
ಹೆಣ್ಣು ಸಮಾಜದ ಕಣ್ಣಾಗಿ ಸಮಾಜ ತಿದ್ದುವ ಕಾರ್ಯ ಮಾಡುತ್ತಿದ್ದಾಳೆ – ಪ್ರವೀಣ್ ಭೋಜ ಶೆಟ್ಟಿ
ಚಿತ್ರ : ಸತೀಶ್ ಶೆಟ್ಟಿ ಡಾಲಿ, ವರದಿ : ರವಿ. ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ ಎ. 1: ಸಂಘದ ಪ್ರಾದೇಶಿಕ ಸಮಿತಿಯಲ್ಲಿ ಪತಿ, ಪತ್ನಿ ಇಬ್ಬರೂ ಸೇರಿ ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಕಂಡಾಗ ಸತೀವ ಸಂತೋಷವಾಗುತ್ತಿದೆ ಹೀಗೆ ನಾವು ಕೆಲಸ ಮಾಡಿದಾಗ ನಮ್ಮ ಸಮಾಜ ಇನ್ನಷ್ಟು ಎತ್ತರಕ್ಕೇರ ಬಹುದು ನಾವು 24 ಗಂಟೆಯಲ್ಲಿ8 ಗಂಟೆ ನಿದ್ರೆ ಮಾಡಿದರೆ 16 ಗಂಟೆಯಲ್ಲಿ ನಮ್ಮ ಅರೋಗ್ಯದ ಬಗ್ಗೆ ಗಮನ ನೀಡ ಬೇಕು ಅರೋಗ್ಯ ಸರಿಯಾಗಿದ್ದರೆ ಸಂಘ- ಸಂಸ್ಥೆ ಮಹಿಳೆಯರು ತಮ್ಮ ಹಾಗೂ ತನ್ನ ಪರಿವಾರದ ಅರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸ ಬೇಕು, ಇಂದಿನ ದಿನಗಳಲ್ಲಿ ಹೆಣ್ಣು ಸಮಾಜದ ಕಣ್ಣಾಗಿ ಸಮಾಜ ತಿದ್ದುವ ಕಾರ್ಯ ಮಾಡುತ್ತಿದ್ದಾಳೆ ಇಂತಹ ಕಾರ್ಯ ಪ್ರತಿಯೊಂದು ಸಮಾಜದ ಮಹಿಳೆಯಿಂದ ನಡೆಯುತ್ತಿರಲಿ, ಪ್ರಾದೇಶಿಕ ಸಮಿತಿಗಳು ಸಂಘದ ಬೆನ್ನೆಲುಬು ಮಹಿಳಾ ವಿಭಾಗ ಸಂಘದ ಶಕ್ತಿಯಾಗಿದೆ. ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ ನಿಮ್ಮ ಅರ್ಥಪೂರ್ಣ ಉತ್ತಮ ಕಾರ್ಯಕ್ರಮಗಳಿಗೆ ಸಂಘದ ಸಹಕಾರ ಸದಾ ಇದೆ ನಾವು ಬಂಟರು ನಮ್ಮಲ್ಲಿರುವ ಮತ ಬೇಧಗಳನ್ನು ಮರೆತು ಸಂಘದ ಏಳಿಗೆಗಾಗಿ ಒಗ್ಗಟ್ಟಿನಲ್ಲಿದ್ದೇವೆ ಇದು ಸಂಘದ ಶಕ್ತಿ ಎಂದರು.

