23.9 C
Karnataka
April 9, 2025
ಮುಂಬಯಿ

ಛಾಯಾಕಿರಣ ಮಾಸಪತ್ರಿಕೆಯ ದಶಮಾನೋತ್ಸವ ಸಂಭ್ರಮದ ಸಮಾರೋಪ, ಸಾಹಿತ್ಯ ಪ್ರಶಸ್ತಿ, ಸನ್ಮಾನ



ಪತ್ರಿಕಾ ನಿಷ್ಟೆಯ’ಛಾಯಾಕಿರಣ’ ಕರ್ನಾಟಕದ ಮಣ್ಣಿನ ಕಂಪನ್ನು ವಿಶ್ವಾದ್ಯಂತ ಪಸರಿಸುತ್ತಿರಲಿ- ಡಾ.ಕೆ.ಪ್ರಕಾಶ್ ಶೆಟ್ಟಿ

ಚಿತ್ರ,ವರದಿ: ರವಿ.ಬಿ.ಅಂಚನ್ ಪಡುಬಿದ್ರಿ

ಕಲ್ಯಾಣ್ ಎ. 7:  ಛಾಯಾಕಿರಣ ಮಾಸಪತ್ರಿಕೆಯ ಸಂಪಾದಕರಾದ ಪ್ರಕಾಶ್ ಕುಂಠಿನಿ ನನ್ನ ಸಂಬಂಧಿಕರು. ಅದಕ್ಕಿಂತಲೂ ಮಿಗಿಲಾಗಿ ನಾವು ಬಾಂಧವ್ಯದಿಂದ ಬಾಳಿದವರು. ಕುಂಠಿನಿಯರ ಮಾತೃಶ್ರೀಯವರ ಅಡುಗೆಯ ರುಚಿಯನ್ನು ನಾನು ಸವಿದವನು. ಅವರ ಅತಿಥಿ ಸತ್ಕಾರವನ್ನೂ ನೋಡಿ ನಾನು ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದವನು. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಂದು ಪತ್ರಕರ್ತನಾಗಿ ಪತ್ರಿಕೋದ್ಯಮವನ್ನು ಬೆಳೆಸಿ ಛಾಯಕಿರಣ ಪತ್ರಿಕೆಯನ್ನು ಪ್ರಾರಂಭಿಸಿ ಈ ಹತ್ತು ವರ್ಷದಲ್ಲಿ ಟೀಕೆ ಟಿಪ್ಪಣಿಗಳನ್ನು ಸಹಿಸಿ ಇಂದು ದಶಮಾನೋತ್ಸವವನ್ನು ಪತ್ರಿಕೆ ಅಚರಿಸಿದೆ, ಮಹಾರಾಷ್ಟ್ರದ ಮಣ್ಣಿನಲ್ಲಿ ಪತ್ರಿಕೋದ್ಯಮಿಯಾಗಿ ತನ್ನ ಹೆಸರನ್ನು ಶಾಶ್ವತವಾಗಿರಿಸಲು ಕುಂಠಿನಿಯವರು ಪ್ರಯತ್ನಿಸಿದ್ದಾರೆ .ಈ ಎಲ್ಲಾ ಬೆಳವಣಿಗೆಯ ಹಿಂದೆ ಕುಂಠಿನಿಯವರ ನಿಷ್ಠೆ, ಶ್ರದ್ಧೆಯ ಸಾಧನೆ,ಮಾತಾ- ಪಿತರ ಅಶೀರ್ವಾದ, ದೈವ, ದೇವರ ಕೃಪೆ, ಗುರುಗಳಿಂದ ಪಡೆದ ಸಂಸ್ಕಾರದಿಂದಲೇ ಸಾಧ್ಯ ಎಂದರೂ ತಪ್ಪಾಗಲಾರದು. ಈ ಪತ್ರಿಕೆ ಲಕ್ಷ- ಲಕ್ಷ ಓದುಗರ ಮೂಲಕ ನಮ್ಮ ದೈವ, ದೇವರ ಇತಿಹಾಸ, ಕರ್ನಾಟಕದ ಮಣ್ಣಿನ ಕಂಪನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿ ಎಂದು ಡಾ.ಕೆ.ಪ್ರಕಾಶ್ ಶೆಟ್ಟಿ ಶುಭ ಹಾರೈಸಿದರು.

