವ ಗಜಪೃಷ್ಠ ಶೈಲಿಯ ( Elephant back) ಈ ದೇವಸ್ಥಾನ ಇಡಿಯ ಭಾರತದಲ್ಲೆ ಈ ಶೈಲಿಯ ಅಪರೂಪದ ದೇವಾಲಯವಾಗಿದೆ.
ಇಂತಹ ಮಧೂರು ಮದನಂತೇಶ್ವರ-ಸಿದ್ಧಿವಿನಾಯಕ ದೇವಾಲಯ ಸುಮಾರು ಮೂವತ್ತು ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಕಂಗೊಳಿಸುತ್ತಿದೆ. ಈಗ, ಮಾರ್ಚ್ 26 ರಿಂದ ಏಪ್ರಿಲ್ 7ರ ತನಕ ಬ್ರಹ್ಮಕಲಶಾದಿ ಸಕಲ ಧಾರ್ಮಿಕ ವಿಧಿ-ವಿಧಾನಗಳ ಮೂಲಕ, ಈ ಮಹಾದೇವಾಲಯವು ಸಮಸ್ತ ಭಕ್ತ ಸಮೂಹಕ್ಕೆ ಸಮರ್ಪಣೆಗೆ ಸಿದ್ಧವಾಗಿದೆ.
ದೈವ-ದೇವಸ್ಥಾನ ಪುನರುತ್ಥಾನದ ‘ಮೇರು’ ವಾಗಿ,
ಸಕಲ ಸಾಮಾಜಿಕ-ಶೈಕ್ಷಣಿಕ ಸಜ್ಜನ ಕಾರ್ಯಗಳ ಗುರು’ವಾಗಿ ದೀನ-ದುಃಖಿತರ ಉನ್ನತಿಗಾಗಿ ತಾಯಿಮಮತೆಯಿಂದ ಕೈಜೋಡಿಸಿದ ‘ಮಹಾ ದಾನಬೀರು’ ವಾಗಿ ಹೊಳೆವ ನಮ್ಮ ಹೆಮ್ಮೆಯ ಮುಂಬಯಿಯ ತುಳು-ಕನ್ನಡಿಗ ಕುಳೂರು-ಕನ್ಯಾನ ಸದಾಶಿವ ಶೆಟ್ಟಿ ಅವರ ಕೋಟ್ಯಂತರ ರೂ.ಗಳ ಮಹಾ ದೇಣಿಗೆಯಿಂದ ದೇವಾಲಯದ ಪ್ರವೇಶ ಗೋಪುರ ಮತ್ತು ರಾಜಾಂಗಣ ನಿರ್ಮಾಣಗೊಂಡು ಸಮರ್ಪಣೆಗೊಳ್ಳುತ್ತಿರುವುದು ನಮಗೆಲ್ಲ ಧನ್ಯತೆಯನ್ನು ತರಲಿದೆ. ಸದಾಶಿವ ಶೆಟ್ಟಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಈ ಐತಿಹಾಸಿಕ ಬ್ರಹ್ಮಕಲಶೋತ್ಸವ ತುಳುನಾಡು ಮಾತ್ರವಲ್ಲ, ಹೊರನಾಡಿನ ನಮಗೆಲ್ಲ ಹೆಮ್ಮೆ ಹಾಗೂ ಸಂತಸ ನೀಡುವ ಸಂಗತಿಯಾಗಿದೆ.
ಈ ಪುಣ್ಯ ಕಾರ್ಯಕ್ಕೆ ಈಗಾಗಲೇ ಮುಂಬೈ ಸಮಿತಿ ರಚನೆಗೊಂಡಿದೆ,ಮುಂಬಯಿಯ ಸರ್ವ ಆಸ್ತಿಕರು ಮತ್ತು ಮಧೂರು ಕ್ಷೇತ್ರ ಭಕ್ತರ ಸಭೆಯನ್ನು ಮಾ. 13, ಗುರುವಾರ ಸಂಜೆ 6.30ಕ್ಕೆ, ಕುರ್ಲಾ ಬಂಟರ ಸಂಘದ ಅನೆಕ್ಸ್ ಹಾಲ್‌ನಲ್ಲಿ , ಮಧೂರು ಮದನಂತೇಶ್ವರ ಮಹಾಗಣಪತಿ ದೇವಸ್ಥಾನದ ಗೌರವಾಧ್ಯಕ್ಷ ಕುಳೂರು-ಕನ್ಯಾನ ಸದಾಶಿವ ಶೆಟ್ಟಿ ಮತ್ತು ಅದ್ವಿತೀಯ ಸಂಘಟಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ ಐಕಳ ಹರೀಶ್ ಶೆಟ್ಟಿ,, ಹಾಗೂ ಮುಂಬಯಿ ಸಮಿತಿಯ ಅಧ್ಯಕ್ಷ ಬಿ.ಕೆ. ಮಧೂರು ಇವರ ಘನ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ,
ಬ್ರಹ್ಮಕಲಶ ವೈಭವ ಪೂರಿತವಾಗಿ ನಡೆಯುವುದರ ಮೂಲಕ, ದೇವಳದ ಪ್ರವೇಶ ಗೋಪುರ – ರಾಜಾಂಗಣ ಸಮರ್ಪಣೆ, ಮೂಡಪ್ಪ ಸೇವೆ, ಬ್ರಹ್ಮಕಲಶೋತ್ಸವ ಮತ್ತು ಧಾರ್ಮಿಕ-ಸಾಂಸ್ಕೃತಿಕ ಉತ್ಸವಗಳ ಕುರಿತು ಮುಂಬಯಿ ಭಕ್ತರ ಸಲಹೆ-ಸೂಚನೆಗಳನ್ನು ನಾವು ಅಪೇಕ್ಷಿಸುತ್ತೇವೆ. ಜೊತೆಗೆ, ಈ ಐತಿಹಾಸಿಕ ದೇವಾಲಯ ಪುನರ್ ನಿರ್ಮಾಣ ಹಾಗೂ ಧರ್ಮೋತ್ಥಾನ ಕಾರ್ಯಕ್ಕೆ ನಿಮ್ಮ ಉದಾರ ಸಹಾಯದ ಸಂಕಲ್ಪವನ್ನೂ ವಿನಂತಿಸುತ್ತೇವೆ.
ನೀವು ಇದನ್ನು ವೈಯಕ್ತಿಕ ಆಹ್ವಾನವಾಗಿ ಪರಿಗಣಿಸಿ, ಈ ಸಭೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು
ಮುಂಬಯಿ ಸಮಿತಿಯ ಗೌ/ಪ್ರ/ ಕಾರ್ಯದರ್ಶಿ.ಕಳ್ಳಿಗೆ ದಯಾಸಾಗರ್ ಚೌಟ, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು,ಕಾರ್ಯದರ್ಶಿಗಳು,ಕೋಶಾಧಿಕಾರಿಗಳು
ಎಲ್ಲ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು
ಶ್ರೀ ಮಧೂರು ಮದನಂತೇಶ್ವರ-ಸಿದ್ಧಿವಿನಾಯಕ ದೇವಾಲಯ, ಮುಂಬಯಿ ಸಮಿತಿ ಸರ್ವ ಸದಸ್ಯರು, ಆದರಪೂರ್ವಕವಾಗಿ ವಿನಂತಿಸಿದ್ದಾರೆ.