
ಮರಾಠಿ ಮಣ್ಣಿನಲ್ಲಿ ಕನ್ನಡಿಗರು ನಮ್ಮತನವನ್ನು ಸಾಧಿಸಿದವರು – ಶ್ರೀಕಾಂತ್ ಶೆಟ್ಟಿ ಕಾರ್ಕಳ,
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ : ಕನಸ್ಸನ್ನು ಕಂಡು ಅದನ್ನು ನನಸಾಗಿಸಿದವರು ಇಲ್ಲಿನ ಕನ್ನಡಿಗರು. ಕನ್ನಡಿಗರ ಚರಿತ್ರೆಯನ್ನು ಕೇಳಿದಾಗ ಮೈ ರೋಮಾಂಜನಗೊಳ್ಳುತ್ತಿದೆ. ಇಡೀ ಬಾರತಕ್ಕೆ ಪ್ರೇರಣೆ ನೀಡುವ ಶಕ್ತಿ ಕನ್ನಡಿಗರದ್ದು. ಶ್ರಮ ಜೀವಿಗಳಾದ ನಾವು ಸಾಧನೆಯನ್ನು ಮಾಡುದರೊಂದಿಗೆ ಮರಾಠಿ ಮಣ್ಣಿನಲ್ಲಿ ಕನ್ನಡಿಗರು ನಮ್ಮತನವನ್ನು ಉಳಿಸುತ್ತಾ ಬಂದಿದ್ದೇವೆ ಎಂದು ಪ್ರಖರ ರಾಷ್ಟ್ರವಾದಿ ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ನುಡಿದರು.
ಗೋರೆಗಾಂವ್ ಕರ್ನಾಟಕ ಸಂಘ 66ನೆಯ ನಾಡಹಬ್ಬ ಸಮಾರಂಭ ಹಾಗೂ ವಿಚಾರಗೋಷ್ಠಿ ಸಮಾರಂಭವು ಮಾರ್ಚ್ 9 ರಂದು ಮಲಾಡ್ ಪಶ್ಚಿಮ ಎಸ್ ವಿ ರೋಡ್ ನ ಬಜಾಜ್ ಹಾಲ್ ಇಲ್ಲಿ ಜರಗಿದ್ದು ನಾಡಹಬ್ಬ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನ್ನು ಮುಂದುವರಿಸುತ್ತಾ ಇಂದು ನನ್ನ ಸೌಭಾಗ್ಯ ಅಂತ ಹೇಳ ಬೇಕು. ಇಲ್ಲಿ ನಾನು ಕಲಿತ ಶಾಲೆಯ ಮಕ್ಕಳಿಗೆ ನನ್ನ ಕೈಯಿಂದ ವಿದ್ಯಾರ್ಥಿ ವೇತನ ನೀಡುವ ಅವಕಾಶ ನನಗೆ ದೊರಕಿದೆ. ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಬೇರೆ ಬೇರೇ ಕ್ಷೇತ್ರಗಳಲ್ಲಿ ಬದುಕನ್ನು ಕಟ್ಟಿ ಸಾಧನೆ ಮಾಡಿದವರು ಅನೇಕರು, ಇದು ಗೊರೆಗಾಂವ್ ಕರ್ನಾಟಕ ಸಂಘದ ಸಾಧನೆಯೂ ಹೌದು. ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಗೊರೆಗಾಂವ್ ಕರ್ನಾಟಕ ಸಂಘದಿಂದ ನಡೆಯುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳ ಭ್ರಹ್ಮ ಕಲಷ ನಡೆಯುತ್ತಿದ್ದು ಇದಕ್ಕೆ ಮುಂಬಯಿಗರ ಕೊಡುಗೆ ಅಪಾರ. ಇಂದು ನಮ್ಮ ಮಕ್ಕಳು ಸಮಾಜ ಮುಖಿಯಾಗಿ ಬೆಳೆಯಬೇಕಾಗಿದೆ. ಇಂದಿನ ಶಿಕ್ಷಣ ಪದ್ದತಿ ಹಾಗೂ ನಾವು ಮಕ್ಕಳನ್ನು ಬೆಳೆಸುವ ರೀತಿ ಇದಕ್ಕೆ ಮಾರಕವಾಗುತ್ತಿದೆ. ಬಾಷೆ ಉಳಿದಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರ ಉಳಿಯಲು ಸಾಧ್ಯ. ಇದು ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದರು..

ಸಂಘದ ಅಧ್ಯಕ್ಷರಾದ ವಿಶಾಲಾಕ್ಷಿ ಉಳುವಾರ ಸ್ವಾಗತಿಸಿದರು.