ಸಂಘದ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಯವರು ಮಾತನಾಡುತ್ತಾ ನನಗೂ ಡೊಂಬಿವಲಿ ನಗರಕ್ಕೂ ಅವಿನಾಭಾವ ಸಂಬಂಧ ಅದೂದರಿಂದ ಡೊಂಬಿವಲಿಯ ಪ್ರತಿಯೊಂದು ಕಾರ್ಯಕ್ರಮಕ್ಕೆ ನಾನು ಅಗಮಿಸುತ್ತಿರುತ್ತೇನೆ ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ತನ್ನದೇ ಸಾಮ್ರಾಜ್ಯವನ್ನು ಕಟ್ಟಿ ಇಂದು ಪುರುಷರಿಗೆ ಸರಿಸಾಟಿಯಾಗಿ ನಿಂತಿದ್ದಾರೆ, ತೊಟ್ಟಿಲು ತೂಗುವ ಕೈಗಳು ಇಂದು ದೇಶವನ್ನು ಅಳುತ್ತಿದೆ ಮಹಿಳೆ ಒಲಿದರೆ ನಾರಿ ಮುನಿದರೆ ಮಾರಿ ಅದುದರಿಂದ ಮಹಿಳೆಯರ ಪ್ರತಿಯೊಂದು ಕಾರ್ಯಕ್ರಮಕ್ಕೆ ನಾವು ಸಂಪೂರ್ಣ ಸಹಕಾರವನ್ನು ನೀಡಬೇಕು, ನನ್ನ ಮಾತೃಶ್ರೀ ಯವರ ಹೆಸರಿನಲ್ಲಿ ಜನರರಿಕ್ ಮೆಡಿಸಿನ್ ನೀಡುವ ಯೋಜನೆ ಯನ್ನು ಕೈಗೊಂಡಿದ್ದೇನೆ ಅಗತ್ಯವಿದ್ದವರು ಇದರ ಲಾಭವನ್ನು ಪಡೆಯ ಬಹುದೆಂದರು.

ಅತಿಥಿ ಸಂಘದ ಮಾಜಿ ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ ಸುಜಯ ರಾಮಣ್ಣ ಶೆಟ್ಟಿ ಮಾತನಾಡುತ್ತಾ ನಾನು ಸಂಘದ ಮಹಿಳಾ ವಿಭಾಗದ 12 ವರ್ಷ ಉಪಕಾರ್ಯಾಧ್ಯಕ್ಷೆಯಾಗಿ, ಕಾರ್ಯಾಧ್ಯಕ್ಷೆಯಾಗಿ, ಮಹಿಳಾ ಹಾಸ್ಟೆಲ್ ನ ರಜತ ಮಹೋತ್ಸವ ಸಂಧರ್ಬದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಎನ್ನಲು ಸಂತೋಷವಾಗುತ್ತಿದೆ ನಮ್ಮ ಅಧಿಕಾರ ಅವದಿಯಲ್ಲಿ ಸಂಘದಲ್ಲಿ ದಾನಿಗಳ ಕೊರತೆ ಇತ್ತು ನಾವು ಪ್ರತಿಯೊಂದು ಮನೆ,ಮನೆಗೆ ಹೋಟೆಲ್ ಗಳಿಗೆ ತೆರಳಿ ಧನ ಸಂಗ್ರಹಮಾಡಿ ಕೆಲಸ ಕಾರ್ಯವನ್ನು ಮಾಡಿದ್ದೇವೆ ದೇಶದ ಪ್ರಧಾನ ಮಂತ್ರಿಗಳು ಭೇಟಿ ಬಚಾವ್, ಭೇಟಿ ಪಡಾವ್ ಹೇಳುತ್ತಿದ್ದಾರೆ ನಾವು ಮಹಿಳೆಯರ ಶಿಕ್ಷಣಕ್ಕೆ, ಕಂಕಣ ಭಾಗ್ಯ ಹಾಗೂ ಅಗತ್ಯವಿದ್ದ ಮಹಿಳೆಯರಿಗೆ ವೈದ್ಯಕೀಯ ಸಹಾಯ ಮಾಡಿದಾಗ ಈ ಮಾತಿಗೆ ಸರಿಯಾದ ಅರ್ಥ ಬರುತ್ತದೆ ಎಂದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅನಂದ ಶೆಟ್ಟಿ ಎಕ್ಕಾರ್ ಮಾತನಾಡುತ್ತಾ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದ್ದು ಪರಿಸರದ ಅರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತವನ್ನು ಮಾಡುತ್ತಿದೆ, ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ, ವೃದ್ಧಶ್ರಮಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ನೀಡಿ ಬಂದಿದ್ದಾರೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ ಎಂದರು.
