
.
.
ದಾನ, ಧರ್ಮದ ಕಾರ್ಯ ಪ್ರೀತಿಯ ಕೆಲಸ: ಸದಾಶಿವ ಶೆಟ್ಟಿ ಕನ್ಯಾನ,
ಚಿತ್ರ ವರದಿ ದಿನೇಶ್ ಕುಲಾಲ್
ಕುಂಬಳೆ ಜ 1:ಗಡಿನಾಡು ಕಾಸರಗೋಡಿನ ಮೂಲೆಮೂಲೆಗಳಲ್ಲಿರುವ ದೇವಾಲಯಗಳನ್ನು ಪುನರ್ ನವೀಕರಿಸಿ ಅಭಿವೃದ್ಧಿಪಡಿಸುವ ಕಾಯಕದಲ್ಲಿ ನಾನು ಮತ್ತು ಮಿತ್ರ ಕೆ.ಕೆ.ಶೆಟ್ಟಿ ಆಸಕ್ತಿಯಿಂದ ಜೊತೆಯಾಗಿದ್ದೇವೆ. ಯಾವುದೇ ಕೆಲಸದಲ್ಲೂ ಇಬ್ಬರು ಜೊತೆಯಾದರೆ ಅದಕ್ಕೊಂದು ಪ್ರತ್ಯೇಕ ಶಕ್ತಿಯಿದೆ. ದೇವಾಲಯಗಳ ಅಭಿವೃದ್ಧಿ ಮೂಲಕ ಹಿಂದೂ ಸಮಾಜದ ಅಭಿವೃದ್ಧಿಗೆ ನಮ್ಮನ್ನು ಭಗವಂತನೇ ನಿಯೋಜಿಸಿರಬೇಕು. ಯಾಕೆಂದರೆ ದೇವಾಲಯಗಳ ನವೀಕರಣ, ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಮಾಡುವ ದಾನ ಧರ್ಮ ಎಂದರೆ ನಮಗಿಬ್ಬರಿಗೂ ಸಮಾನ ಆಸಕ್ತಿ ಹಾಗೂ ಸಮಾನ ಪ್ರೀತಿ ಎಂದು ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ, ಮಹಾದಾನಿ ಸದಾಶಿವ ಶೆಟ್ಟಿ ಕನ್ಯಾನ ಹೇಳಿದರು.
ಕುಂಬಳೆ ಸಮೀಪದ ದರ್ಬಾರ್‌ಕಟ್ಟೆ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಡಿ.25ರಂದು ನಡೆದ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ,ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರನ್ನು ಕಲ್ಯಾಣೋತ್ಸವ ಸಂದರ್ಭದಲ್ಲಿ ಉದ್ಯಮಿ, ಮುಂಡವಳ್ಳ ದೇವಾಲಯದ ಆಡಳಿತ ಮೊತ್ತೇಸರ ಕೆ.ಕೆ.ಶೆಟ್ಟಿ ದಂಪತಿ ಮತ್ತು ದೇವಾಲಯ ಸಮಿತಿ ಪದಾ ಧಿಕಾರಿಗಳು ಗಣ್ಯರ ಸಮ್ಮುಖದಲ್ಲಿ ನೀಡಿದ ಅದ್ದೂರಿ ಸನ್ಮಾನ ಪಡೆದು ಅವರು ಮಾತನಾಡಿದರು. ದೇವಸನ್ನಿಧಿಯ ಈ ಸನ್ಮಾನ ನನ್ನ ಪಾಲಿಗೆ ಹುಟ್ಟೂರ ಸನ್ಮಾನದಷ್ಟೇ ಮೌಲ್ಯಯುತ ಎಂದ, ಹುಟ್ಟೂರಿಗೆ ಸಮಾನ ಎಂದರು. ನಾನೂ ಇದೇ ನೆಲದ ಮೂಲದವನು ಎಂದು ನುಡಿದರು.
ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸಂಸ್ಥಾಪಕ, ಶ್ರೀ ಕ್ಷೇತ್ರದ ಆಡಳಿತ ಮೊತ್ತೇಸರ ಕೆ.ಕೆ. ಶೆಟ್ಟಿ ಅಹ್ಮದ್‌ನಗರ ಮಾತನಾಡಿ, ಕೋಟ್ಯಾನುಗಟ್ಟಲೆ ದುಡ್ಡನ್ನು ಸಮಾಜದ ಅಭ್ಯುದಯಕ್ಕೆ ಸರಳ ರೀತಿಯಲ್ಲಿರುವ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಪ್ರತಿಯೊಬ್ಬರಿಗೂ ಸ್ಪೂರ್ತಿಯ ಮಾರ್ಗದರ್ಶಿ ವ್ಯಕ್ತಿತ್ವದವರು. ಅವರಿಂದ ಅರಿಯಲು, ಅವರನ್ನು ಅನುಸರಿಸಲು ನೂರಾರು ವಿಚಾರಗಳಿವೆ ಎಂದು ಪ್ರಶಂಸಿಸಿ ಸನ್ಮಾನಗೈದರು.
