
ಕಾಂತಾಬಾರೆ ಬೂದಬಾರೆ ಸಂಬಂಧಪಟ್ಟ ನಾಯಗರವರಿಗೆ ಬೇರೆಬೇರೆ ದೈವಸ್ಥಾನಗಳಲ್ಲಿ ಗಡಿಪ್ರದಾನ ಮಾಡಲಾಗಿದೆ. ಅದರಂತೆ ಕಾರ್ನಾಡು ಗೋಪಾಲ್ ನಾಯಗರಿಗೆ ಕಾರ್ನಾಡು ಧರ್ಮಸ್ಥಾನದಲ್ಲಿ ಗಡಿಪ್ರದಾನ ಮಾಡಲಾಗಿದ್ದು ಮೂಲ್ಕಿ ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರವರಿಗೆ ಕಾರ್ನಾಡು ಪಡುಬೈಲು ಬಬ್ಬುಸ್ವಾಮಿಯ ವಾರ್ಷಿಕ ನೇಮೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ನಾಡು ಗುತ್ತು ಜಗದೀಶ್ ಶೆಟ್ಟಿ ತನುಷ್ ಮಾಗಂದಡಿ, ಹರಿಶ್ಚಂದ್ರ ಪಿ ಸಾಲಿಯಾನ್ ಕೊಳಚಿಕಂಬಳ, ದೇವಪ್ಪ ಗುರಿಕಾರ ಕೋರಬ್ಬು ದೈವಸ್ಥಾನ, ನಿತೇಶ್ ಪಡುಬೈಲ್, ಬಾಸ್ಕರ್ ಮಾಬೆನ್ ಹಾಗೂ ಶೈಲೇಶ್ ಮೈಲೋಟ್ಟು ಮತ್ತಿತರರು ಉಪಸ್ಥಿತರಿದ್ದರು.