September 6, 2026
Mumbai News Kannada
ಮುಂಬಯಿ

ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ – ಪುಣ್ಯ ಕ್ಷೇತ್ರಗಳಿಗೆ ಧಾರ್ಮಿಕ ಯಾತ್ರೆ





   ಮುಂಬಯಿ. ಜ.15-   ಕಳೆದ ೫೨ ವರುಷಗಳಿಂದ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತ ಶ್ರೀ ಶನೀಶ್ವರ ದೇವಸ್ಥಾನ ಮಲಾಡ್ ಕುರಾರ್ ವಿಲೇಜ್ ಪೂರ್ವ, ಮುಂಬೈ.  ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಲು  ಸುಮಾರು 20 ವರುಷಗಳಿಂದ ಕ್ಷೇತ್ರದ ಸದಸ್ಯರನ್ನು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿನೀಡಿಸುವ  ಮುಖೇನ ಅಲ್ಲಿಯ ಆಚಾರ -ವಿಚಾರ, ಕ್ಷೇತ್ರದ ವಿಶೇಷತೆ ಹಾಗು ಹಿನ್ನಲೆ, ಭಕ್ತರ ಸಮರ್ಪಣಾ ಭಾವ, ಸಂಸ್ಕೃತಿ, ನಡೆ -ನುಡಿ ಕಲಿಯುವ ಹಾಗು ಪುಣ್ಯ ದರ್ಶನದ ಭಾಗ್ಯ ಒದಗಿಸುವ ಕೆಲಸ ನಿರಂತರ ಜರಾಗುತ್ತಾ ಬಂದಿದೆ.  ಮದುರೈ -ಕನ್ಯಾಕುಮಾರಿ, ರಾಮೇಶ್ವರ, ತಿರುಪತಿ, ಬದ್ರಿನಾಥ್, ಹರಿದ್ವಾರ್, ರಿಷಿಕೇಶ್, ವೈಷನೋ ದೇವಿ ಮಂದಿರ, ವಾಘಾ ಬಾರ್ಡರ್, ಪಂಜಾಬಿನ -ಗೋಲ್ಡನ್ ಟೆಂಪಲ್, ದೆಹಲಿಯಾ ತಾಜ್ ಮಹಲ್, ಕೋಲಾಪುರ್ ಮಹಾಲಕ್ಷ್ಮಿ ಟೆಂಪಲ್ ಗೆ  ಪುಣ್ಯ ಕ್ಷೇತ್ರಕ್ಕೆ ಯಾತ್ರೆ ಮಾಡುವ ಭಾಗ್ಯ ಒದಗಿದೆ. ತಾ ; ೩ರ ರಾತ್ರಿ ಸುಮಾರು ೯೫ ಯಾತ್ರಿಗಳೊಂದಿಗೆ ಹೊರಟ ಯಾತ್ರೆ, ಕಾಶಿ ವಿಶ್ವನಾಥ್ ದೇವಸ್ತಾನ, ವಿಶಾಲಾಕ್ಷಿ ಮಂದಿರ, ಅಶ್ವಮೇಧ ಘಾಟ್, ಅಸ್ಸಿ ಘಾಟ್, ಮಣಿಕರ್ಣಿಕಾ ಘಾಟ್, ಹರೀಶ್ಚಂದ್ರ ಘಾಟ್,  ಸಂಜೆ ನಡೆಯುವ ಪವಿತ್ರವಾದ ಗಂಗಾ ಆರತಿ ಬೋಟಿನ ಮುಖೇನ ನೋಡುವ ಪುಣ್ಯ ದೊರಕಿತು. ಹಾಗೆಯೆ ಕಾಶಿಯ ಕೊತ್ವಾಲ್ ಆದ ಕಾಲಭೈರವ್ ದೇವಸ್ಥಾನ, ಶಕ್ತಿ ