34.7 C
Karnataka
March 31, 2025
ಮುಂಬಯಿ

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.

ಮುಂಬೈಯ ಪ್ರಸಿದ್ಧ ಸಮಾಜಸೇವಕ, ಬಿಲ್ಲವ ಚೇಂಬರ್ಸ್ ಆಫ್  ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಕರ್ನಿರೆ ಗಂಗಾಧರ್ ಅಮೀನ್ ಅವರು 25 ವರ್ಷಗಳ ಹಿಂದೆ ಪ್ರಾರಂಭಿಸಿದ ಕೊಂಕಣ್ ಸ್ವಾದ್  (ಗೋಮಂತಕ್ ಸೀ ಫುಡ್, (Gomantak sea food )ಹೊಟೇಲಿಗೆ 2025 ರ ಟೈಮ್ಸ್ ಫುಡ್ & ನೈಟ್‌ಲೈಫ್ ಪ್ರಶಸ್ತಿ ದೊರಕಿದೆ. 

ಮಾ 29 ರಂದು ಅಂದೇರಿ ಪೂರ್ವದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಐಟಿಸಿ ಮರಾಠ ಹೋಟೆಲ್  ಸಭಾಂಗಣದಲ್ಲಿ ಟೈಮ್ಸ್ ಸಮೂಹದವರು ಕೊಡಮಾಡಿದ ಈ ಪ್ರಶಸ್ತಿಯನ್ನು ಕೊಂಕಣ್ ಸ್ವಾದ್ ಸಮೂಹ ಹೋಟೇಲಿನ ಕರ್ನಿರೆ  ಗಂಗಾಧರ್ ಎನ್ ಅಮೀನ್, ಕರಣ್ ಶೆಟ್ಟಿ, ಮತ್ತು ಐಶ್ವರ್ಯ ಗಂಗಾಧರ್ ಅಮೀನ್ ಸ್ವೀಕರಿಸಿದರು. 

ಕೊಂಕಣ್ ಸ್ವಾದ್ ಹೋಟೇಲು ಮುಂಬಯಿಯ ಅತ್ಯುತ್ತಮ ಸಮುದ್ರಾಹಾರ (ಸೀ ಫುಡ್) ಕ್ಯಾಶುಯಲ್ ಡೈನಿಂಗ್ ಮತ್ತು  ಅತ್ಯುತ್ತಮ ಕರಾವಳಿ ಕ್ಯಾಶುಯಲ್ ಡೈನಿಂಗ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಹೆಮ್ಮೆ ತಂದಿದ್ದಾರೆ.

ಅತ್ಯುತ್ತಮ ಸಮುದ್ರಾಹಾರವನ್ನು ಪೂರೈಸಲು ಮತ್ತು ಕರಾವಳಿ ಪಾಕಪದ್ಧತಿಯನ್ನು ಉತ್ತೇಜಿಸಲು ಅವರ  25 ವರ್ಷಗಳ ಕಠಿಣ ಪರಿಶ್ರಮ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದೆ.

  ಗೊರೆಗಾಂವ್ ಪಶ್ಚಿಮದ ಲಿಂಕ್ ರೋಡ್ ನಲ್ಲಿ ಪ್ರಾರಂಭಗೊಂಡ ಹೋಟೆಲ್ ಇದೀಗ ಅಂಧೇರಿ ಪೂರ್ವದ ಜೋಗೇಶ್ವರಿ ಪಶ್ಚಿಮದ ಲಿಂಕ್ ರೋಡಿನಲ್ಲಿಯೂ ಆರಂಭವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

Related posts

ತುಳು ವೆಲ್‌ಫೇರ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಹಳದಿ ಕುಂಕುಮ

Mumbai News Desk

ಜಿ. ಎಸ್. ಬಿ. ಮಂಡಲಿ ಕಲ್ಯಾಣ – ಸಾಮೂಹಿಕ ಚೂಡಿ ಪೂಜೆ ಹಾಗೂ ಸತ್ಯನಾರಾಯಣ ಪೂಜೆ.

Mumbai News Desk

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಭಾರತ್ ಬ್ಯಾಂಕ್ ಸಿಬ್ಬಂದಿ ಆಶಾಲತಾ ಎಸ್ ಕೋಟ್ಯಾನ್ ಸೇವಾ ನಿವೃತ್ತಿ

Mumbai News Desk

ಶ್ರೀ  ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ  ವತಿಯಿಂದ ರಕ್ತ ದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ.

Mumbai News Desk

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