ಅವರು ಎಪ್ರಿಲ್ 6 ರ ಸಂಜೆ ಕಲ್ಯಾಣ್ ನ ಕಡಕ್ ಪಾಡದ ಹೋಟೆಲ್ ಗುರುದೇವ್ ಗ್ರ್ಯಾಂಡ್ ಸಭಾಗೃಹದಲ್ಲಿ ಬಿ.ಎಸ್. ಕುರ್ಕಾಲ್ ವೇದಿಕೆಯಲ್ಲಿ ಛಾಯಾಕಿರಣ  ಮಾಸಪತ್ರಿಕೆಯ ದಶಮಾನೋತ್ಸವ ಅಚರಣಾ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡುತ್ತಾ ಕರ್ನಾಟಕದ  ಹಲವಾರು ದಿನಪತ್ರಿಕೆ, ಮಾಸಪತ್ರಿಕೆಯ ಖ್ಯಾತ ಬರಹಗಾರರ ಬರವಣಿಗೆಯನ್ನು ಓದಿ ಬೆಳೆದವರು ನಾವು .ಪತ್ರಿಕೆ ಲೋಕಕಲ್ಯಾಣಕ್ಕಾಗಿ ಮೂಡಿ ಬಂದಿದ್ದು ಸಮಾಜವನ್ನು ತಿದ್ದುವ ಕಾರ್ಯ ಪತ್ರಿಕೆ ಮಾಡಿದೆ.ಮನುಷ್ಯ ಬದಲಾವಣೆ ಮತ್ತು ಅಧುನಿಕತೆಯನ್ನು ಒಪ್ಪಿ ಕೊಂಡಾಗ ಬದುಕಲು ಸಾಧ್ಯ. ಈ ಬದುಕನ್ನು ನಿರ್ಮಿಸುವಲ್ಲಿ ಪತ್ರಿಕೆಯ ಹಾಗೂ ಸಾಹಿತಿಗಳ ಪಾತ್ರ ಬಹಳಷ್ಠಿದೆ.ನೀರಿನಲ್ಲಿ ಸ್ನಾನ ಮಾಡಿದವನು ಬಟ್ಟೆ ಬದಲಾಯಿಸುತ್ತಾನೆ . ಅದರೆ ಬೆವರಿನಲ್ಲಿ ಸ್ನಾನ ಮಾಡಿದವರು ದೇಶ ಕಟ್ಟುತ್ತಾರೆ. ರಾಮನವಮಿಯ ದಿನದಂದು ಪತ್ರಿಕೆಯ ದಶಮಾನೋತ್ಸವ ಆಚರಿಸುತ್ತಿರುವ ಪ್ರಕಾಶ್ ಕುಂಠಿನಿ ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡತನವನ್ನು ಕಟ್ಟುವ ಪಾತ್ರ ಬಹಳಷ್ಠಿದೆ. ಪ್ರಕಾಶ್ ಕುಂಠಿನಿಯವರ ಪ್ರೀತಿಗೆ ತಲೆಬಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಹೆಮ್ಮೆಯಿಂದ ನುಡಿದರು.

ಅತಿಥಿ ,ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡುತ್ತಾ ಪತ್ರಿಕೆಯ ದಶಮಾನೋತ್ಸವದ ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂಬ ಅಭಿಮಾನವಿದೆ. ಉತ್ತಮ ವಿಚಾರ ಸಂಕಿರಣ, ಹಾಸ್ಯ ಕವಿ ಗೋಷ್ಠಿ ಒಳ್ಳೆಯದಾಗಿ ಮೂಡಿ ಬಂದಿದೆ. ಈ ಕಾರ್ಯಕ್ರಮ ಮನಸ್ಸಿಗೆ ಬಹಳಷ್ಟು ಮುದ ನೀಡಿತು. ಉತ್ತಮ ಲೇಖನ ಹಾಗೂ  ಗುಣಮಟ್ಟದ ಬರವಣಿಗೆಯ ಮೂಲಕ ಛಾಯಾಕಿರಣ ಪತ್ರಿಕೆ ದಶಮಾನೋತ್ಸವವನ್ನು ಅಚರಿಸಿತು. ಕುಂಠಿನಿ ಪ್ರಕಾಶ್ ಹೆಗ್ಡೆಯವರ ಮುತುವರ್ಜಿಯಲ್ಲಿ ಪತ್ರಿಕೆ ರಜತ ಮಹೋತ್ಸವವನ್ನು ಅಚರಿಸುವಂತಾಗಲಿ ಎಂದು ಹಾರೈಸಿದರು.