ವೇದಿಕೆಯಲ್ಲಿ ಗೌರವ ಅತಿಥಿಗಳಾದ ಬಂಟರ ಸಂಘ ಮುಂಬಯಿಯ ವಸಯಿ–ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ, ಹೋಟೆಲ್ ಉದ್ಯಮಿ, ಸಮಾಜಸೇವಕ ಸಂತೋಷ್ ಪಿ ಶೆಟ್ಟಿ, ಕೋರಿಯೋಗ್ರಾಫರ್ ತುಷಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ವಿಶ್ವನಾಥ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಎಂ. ಆನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಅವರು ಸಂಘದ ಕಾರ್ಯಚಟುವಟಿಕೆಗಳ ಮಾಹಿತಿಯಿತ್ತರು.
ಅತಿಥಿಗಳನ್ನು ಸಂಘದ ಸದಸ್ಯರಾದ ವಾಣಿ ಶೆಟ್ಟಿ, ಉಷಾ ಶೆಟ್ಟಿ, ಜೊತೆ ಕಾರ್ಯದರ್ಶಿ ಶಾಂತಾ ಎನ್ ಶೆಟ್ಟಿ, ವಸಂತಿ ಕೋಟೆಕ್ಕಾರ್ ಮತ್ತು ಶೈಲಾ ಎಸ್. ನಾಯಕ್ ಅಥಿತಿಗಳನ್ನು ಪರಿಚಯಿಸಿದರು.

ಮನಪಾ ಶಾಲೆಯ ಮಕ್ಕಳಿಗೆ ವಿಧ್ಯಾರ್ಥಿ ವೇತನ, ಶೈಕ್ಷಣಿಕ ನೆರವು, ದತ್ತಿನಿಧಿ ಹಾಗೂ ಮುಂಬೆಳಕು ಸಂಚಿಕೆಯಲ್ಲಿ ಹೆಚ್ಚಿನ ಜಾಹೀರಾತು ಸಂಗ್ರಹಿಸಿದವರನ್ನು ಗೌರವಿಸಲಾಯಿತು, ಗುಣೋದಯ ಐಲ್, ಸಾವಿತ್ರಿ ಶೆಟ್ಟಿ ಮತ್ತು ಉಷಾ ಬಿ ಶೆಟ್ಟಿ ಅವರ ಹೆಸರಿನ ಯಾದಿಯನ್ನು ವಾಚಿಸಿದರು.

ದಿನಪೂರ್ತಿ ನಡೆದ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ವಿಶ್ವನಾಥ ಕೆ ಶೆಟ್ಟಿ, ಡಾ. ಆರ್ ಕೆ ಶೆಟ್ಟಿ, ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ, ಸಂತೋಷ್ ಪಿ ಶೆಟ್ಟಿ, ತುಷಾರ್ ಶೆಟ್ಟಿ ಹಾಗೂ ಪ್ರೀತಿ ಭೋಜನದ ಪ್ರಾಯೋಜಕರಾಗಿ ಗೋರೆಗಾಂವ್ ಹೋಟೆಲ್ ಪ್ರಕಾಶ್ ನ ಪ್ರಕಾಶ್ ಎನ್ ಶೆಟ್ಟಿ ಸಹಕರಿಸಿದ್ದರು, ಅಲ್ಲದೆ ಉಪಹಾರದ ಪ್ರಾಯೋಜಕರಾಗಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಿವಾನಂದ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಮಹಿಳಾ ವಿಭಾಗದ ಸದಸ್ಯರು ಪ್ರಾರ್ಥನೆ ಮಾಡಿದರು. ಗೌರವ ಕೋಶಾಧಿಕಾರಿ ಎಂ ಆನಂದ ಶೆಟ್ಟಿ ವಂದನಾರ್ಪಣೆ ಮಾಡಿದರು.
