
ಮೂಲ್ಕಿ ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮವು ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಮಾರ್ಚ್ 28 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ದೈವ ನರ್ತಕ ಕಿಟ್ಟ ಪಂಬದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ವಹಿಸಿದರು. ತುಳುನಾಡಿನಲ್ಲಿ ಬಹಳ ಮಂದಿ ದೈವ ನರ್ತಕರಿದ್ದು ಅವರು ತುಳು ಭಾಷೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ತುಳು ಶಬ್ದಗಳ ಅರ್ಥ ಹಾಗೂ ದೈವಗಳ ಪಾಡ್ಡನವನ್ನು ಜ್ಞಾಪಕ ಶಕ್ತಿಯಿಂದ ಹೇಳುತ್ತಾ ಬಂದಿದ್ದಾರೆ. ಇವರಲ್ಲಿರುವ ಭಾಷೆಯ ಪ್ರೇಮ ಇತರರಿಗೆ ಅನುಕರಣೆಯವಾಗಿದೆ. ಇಂತಹವರಿಗೆ ಸನ್ಮಾನ ಮಾಡುವುದು ಒಳ್ಳೆಯ ಕೆಲಸ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಮೂಲ್ಕಿ ಬ್ಯಾಂಕ್ ಆಪ್ ಬರೋಡಾ ಶಾಖೆಯ ಮ್ಯಾನೇಜರ್ ಸಚಿನ್ ಹೆಗ್ಡೆಯವರು ಹೊಸಂಗಣ ಪತ್ರಿಕೆಯು ಒಳ್ಳೆಯ ಸುದ್ದಿಗಳಿಂದ ಪ್ರತಿ ತಿಂಗಳು ಓದುಗರಿಗೆ ತಲುಪುತ್ತಿದೆ. ಮೂಲ್ಕಿಯ ಏಕೈಕ ಪತ್ರಿಕೆಯಾಗಿರುವ ಹೊಸ ಅಂಗಣವು ಇನ್ನೂ ಒಳ್ಳೆಯ ಸಾಹಿತ್ಯದಿಂದ ಜನರನ್ನು ತಲುಪಲಿ, ಏಲೆಯ ಮರೆಯಲಿರುವ ಸಾಧಕರನ್ನು ಗುರುತಿಸುವ ಕೆಲಸ ಪ್ಲೇಘನೀಯ ಎಂದು ಹೇಳಿದರು. ವೆಂಕಟೇಶ ಹೆಬ್ಬಾರ್, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷರು, ಹಬೀಬುಲ್ಲ. ಸುರಭಿಯ ಜೋನ್ ಕೋಡ್ರಸ್, ನಿವೃತ್ತ ಪ್ರಾಶುಂಪಾಲ ಶ್ಯಾಮ್ ಮಾಬೇನ್, ಹಳೆಯಂಡಿಯ ಬಂಕಿ ನಾಯಕ್, ಮೂಲ್ಕಿ ನಗರ ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷರಾಜ ಶೆಟ್ಟಿ, ವಾಮನ ಕೋಟ್ಯಾನ್ ನಡಿಕುದ್ರು ಅತಿಕಾರಿ ಬೆಟ್ಟು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಹೊಸಅಂಗಣ ಸಂಪಾದಕ ಹರಿಶ್ಚಂದ್ರ ಪಿ ಸಾಲ್ಯಾನ್, ಉದ್ಯಮಿ ವಾಸುಪೂಜಾರಿ ಚಿತ್ರಾಪು, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,
ರವೀಶ್ ಕಾಮತ್ ರವರು ವಂದನಾರ್ಪಣೆ ಮಾಡಿದರು.