
ಕುಲಾಲ ಉತ್ಸವ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಲಿ: ಸುರೇಶ್ ಕುಲಾಲ್, ಮಂಗಳ ದೇವಿ
ಮಂಗಳೂರು : ಕುಲಾಲ ಸಮಾಜ ಬಾಂಧವರು ದೇಶ ವಿದೇಶದಲ್ಲಿ ಬಹಳ ಸಂಖ್ಯೆಯಲ್ಲಿ ನೆಲೆಸಿದ್ದು ತಮ್ಮದೇ ಆದ ಸಾಧನೆ ಮಾಡಿದ್ದು ವಿವಿದೆಡೆ ಇರುವ ಕುಲಾಲ ಬಾಂಧವರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆ ಮುಂಬಯಿಯಲ್ಲಿ ಕುಲಾಲ ಉತ್ಸವ ನಡೆದಿದ್ದು ಸಮಾಜ ಬಾಂದವರನ್ನು ಒಗ್ಗೂಡಿಸಲು ಸಹಕಾರಿಯಾಗಿದೆ.
ಇದೀಗ ಏ. 13 ರಂದು ಮಂಗಳೂರಿನ ಸಾವಿರಾರು ಮಂದಿಯ ಉಪಸ್ಥಿತಿಯಲ್ಲಿ ಊರ್ವ ಸ್ಟೋರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ ಗಂಟೆ 2 ರಿಂದ ಕುಲಾಲ ಉತ್ಸವವು ಅದ್ದೂರಿಯಾಗಿ ವಿವಿಧ ನೃತ್ಯ, ಸಂಗೀತ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ, ಮುಂಬಯಿ ಕುಲಾಲ ಸಮಾಜದ ಮಹಾದಾನಿ ಸುನಿಲ್ ಸಾಲ್ಯಾನ್ ದಂಪತಿಗೆ ಸನ್ಮಾನ ನಡೆಯಲಿದೆ.
ಕುಲಾಲ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದ್ದು ಈ ಸಂದರ್ಭದಲ್ಲಿ ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳ ದೇವಿ ಮಾತನಾಡುತ್ತಾ ಸುಮಾರು 14 ವರ್ಷದ ಮೊದಲು ಮುಂಬೈ ಮಹಾನಗರದಲ್ಲಿ ಇಂತಹ ಅದ್ದೂರಿಯ ಸಮಾರಂಭ ನಡೆಸಿದ್ದು ಇದೀಗ ಏಪ್ರಿಲ್ 13 ರಂದು ಮಂಗಳೂರಿನಲ್ಲಿ ಕುಲಾಲ ಪರ್ಬ ಇನ್ನೂ ಅದ್ದೂರಿಯಿಂದ ನಡೆಯಲಿದೆ. ಕುಲಾಲ ಪರ್ಬ ವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿ ಅವರು ತಿಳಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಂದರ್ ಕುಲಾಲ್ ಶಕ್ತಿನಗರ ಈ ಸಂದರ್ಭದಲ್ಲಿ ಮಾತನಾಡುತ್ತಾ
ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂಬಯಿಗರ ಕೊಡುಗೆ ಅಪಾರವಾಗಿದ್ದು , ಮುಂಬಯಿಯ ನಮ್ಮ ಸಮಾಜ ಬಾಂಧವರನ್ನು ಹಾಗೂ ದಾನಿಗಳ ಕೊಡುಗೆಯನ್ನು ಮರೆಯುವಂತಿಲ್ಲ. ಕುಲಾಲ ಪರ್ಬ ಹಲವಾರು ಪ್ರತಿಭೆಗಳಿಗೆ ಅವಕಾಶವನ್ನು ನೀಡುವುದು ಮಾತ್ರವಲ್ಲದೆ ಹಲವಾರು ಅಸಹಾಯಕರಿಗೆ ಸಹಾಯ ಹಸ್ತ ನೀಡಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲದ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡುತ್ತಾ ಬಹಳ ವಿಜೃಂಭಣೆಯಿಂದ ನಡೆಯಲಿರುವ ಕುಲಾಲ ಉತ್ಸವಕ್ಕೆ ಎಲ್ಲಾ ಸಮುದಾಯದವರು ಆತುರದಿಂದ ಕಾಯುತ್ತಿದ್ದು ಈ ಸಮಾರಂಭದಲ್ಲಿ ಸಮಾಜದ ತೆರೆ ಮೆರೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವು ನಡೆಯಲಿದ್ದು ಸಮಾರಂಭವನ್ನು ಉನ್ನತ ಮಟ್ಟದಲ್ಲಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ದಾಮೋದರ್ ಅವರು ಸಮಾರಂಭಕ್ಕೆ ಶುಭ ಹಾರೈಸುತ್ತಾ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾದದ್ದು ನಮ್ಮ ಆಧ್ಯ ಕರ್ತವ್ಯ ಎಂದರು.
ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಕಿರಣ್ ಅಟ್ಲೂರು ಅವರು ಮಾತನಾಡುತ್ತಾ ಕುಲಾಲ
ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಪ್ರತಿಷ್ಠಾನದ ಟ್ರಸ್ಟಿಗಳಾದ ಸೀತಾರಾಮ ಕುಲಾಲ್ ಬಿ. ಪ್ರೇಮಾನಂದ ಕುಲಾಲ್ ಬಿ ನಾಗೇಶ್ ಕುಲಾಲ್ ಬಿ, ದಿನೇಶ್ ಕುಲಾಲ್, ಸದಾಶಿವ ಮೂಲ್ಯ, ಲೋಕನಾಥ್ ಕುಲಾಲ್, ಆನಂದ್ ಪಿ ಊರ್ವ, ಮೋಹನ್ ದಾಸ್ ಅಳಪೆ, ಗೋಪಾಲ್ ಬಂಗೇರ ಕಲ್ಲಮಾರು ಮತ್ತು ಸುರೇಶ್ ಕುಲಾಲ್ ನರಿಕೊಂಬ ಉಪಸ್ಥಿತರಿದ್ದರು.