ಮಹಾರಾಷ್ಟ್ರದ ಮುಂಬಯಿಯಲ್ಲಿ ಪ್ರಸಿದ್ದ ವೈದ್ಯರಾಗಿ, ವೈದ್ಯರ ಸಂಘಟನೆಯ ಅಧ್ಯಕ್ಷರಾಗಿ ಮುಂಬಯಿಯಲ್ಲಿ ಹಲವು ಶ್ರೀನಿವಾಸ ಕಲ್ಯಾಣೋತ್ಸವ ಸಂಘಟಿಸಿದ ಡಾ.ಸತ್ಯಪ್ರಕಾಶ್ ಶೆಟ್ಟಿ ಮುಂಬಯಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶ್ರೀನಿವಾಸ ಕಲ್ಯಾಣೋತ್ಸವದ ಮಹತ್ವ ವಿವರಿಸಿದರು.
ವೇದಿಕೆಯಲ್ಲಿ ಕೆ.ಕೆ.ಶೆಟ್ಟಿ ಅವರ ಧರ್ಮಪತ್ನಿ ವಿನಯಾ ಶೆಟ್ಟಿ ಉಪಸ್ಥಿತರಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಐ.ಎನ್.ರೈ ಇಚ್ಚಂಪಾಡಿ, ವಕೀಲ ಬಿ. ಸುಬ್ಬಯ್ಯ ರೈ, ವಿನೋದ ದೇವದಾಸ್ ಶೆಟ್ಟಿ ಮುಂಬಯಿ, ಐಲ ದೇವಸ್ಥಾನದ ಆಡಳಿತ ಮೊಕ್ತಸರ ಕೋಡಿಬೈಲು,ವಿಠಲ್ ಶೆಟ್ಟಿ ಮುಂಬಯಿ, ಆಶಾ ಪ್ರವೀಣ್ ಶೆಟ್ಟಿ, .ವಸಂತ ಪೈ ಬದಿಯಡ್ಕ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ಮುಂಬೈಯ ಸಂಘಟಕ ಕರ್ನೂರು ಮೋಹನ್ ರೈ, ಮೀರಾ ರೋಡಿನ ಹರೀಶ್ ರೈ ಕುಂಬಳೆ, ಎಚ್. ಶಿವರಾಮ ಭಟ್ ಕಾರಿಂಜ ಹಳೆಮನೆ, ಜಯಪ್ರಸಾದ್ ರೈ, ಗೋಪಾಲಕೃಷ್ಣ ಶೆಟ್ಟಿ, ಅನೂಕ್ ಶೆಟ್ಟಿ, ಯಕ್ ಶೆಟ್ಟಿ ಭಾಗವಹಿಸಿದ್ದರು.
ಎಂ.ಗುರುಮೂರ್ತಿ ನಾಯ್ಕಾವು ಸ್ವಾಗತಿಸಿ, ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಆಳ್ವ ಮಡ್ಡ ವಂದಿಸಿದರು. ಶಿವರಾಮ ಭಟ್, ವಿನೋದ ಜಯಪ್ರಸಾದ್ ರೈ ಮೊದಲಾದವರುಸಹಕರಿಸಿದರು



——
ಶ್ರೀನಿವಾಸ ಕಲ್ಯಾಣ
ಕುಂಬಳೆ ಬಳಿಯ ದರ್ಬಾರ್‌ಕಟ್ಟೆ ಮುಂಡವಳ್ಳ ಶ್ರೀ ರಾಜರಾಜೇಶ್ವರಿ ದೇವಾಲಯದ ಪರಿಸರದಲ್ಲಿ ಅದ್ದೂರಿ, ಸಂಭ್ರಮೋಲ್ಲಾಸಗಳಿಂದ ಗೋವಿಂದ ನಾಮಸಂಕೀರ್ತನೆಯಲ್ಲಿಮಿಂದೆದ್ದು ಅಪೂರ್ವವಾದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಶ್ರೀದೇವಿ ಶ್ರೀನಿವಾಸ ದೇವರ ಕಲ್ಯಾಣದ ಮಂಗಲೋತ್ಸವವು ಕುಂಬಳೆ ಪರಿಸರಕ್ಕೊಂದು ಹಬ್ಬದ ವಾತಾವರಣ ನಿರ್ಮಿಸಿ ಸಹಸ್ರಾರು ಮಂದಿ ಕಣ್ಣುಂಬಿಕೊಂಡರು.