ಪೂರ್ವ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ ಶೆಟ್ಟಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯ ಮಹಿಳೆಯರು ಉತ್ತಮ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ ಮಹಿಳೆಯರು ನಾಲ್ಕು ಗೋಡೆಯ ಮನೆಯಿಂದ ಹೊರ ಬಂದಾಗ ಮಾನಸಿಕವಾಗಿ ಸದೃಢಗೊಳುತ್ತಾರೆ ಅದುದರಿಂದ ಇಂತಹ ಕಾರ್ಯಕ್ರಮದ ಅಗತ್ಯವಿದೆ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಅನಂದ ಶೆಟ್ಟಿಯವರು ಮಹಿಳಾ ವಿಭಾಗದ ಪ್ರತಿಯೊಂದು ಕಾರ್ಯಕ್ರಮಕ್ಕೆ ಸಂಒಊರ್ಣ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯ ಮಹಿಳೆಯರು ಮಾತೃ ಹೃದಯದವರು ಅರ್ಥಿಕವಾಗಿ ಹಿಂದುಳಿದ ಕುಟುಂಬವನ್ನ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಸಹಾಯ ನೀಡುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ.

ಹೋಮಿಯೋಪತಿ ಸಲಹೆಗಾರ್ತಿ ಮಹಿಳೆಯರ ಋತು ಬಂಧದ ಚಿಕಿತ್ಸಕಿ ಡಾ. ಚೈತಾಲಿ ಜೈನ್ ಮಹಿಳೆಯರ ಋತು ಬಂಧದ ಬಗ್ಗೆ ಹಲವಾರು ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ ಡಾ. ಚೈತ್ರಾಲಿ ಜೈನ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮಹಿಳೆಯರಿಂದ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ನಡೆಯಿತು ಸ್ಪರ್ಧೆಯ ವಿಜೇತರಾಗಿ ಪ್ರಥಮ ಅನಿತಾ ಶೆಟ್ಟಿ ಮತ್ತು ಸಮತಾ ರೈ ( ಪಂಜಾಬಿ) ದ್ವಿತೀಯ ಅಕ್ಷತಾ ಅಡಪ್ಪ ಮತ್ತು ಶಾಲಿನಿ ಶೆಟ್ಟಿ ( ಒರಿಸ್ಸ) ತೃತೀಯ ವಿನೋದ ಶೆಟ್ಟಿ ಮತ್ತು ಅನುಭಾ ಶೆಟ್ಟಿ ( ಕೇರಳ) ವಿಜೇತರಾದರು ಹಾಗೂ ಇದಕ್ಕೂ ಮೊದಲು ಬೆಳಿಗ್ಗೆ ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನದ ಸಭಾಗೃಹದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಅಯೋಜಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸ್ವಪ್ನ ಶೆಟ್ಟಿ, ದ್ವಿತೀಯ ಬಹುಮಾನ ಪ್ರಮೀಳಾ ಶೆಟ್ಟಿ ತೃತೀಯ ಬಹುಮಾನ ಸರೋಜ ರೈ ಮತ್ತು ದೀಪಾ ಶೆಟ್ಟಿ ಪಡೆದರು ಫ್ಯಾನ್ಸಿ ಡ್ರೆಸ್ ತೀರ್ಪುಗಾರರಾಗಿ ಶ್ರದ್ಧಾ ರಾಮದಾಸ ಮತ್ತು ಮಿನಲ್ ರಾವ್ ಸಹಕರಿಸಿದರೆ ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿ ರಾಜಶ್ರೀ ಗಾಡೆಕರ್ ಮತ್ತು ಮಾಯ ಪರಾಂಜಪೆ ಸಹಕರಿಸಿದರು.
