
ಮುಂಬಯಿ : ಪರಿಸರದ ತುಳು – ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ತುಳು ಸಂಘ ಬೊರಿವಲಿ ಹಲವಾರು ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಂಘದ ಯುವ ವಿಭಾಗದಿಂದ ನಡೆದ ಕ್ರಿಕೆಟ್ ಪಂದ್ಯಾಟ ಸಂಘದ ಹಿರಿ ಕಿರಿಯ ಸದಸ್ಯರುಗಳನ್ನು ಒಗ್ಗೂಡಿಸುದರೊಂದಿಗೆ ಸಂಘದ ಬೆಳವಣೆಗೆಗೆ ಸಹಕಾರಿಯಾಗುವುದು ಎಂದು ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್ ಯುವ ವಿಭಾಗದಿಂದ ಕ್ರಿಕೆಟ್ ಪಂದ್ಯಾಟಕ್ಕೆ ಶುಭ ಹಾರೈಸಿದರು.

ಸಂಘದ ಯುವ ವಿಭಾಗದ ವತಿಯಿಂದ ಕ್ರಿಕೆಟ್ ಪಂದ್ಯಾಟವು ಮಾ. 30 ರಂದು ಬೊರಿವಲಿ (ಪ.) ಎಕ್ಸರ್ ವಿಲೇಜ್ ಹ್ಯಾಟ್ರಿಕ್ ಸ್ಪೋರ್ಟ್ಸ್ ಫೀಲ್ಡ್ ನ್ಯೂ ಲಿಂಕ್ ರಸ್ತೆ, ಇಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ನ್ಯಾ. ರಾಘವ ಎಂ. ಇವರ ಮಾರ್ಗದರ್ಶನದಲ್ಲಿ ನಡೆಯಿತು. ಸಂಘದ ಯುವ ವಿಭಾಗದ ರೋಹಿತ್ ಪೂಜಾರಿ ನಾಯಕತ್ವದ ತುಳು ಸೂಪರ್ ಕಿಂಗ್ಸ್ ಟೀಮ್ ವಿಜಯಿ ಸಾಧಿಸಿದೆ. ರನ್ನರ್ ಅಫ್ ಆಗಿ ಚಂದ್ರಹಾಸ ಬೆಲ್ಚಡ ನಾಯಕತ್ವದ ತುಳು ಸೂಪರ್ ರೈಸರ್ಸ್.
ಇದರಲ್ಲಿ ಸಂಘದ ಎಲ್ಲಾ ಟೀಮ್ ಗಳು ಬಾಗವಹಿಸಿದ್ದು ದಿಲೀಪ್ ಜವೇರಿ ಪಟೇಲ್ ಮತ್ತು ಹರ್ಷ್ ಸೋಲಂಕಿ ತೀರ್ಪುಗಾರರಾಗಿ ಸಹಕರಿಸಿದರು.
ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್, ಪ್ರಧಾನ ಕಾರ್ಯದರ್ಶಿ ಕೃಷ್ಣ ರಾಜ್ ಸುವರ್ಣ, ಗೌ. ಕೋಶಾಧಿಕಾರಿ ದಿವಾಕರ ಕರ್ಕೇರ, ತುಳು ಸಂಘ ಬೊರಿವಲಿ ಯ ಉಪಾಧ್ಯಕ್ಷ ರಜಿತ್ ಸುವರ್ಣ, ಜೊತೆ ಕೋಶಾಧಿಕಾರಿ ಟಿವಿ ಪೂಜಾರಿ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ, ವಿಜಯಕುಮಾರ್ ಮೂಲ್ಕಿ, ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗ, ಸವಿತ ಸಿ. ಶೆಟ್ಟಿ, ಕಸ್ತೂರಿ ಎಸ್. ಶೆಟ್ಟಿ, ರಾಜೇಶ್ವರಿ ಜಿ. ಸುವರ್ಣ, ಜಯಂತಿ ಕೆ. ಶೆಟ್ಟಿ, ಸುಮತಿ ಸಾಲ್ಯಾನ್, ಕುಸುಮ ಬಿ. ಶೆಟ್ಟಿ, ಪೂರ್ಣಿಮಾ ಆರ್. ಪೂಜಾರಿ, ವೇದ ಶೆಟ್ಟಿ, ಅಶೋಕ್ ಪೂಜಾರಿ, ಲಕ್ಷ್ಮಿ ದೇವಾಡಿಗ, ಜಯರಾಮ್ ಶೆಟ್ಟಿ, ಸರಸ್ವತಿ ರಾವ್, ಸುನಂದ ಶೆಟ್ಟಿ, ಪ್ರವೀಣ್ ಶೆಟ್ಟಿ ಹಾಗೂ ಸಂಘ ಉಪವಿಭಾಗಗಳ ಇತರ ಸದಸ್ಯರು ಸಹಕರಿಸಿದರು.