ಬೆಂಗಳೂರಿನ ರಾಮಾನುಜ ಮಠದ ವೇದಮೂರ್ತಿ ಮೋಹನಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಪಂಚರಾತ್ರ ಆಗಮೋಕ್ತ ರೀತಿಯಲ್ಲಿ ನಡೆದ ಕಲ್ಯಾಣೋತ್ಸವವು ಒಂದಿಡೀ ದಿನ ಮುಂಡವಳ್ಳ ಕ್ಷೇತ್ರ ಪರಿಸರವನ್ನೂ ಭೂವೈಕುಂಠವನ್ನಾಗಿಸಿತು.
ಕುಂಬಳೆ ಪರಿಸರದಲ್ಲಿ ಇದೇ ಮೊದಲ ಬಾರಿಗೆ ಕಲ್ಯಾಣೋತ್ಸವ ನಡೆದ ಹಿನ್ನೆಲೆಯಲ್ಲಿ ವಿಶೇಷ ಕುತೂಹಲದಿಂದ ಸಹಸ್ರಾರು ಸಂಖ್ಯೆಯಲ್ಲಿ ಕಣ್ಣುಂಬಿಕೊಂಡರು
—-
ಶ್ರೀನಿವಾಸ ಕಲ್ಯಾಣೋತ್ಸವ ಗ್ರಾಮದ ಸಮಸ್ತ ಜನರು ಧರ್ಮ ಕಾರ್ಯದಲ್ಲಿ ನಡೆಯಲು ಪ್ರೇರಣೆ: ಕೆ ಕೆ ಶೆಟ್ಟಿ ಅಹ್ಮದ್‌ನಗರ
ಕುಂಬಳೆ ಮುಂಡವಳ್ಳ ದಲ್ಲಿ ಮಹಾರಾಷ್ಟ್ರದ ಅಹ್ಮದ್‌ನಗರ ನಗರದ ಉದ್ಯಮಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಿರ್ಮಾಣದ ರುವಾರಿ, ಕ್ಷೇತ್ರದ ಆಡಳಿತ ಮೊತ್ತೇಸರ ಕೆ.ಕೆ.ಶೆಟ್ಟಿ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಲೋಕಕಲ್ಯಾಣವಾಗಲಿ ಗ್ರಾಮದ ಸಮಸ್ತ ಜನರು ಸುಖ ಶಾಂತಿಯಿಂದ ಬದುಕು ಕಟ್ಟುವಂತಾಗಲಿ ಎನ್ನುವ ಮಹಾತ್ಮಾಂಸೆಯಿಂದ ಈ ಪೂಜೆಯನ್ನು ಆಯೋಜಿಸಿಕೊಂಡಿದ್ದೇವೆ ಇದಕ್ಕೆ ಕುಂಬಳೆ, ಕಾಸರಗೋಡು , ವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮುಂಬೈಯಿಂದ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡಿದ್ದಾರೆ , ಶ್ರೀನಿವಾಸ ಕಲ್ಯಾಣೋತ್ಸವವನ್ನು ಕಣ್ತುಂಬ ಕಂಡ ಭಕ್ತರಲ್ಲರ ಬದುಕು ಪಾವನವಾಗಲಿ ಎಂದು ನುಡಿದರು.,
—–
ಶ್ರೀನಿವಾಸ ಕಲ್ಯಾಣೋತ್ಸವ ದಲ್ಲಿ ಭಕ್ತರನ್ನು ಮಂತ್ರಮುಗ್ಧಗೊಳಿಸಿದ ಮುಂಬೈಯ ಸಂಗೀತ ಕಲಾವಿದ ವಿಜಯ ಶೆಟ್ಟಿ ಮೂಡುಬೆಳ್ಳೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತಿದ್ದಂತೆ ಸುಮಾರು ನಾಲ್ಕು ಗಂಟೆಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರನ್ನು ಮುಂಬೈಯ ಸಂಗೀತ ಕಲಾವಿದ ವಿಜಯ್ ಶೆಟ್ಟಿ ಮೂಡುಬೆಳ್ಳೆ ಯವರು ತನ್ನ ಭಜನೆ ಸಂಕೀರ್ತನೆಯಿಂದ ಭಗವಂತನ ನಾಮಸ್ಮರಣೆಯಲ್ಲಿ ಕುಣಿಯುತ್ತಮರಿಸುತ್ತಾ, ಸ್ಮರಣೆ ಮಾಡುತ್ತಾ ಭಜನೆಯಲ್ಲಿ ತಲ್ಲೀನರಾಗುವಂತೆ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿ ದ್ದಾರೆ,




