ಜೂನ್ 2020ರಲ್ಲಿ ದಿಶಾ ಸಾಲ್ಯಾನ್ ಸಾವನ್ನಪ್ಪಿದ ನಿಗೂಢ ಸಂದರ್ಭಗಳ ಬಗ್ಗೆ ತನಿಕೆ ನಡೆಸುವಂತೆ ಕೋರಿ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಸೂಕ್ತ ಪೀಠದ ಮುಂದೆ ಇಡುವಂತೆ ಬಾಂಬೆ ಹೈಕೋರ್ಟ್ ಬುಧವಾರ ತನ್ನ ನೋಂದಾವಣೆ ಇಲಾಖೆಗೆ ಸೂಚಿಸಿದೆ. ದಿಶಾ ಸಾಲ್ಯಾನ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದರು. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ಸಾಲಿಯಾನ್ ಅವರನ್ನು ಪ್ರತಿನಿಧಿಸುವ ವಕೀಲರಾದ ಘನ ಶ್ಯಾಮ್ ಉಪಾಧ್ಯಾಯ ಮತ್ತು ನೀಲೇಶ್ ಓಜಾ, ಅರ್ಜಿಯು ಮಹಿಳೆಯರ ಮೇಲಿನ ಅಪರಾಧಕ್ಕೆ ಸಂಬಂಧಿಸಿದೆ ಮತ್ತು ನಿಯೋಜನೆಯು ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ನೇತೃತ್ವದ ವಿಭಾಗಿಯ ಪೀಠಕ್ಕೆ ಸಂಬಂಧಿಸಿದೆ ಎಂದು ತಿಳಿಸಿದರು.
ನಂತರ ನ್ಯಾಯಾಲಯವು ಹೈಕೋರ್ಟ್ ನ ನೊಂದಾವಣಿ ಇಲಾಖೆಗೆ ಅರ್ಜಿಯನ್ನು ಆ ಪೀಠದ ಮುಂದೆ ಇಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿತು. ಶಿವಸೇನೆ (ಯುಬಿಟಿ )ನಾಯಕ ಆದಿತ್ಯ ಠಾಕ್ರೆ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಮತ್ತು ಪ್ರಕರಣವನ್ನು ಸಿಬಿಐ ಗೆ ವಹಿಸಬೇಕೆಂದು ಸತೀಶ್ ಸಾಲ್ಯಾನ್ ಒತ್ತಾಯಿಸಿದ್ದಾರೆ.
ದಿಶಾ ಸಾಲ್ಯಾನ್ ಅವರನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿ ರಾಜಕೀಯವಾಗಿ ರೂಪಿಸಿದ ಮುಚ್ಚಿ ಹಾಕುವಿಕೆಗೆ ಒಳಪಡಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಕೆಲವು ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಮಾತ್ರ ಕೊಲೆಯ ಹಿಂದಿನ ಸುಳ್ಳುಗಳು, ಭ್ರಷ್ಟಾಚಾರ ಮತ್ತು ಸತ್ಯಗಳ ನಿಗ್ರಹದ ಜಾಲವನ್ನು ಬಹಿರಂಗ ಪಡಿಸಲು ಪ್ರಯತ್ನಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮುಂಬೈ ಪೊಲೀಸರು ವಿಧಿವಿಜ್ಞಾನ ಸಾಕ್ಷಗಳು, ಸಾಂದರ್ಬಿಕ ಪುರಾವೆಗಳು ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಆತ್ಮಹತ್ಯೆ ಅಥವಾ ಆಕಸ್ಮಿಕ ಸಾವು ಎಂದು ಪ್ರಕರಣವನ್ನು ತರಾತುರಿಯಲ್ಲಿ ಮುಚ್ಚಿ ಹಾಕಿದರು ಎಂದು ಅರ್ಜಿಯಲ್ಲಿ ಸೇರಿಸಲಾಗಿದೆ.