ಅತಿಥಿ ,ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಮಾತನಾಡುತ್ತಾ ಪ್ರಕಾಶ್ ಕುಂಠಿನಿಯವರ ಸಂಪಾದಕತ್ವದಲ್ಲಿ ಛಾಯಾಕಿರಣ  ಒಂದು ಗುಣಮಟ್ಟದ ಪತ್ರಿಕೆ ಎನ್ನಲು ಅಭಿಮಾನವಾಗುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಓದುಗರ ಮನಗೆಲ್ಲುವಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಪತ್ರಿಕೆ ಇದೇ ರೀತಿ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಿ, ನಮ್ಮ ಸಹಕಾರ ಸದಾ ಇದೆ ಎಂದರು.

ಅತಿಥಿ ,ಬಂಟರ ಸಂಘದ ಶಿಕ್ಷಣ ಸಂಸ್ಥೆಯ ಉಪಕಾರ್ಯಾಧ್ಯಕ್ಷ ನಿತ್ಯಾನಂದ ಹೆಗ್ಡೆ ಮಾತನಾಡುತ್ತಾ ಪತ್ರಿಕೆಯು ಹತ್ತು ವರ್ಷದಲ್ಲಿ 120 ವಿಭಿನ್ನ ರೀತಿಯಲ್ಲಿ ಸಂಚಿಕೆಗಳನ್ನು ತಂದಿದೆ. ಪತ್ರಿಕೆಯ ಸಂಪಾದಕ ಮತ್ತು ನಾನು ಬಾಲ್ಯದಿಂದಲೂ ಉತ್ತಮ ಒಡನಾಡಿ, ಸಂಸ್ಕಾರಯುತರು .ಪತ್ರಿಕೆ ಇನ್ನಷ್ಟು ಪ್ರಗತಿಯನ್ನು ಕಾಣಲಿ  ಎಂದರು.

ಅತಿಥಿ ಪತ್ರಿಕೆಯ ನಿರ್ದೇಶಕರಾದ ಸತೀಶ್ ಶೆಟ್ಟಿ ಮಾತನಾಡುತ್ತಾ ಪ್ರಕಾಶ್ ಕುಂಠಿನಿ ಸ್ವಾಭಿಮಾನಿ.  ಅವರು ಯಾವತ್ತೂ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸುವವರಲ್ಲ, ಪತ್ರಿಕೆಯನ್ನು ಪ್ರಾರಂಭಿಸುವಾಗ ಮೂರು ವರ್ಷ ಪತ್ರಿಕೆ ನಡೆದರೆ ಸಾಕು ಎನ್ನುತ್ತಿದ್ದರು ಅದರೆ ಇಂದು ಪತ್ರಿಕೆ ದಶಮಾನೋತ್ಸವವನ್ನು ಅಚರಿಸುತ್ತಿದೆ .ಇಂದಿನ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನೋಡುವಾಗ ಪತ್ರಿಕೆ ಖಂಡಿತವಾಗಿಯೂ ರಜತ ಮಹೋತ್ಸವ ಅಚರಿಸುವುದರಲ್ಲಿ ಸಂದೇಹವಿಲ್ಲ. ಈ ಗುಣಮಟ್ಟದ ಪತ್ರಿಕೆಗೆ ನಾವೆಲ್ಲರೂ ಸಹಕಾರ ನಿಡೋಣ ಎಂದರು.