ಸುನಂದ ಶೆಟ್ಟಿ ಮತ್ತು ಅರತಿ ರೈಯವರ ಪ್ರಾರ್ಥನೆ ಹಾಗೂ ಬಂಟ ಗೀತೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ವೇದಿಕೆಯ ಮೇಲೆ ಸಂಘದ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅನಂದ ಶೆಟ್ಟಿ ಎಕ್ಕಾರ್, ಪೂರ್ವ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಜಯ ರಾಮಣ್ಣ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯದರ್ಶಿ ಅಶಾ ಶೆಟ್ಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಎಸ್.ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಲತಾ ಅನಂದ. ಶೆಟ್ಟಿ, ಕಾರ್ಯಸರ್ಶಿ ಪೂರ್ಣಿಮಾ ಸುರೇಶ್. ಶೆಟ್ಟಿ, ಕೋಶಾಧಿಕಾರಿ ಸುಧಾ ಹೇಮಂತ ಶೆಟ್ಟಿ, ಜೊತೆ ಕಾರ್ಯದರ್ಶಿ ಶಿಲ್ಪಾ ಸಂತೋಷ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರತಿಭಾ ವೈ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ, ಗೀತೆಗಳು, ಭರತ ನಾಟ್ಯ, ಫ್ಯಾನ್ಸಿ ಡ್ರೆಸ್ ಸ್ಫರ್ಧೆ, ಕುಣಿತ ಭಜನೆ, ಮಹಿಳೆಯರಿಂದ ನಡೆದ ಕೆಪ್ಪೆ ಕೇಶವೆ ಕಿರು ನಾಟಕ ಸಂಘದ ಅಧ್ಯಕ್ಷರನ್ನು ಹಾಗೂ ನೆರೆದ ಸದಸ್ಯರನ್ನು ಆಕರ್ಷಿಸಿತು.
ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಮತ್ತು ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ಇವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷರಾದ ರಾಜೀವ ಭಂಡಾರಿ, ಕರುಣಾಕರ ಶೆಟ್ಟಿ ಕಲ್ಲಡ್ಕ, ಕಾರ್ಯದರ್ಶಿ ಸಚಿನ್ ಶೆಟ್ಟಿ, ಅರಣ್ ಶೆಟ್ಟಿ ಪಡುಕೂಡುರು, ಪ್ರಭಾಕರ ಶೆಟ್ಟಿ ಕಲ್ಕಡ್ಕ, ಹರೀಶ್ವ ಶೆಟ್ಟಿ ಪಡುಕುಡೂರು ವಿಜಯ ಶೆಟ್ಟಿ, ಶಿವರಾಮ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಭರತ್ ಶೆಟ್ಟಿ, ವಿಕ್ಷೀತಾ ಶೆಟ್ಟಿ, ಸುಧಾಕರ ಶೆಟ್ಟಿ, ಸುಭಾಷ್ ಪೂಂಜಾ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಕೃಷ್ಣಿ ಮುರಳಿ ಶೆಟ್ಟಿ, ಮಂಜುಳಾ ಶೇಖರ ಶೆಟ್ಟಿ , ಅಶಾ ಶೆಟ್ಟಿ, ಉದಯ ಶೆಟ್ಟಿ, ಜ್ಯೋತಿ ಶೆಟ್ಟಿ, ಸರೋಜ ಶೆಟ್ಟಿ, ಅನಿತಾ ಶೆಟ್ಟಿ, ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಕರ್ತರನ್ನು ಮತ್ತಿತರರನ್ನು ಸತ್ಕರಿಸಲಾಯಿತು
ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಕ್ಷೀತಾ ಶೆಟ್ಟಿ ನಿರೂಪಿಸಿದರೆ, ಸಭಾ ಕಾರ್ಯಕ್ರಮವನ್ನು ಶಿಲ್ಪಾ ಶೆಟ್ಟಿ ನಿರೂಪಿಸಿ ಕೊನೆಗೆ ವಂದಿಸಿದರು