ಸಂಘದ ಉಪ ವಿಭಾಗಗಳು ಮತ್ತು ಮುಂಬಯಿಯ ವಿವಿಧ ಸಂಘ ಸಂಸ್ಥೆಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

ಪಾರುಪತ್ಯಗಾರರುಗಳಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಜಿಟಿ ಆಚಾರ್ಯ ಮತ್ತು ದೇವಲ್ಕುಂದ ಭಾಸ್ಕರ್ ಶೆಟ್ಟಿ, ಸಂಘದ ಜೊತೆ ಕಾರ್ಯದರ್ಶಿ ಸುರೇಶ್ ಪೂಜಾರಿ, ಜೊತೆ ಕೋಶಾಧಿಕಾರಿ ಸಹಾನಿ ವಿ. ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್, ಸಮಿತಿಯ ಸದಸ್ಯರಾದ ಪದ್ಮಜಾ ಮಣ್ಣೂರು, ಪೇಟೆಮನೆ ಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ರಮೇಶ್ ಶೆಟ್ಟಿ ಪಯ್ಯಾರ್ ಮತ್ತು ನಾರಾಯಣ ಮೆಂಡನ್, ಸುಚಲತಾ ಪೂಜಾರಿ, ಹರಿಶ್ಚಂದ್ರ ಆಚಾರ್ಯ, ಸುಧಾಕರ ಯೆಲ್ಲೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಾವಿತ್ರಿ ಎಂ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಸುಗುಣಾ ಎಸ್. ಬಂಗೇರ, ಸಂಚಾಲಕರು ಮತ್ತು ಸದಸ್ಯರು, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಎಚ್ ಆಚಾರ್ಯ, ಸಂಚಾಲಕರು ಮತ್ತು ಸದಸ್ಯರು, ಗ್ರಂಥಾಯನದ ನಿರ್ದೇಶಕಿ ಶೈಲಾ ಎಸ್ ನಾಯಕ್ ಸಂಚಾಲಕರು ಮತ್ತು ಸದಸ್ಯರು, ರಂಗಸ್ಥಳದ ನಿರ್ದೇಶಕ ವಾಸು ಶೆಟ್ಟಿ ಮಾರ್ನಾಡ್ ಸಂಚಾಲಕರು ಮತ್ತು ಸದಸ್ಯರು, ಕಾರ್ಯಕಾರಿ ಸಮಿತಿ ಮತ್ತು ಸ್ವಾಗತ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನನಗೆ ಈ ಮೊದಲೂ ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಬಾಗವಹಿಸಲು ಅವಕಾಶ ಸಿಕ್ಕಿದ್ದರೂ ಕಾರಣಾಂತರದಿಂದ ಬರಲಾಗಲಿಲ್ಲ. ಸಂಘದಿಂದ ಉತ್ತಮ ಕಾರ್ಯಗಳು ನಡೆಯುತ್ತಿದೆ. ನಾನು ಕಳೆದ ಹಲವಾರು ವರ್ಷಗಳಿಂದ ಗೋರೆಗಾಂವ್ ಪರಿಸರದಲ್ಲೇ ಉದ್ಯಮ ನಡೆಸುತ್ತಿದ್ದು ಈ ಸಂಘವು ನನಗೆ ಬಹಳ ಹತ್ತಿರವಾಗಿದೆ. – ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ, ಬಂಟರ ಸಂಘ ಮುಂಬಯಿಯ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ
********
ಇಂದಿನ ಯುವ ಪೀಳಿಗೆಗೆ ಉಪಯುಕ್ತವಾಗುವಂತಹ ಚಟುವಟಿಕೆಗಳು ಗೋರೆಗಾಂವ್ ಕರ್ನಾಟಕ ಸಂಘದಿಂದ ನಡೆಯುತ್ತಿರುವುದು ಅಭಿನಂದನೀಯ. ಆಂಗ್ಲ ಮಾಧ್ಯಮದಲ್ಲಿ ಕಲಿಯುದರೊಂದಿಗೆ ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. – ಸಂತೋಷ್ ಪಿ ಶೆಟ್ಟಿ, ಹೋಟೆಲ್ ಉದ್ಯಮಿ, ಸಮಾಜಸೇವಕ
************
ನನ್ನನ್ನು ಇಂದಿಲ್ಲಿಗೆ ಆಮಂತ್ರಿಸಿದಕ್ಕೆ ನಾನು ಅಬಾರಿಯಾಗಿರುವೆನು. ನನ್ನ ತಾಯಿಯ ಆಶ್ರೀರ್ವಾದದಿಂದ ನಾನಿಂದು ಇಲ್ಲಿಗೆ ಬರುವಂತಾಗಿದೆ. ಇನ್ನು ಮುಂದೆಯೂ ಅವಕಾಶ ಸಿಕ್ಕಿದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಬಾಗವಹಿಸುವೆನು. – ತುಷಾರ್ ಶೆಟ್ಟಿ, ಕೋರಿಯೋಗ್ರಾಫರ್
——————————-
ಸಂಘ, ಸಂಸ್ಥೆಗಳಿಂದ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ: ಡಾ. ಆರ್. ಕೆ. ಶೆಟ್ಟಿ
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ಯವರು ಮಾತನಾಡುತ್ತಾ ಗೊರೆಗಾಂವ್ ಕರ್ನಾಟಕ ಸಂಘವು 66 ವರ್ಷ ಪೂರೈಸುತ್ತಿರುವುದು ಅಭಿನಂದನೀಯ. ಇಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿದೆ. ಇಂತಹ ಸಂಘಟನೆಗಳಿಂದ ನಮ್ಮ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ. ನಾವು ನಮ್ಮ ಮಕ್ಕಳಿಗೆ ನೀಡುವ ಸಂಸ್ಕೃತಿ ಸಂಸ್ಕಾರ ಅವರ ಮುಂದಿನ ಜೀವನಕ್ಕೆ ಪೂರಕ. ಅಂತಹ ಕಾರ್ಯಗಳು ಈ ಸಂಘದಿಂದ ನಡೆಯುತ್ತಿದ್ದು ಇದು ಮುಂದುವರಿಯುತ್ತಿರಲಿ ಎಂದರು.