ಅತಿಥಿ ತ್ರಿವೇಣಿ ಗ್ರೂಪ್ ಅಫ್ ಕಂಪೆನಿಯ ನಿರ್ದೇಶಕರಾದ ಮನೋರಮಾ ಶೆಟ್ಟಿ ಮಾತನಾಡುತ್ತಾ ಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಬಹಳಷ್ಟು ಪ್ರಾತಿನಿಧ್ಯ ನೀಡಿದ್ದೀರಿ .ಛಾಯಾಕಿರಣ ಪತ್ರಿಕೆ ತನ್ನ ಗುಣಮಟ್ಟವನ್ನು ಕಾಪಾಡಿಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ಇದೇ ಸಂಧರ್ಭದಲ್ಲಿ ಪತ್ರಿಕೆಯ ದಶಮಾನೋತ್ಸವ ಸಂಚಿಕೆಯನ್ನು ಚಂಡೆ ಕೊಂಬು ಕಹಳೆಯೊಂದಿಗೆ ಕುಮಾರಿ ಸವಿಕ್ಷಾ ಸತೀಶ್ ಶೆಟ್ಟಿ ಕೈಯಲ್ಲಿ ತಂಬೂರಿಯನ್ನು ಹಿಡಿದು ಶಾರದಾ ದೇವಿಯ ರೂಪದಲ್ಲಿ ಚಿಣ್ಣರ ಬಿಂಬದ ಮಕ್ಕಳೊಂದಿಗೆ ವೇದಿಕೆಗೆ ತಂದರು. ವೇದಿಕೆಯ ಮೇಲಿದ್ದ ಗಣ್ಯರು ಈ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಪತ್ರಿಕೆಯ ಸಂಪಾದಕ ಪ್ರಕಾಶ್ ಹೆಗ್ಡೆ ಕುಂಠಿನಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು

ಪ್ರವೀಣಾ ಪ್ರಕಾಶ್ ಶೆಟ್ಟಿ ಮತ್ತು ಸೂರಿ ಮಾರ್ನಾಡ್ ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸ ಬೇಕೆಂಬ ಮನವಿಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಖ್ಯಾತ ಲೇಖಕಿ, ಖ್ಯಾತ ನಿರೂಪಕಿ ಶಾಲಿನಿ ಶೆಟ್ಟಿ ಅಜೆಕಾರ್ ಹಾಗೂ ಶೆರೊನ್ ಶೆಟ್ಟಿ ಐಕಳ ಇವರನ್ನು ‘ಛಾಯಾಕಿರಣ ಸಾಹಿತ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು ಹಾಗೂ ಪತ್ರಿಕೆಯ ನಿರ್ದೇಶಕರಾದ ಸತೀಶ್ ಎನ್. ಶೆಟ್ಟಿ ಮುಖ್ಯ ಪ್ರವರ್ತಕರಾದ ಪ್ರವೀಣ್ ಭೋಜ ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ರಮೇಶ್ ಶೆಟ್ಟಿ ಸಿದ್ದಕಟ್ಟೆ , ಮನೋರಮಾ ಎನ್. ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ಸ್ವರ್ಣ ಪೋಷಕ ಸದಸ್ಯರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಸಮಾರೋಪದ ಮೊದಲಿಗೆ ನಿತ್ಯಾನಂದ ಪಡ್ರೆಯ ಅಧ್ಯಕ್ಷತೆಯಲ್ಲಿ ಮಾಧ್ಯಮ ಮತ್ತು ಸಮಾಜ ಎಂಬ ವಿಷಯದ ಮೇಲೆ ದಯಾಸಾಗರ್ ಚೌಟ, ಹರೀಶ್ ಹೆಜಮಾಡಿ  ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಚಾರ ಸಂಕಿರಣ ನಡೆಯಿತು. ಅಶೋಕ್ ಪಕ್ಕಳರ ಅಧ್ಯಕ್ಷತೆಯಲ್ಲಿ ನಾರಾಯಣ ಶೆಟ್ಟಿ ನಂದಳಿಕೆ, ಡಾ.ಜಿ.ಪಿ.ಕುಸುಮ, ಸೋಮನಾಥ ಕರ್ಕೇರ, ಸೂರಿ ಮಾರ್ನಾಡ್ ಮತ್ತು ಅಶೋಕ್ ವಳದೂರು ಇವರ ಉಪಸ್ಥಿತಿಯಲ್ಲಿ ಹಾಸ್ಯ ಕವಿ ಗೋಷ್ಠಿ  ಜರಗಿತು. ಮನರಂಜನೆ ಅಂಗವಾಗಿ‌

ಅಮಿತಾ ಕಲಾ ಮಂದಿರ ಮೀರಾ ರೋಡ್ ಇದರ ಸದಸ್ಯರಿಂದ ನೃತ್ಯ ವೈಭವ, ಬೆಂಗಳೂರು ಅವಿಷ್ಕಾರ್ ತಂಡದಿಂದ ಗೋಸುಂಬೆ ಕಿರು ನಾಟಕ ನಡೆಯಿತು.

