
ಸ್ಥಾಪನೆಯಾದ ಅಲ್ಪಾವಧಿಯಲ್ಲಿಯೇ ವಿಭಿನ್ನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರುಗಳಿಸಿದ ಸಯನ್ ಕನ್ನಡ ಸಂಘ ಇದೀಗ ಮಾರ್ಚ್ 29, ಶನಿವಾರದಂದು,ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ರ ತನಕ ತುಳು-ಕನ್ನಡಿಗರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಸಯನ್ ನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಆಯೋಜಿಸಿದೆ.
ಪದವಿ ಶಿಕ್ಷಣ, ಡಿಪ್ಲೋಮ ಪದವಿ ಮುಗಿಸಿರುವ ಯುವಕ-ಯುವತಿಯರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ದೇಶದ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಮಾಡುವ ಸುವರ್ಣ ಅವಕಾಶ ಪಡೆಯಬಹುದಾಗಿದೆ.
ಉದ್ಯೋಗ ಮೇಳದಲ್ಲಿ 30 ಕ್ಕೂ ಮಿಕ್ಕಿ ಹೆಸರಾಂತ ಕಂಪನಿಗಳು ಭಾಗವಹಿಸುತ್ತಿದ್ದು, 1,000 ಅಧಿಕ ಉದ್ಯೋಗಾವಕಾಶಗಳು ಮೇಳದಲ್ಲಿ ಲಭ್ಯವಿದೆ.
ಉಚಿತ ಪ್ರವೇಶದ ಈ ಕಾರ್ಯಕ್ರಮಕ್ಕೆ ನೋಂದಣಿ ಕಡ್ಡಾಯವಿದೆ. ಆಕಾಂಕ್ಷಿಗಳು ಆಧಾರ್ ಕಾರ್ಡ್ ಜತೆಗೆ ತಮ್ಮ ರೆಸ್ಯೂಮ್ ನ 4-5 ಪ್ರತಿಗಳೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಬಹುದು.
ಹೆಚ್ಚಿನ ವಿವರಗಳಿಗೆ : Shri Harry Sequeria Mobile no. 9820582580 ,
Shri Sadanand Shetty Mobile no. 9987352626 ಇವರುಗಳನ್ನು ಸಂಪರ್ಕಿಸಬಹುದಾಗಿದೆ.
For Registration: https://bit.ly/JobfairKannadaSanghaSion
or scanner for Registration :