ಸಮೂಹ ಗಾಯನ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ 12,000 ನಗದು ಹಾಗೂ ಫಲಕವನ್ನು ನವೋದಯ ಕನ್ನಡ ಸಂಘ ಥಾಣೆ, ದ್ವಿತೀಯ ಬಹುಮಾನ 8,000ನಗದು ಹಾಗೂ ಫಲಕವನ್ನು ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ಡೊಂಬಿವಲಿ, ತೃತೀಯ ಬಹುಮಾನ  5,000 ನಗದು ಹಾಗೂ ಫಲಕವನ್ನು ಜೈ ಭವಾನಿ ಶ್ರೀ ಶನೀಶ್ವರ ಮಂದಿರ ಡೊಂಬಿವಲಿ ಪಡೆದರು. ಹಾಗೂ ಭಾಗವಹಿಸಿದ ಪ್ರತಿ ತಂಡವನ್ನು ಗೌರವ ಧನ ನೀಡಿ ಸತ್ಕರಿಸಲಾಯಿತು.

ಇದಕ್ಕೂ ಮೊದಲು ವೇದಿಕೆಯ ಮೇಲಿದ್ದ ಹತ್ತು ದೀಪವನ್ನು ಬೆಳಗಿಸುವುದರ ಮೂಲಕ ಸಮರೋಪ ಕಾರ್ಯಕ್ರಮದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಾರೋಪದ ವೇದಿಕೆಯ ಮೇಲೆ ಡಾ. ಕೆ. ಪ್ರಕಾಶ್ ಶೆಟ್ಟಿ, ಶಾಸಕ ಗುರ್ಮೆ ಪ್ರಕಾಶ್ ಶೆಟ್ಟಿ, ಪ್ರವೀಣ್ ಬಿ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ,  ಸತೀಶ್ ಎನ್. ಶೆಟ್ಟಿ, ಮನೋರಮಾ ಎನ್ ಬಿ. ಶೆಟ್ಟಿ, ನಿತ್ಯಾನಂದ ಹೆಗ್ಡೆ, ಜ್ಯೋತಿ ಹೆಗ್ಡೆ ಕುಂಠಿನಿ, ಶಾಲಿನಿ ಶೆಟ್ಟಿ ಅಜೆಕಾರ್ ಉಪಸ್ಥಿತರಿದ್ದರು.

ವಿಜಯ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರೂಪಿದರು.ಡಾ. ಶಿಶಿರ್ ಜೆ. ಶೆಟ್ಟಿ ವಂದಿಸಿದರು.

—-

ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅತಿಥಿ ಗಣ್ಯರು.

ಛಾಯಕಿರಣ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಶರೊನ್ ಶೆಟ್ಟಿ ಐಕಳ ಮತ್ತು ಶಾಲಿನಿ ಶೆಟ್ಟಿ ಅಜೆಕಾರ್

 ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ನವೋದಯ ಕನ್ನಡ ಸಂಘ ಥಾಣೆ

ಸಮೂಹ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ಡೊಂಬಿವಲಿ

ಸಮೂಹ ಗಾಯನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ  ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ

ಮುಖ್ಯ ಅತಿಥಿ ಡಾ. ಕೆ. ಪ್ರಕಾಶ್ ಶೆಟ್ಟಿಯವರನ್ನು ಸತ್ಕರಿಸಿದಾಗ

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಸತ್ಕರಿಸಿದಾಗ

Related posts

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk

ತಿಂಗಳಾಯ ಮೂಲಸ್ಥಾನ ಸಭಾ ಮುಂಬಯಿ ಶಾಖೆಯ ವತಿಯಿಂದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಮಹಿಳಾ ವಿಭಾಗದಿಂದ ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್

Mumbai News Desk

ಬಿಲ್ಲವರ ಅಸೋಸಿಯೇಷನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ತುಳು ಸಂಪ್ರದಾಯ ಕಾರ್ಯಕ್ರಮ ಆಟಿಡೊಂಜಿ ಕೂಟ

Mumbai News Desk

ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಇ ಬಾರಿಯ ಆದಾಯದ ವಿವರ ಇಲ್ಲಿದೆ.

Mumbai News Desk

 ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ,

Mumbai News Desk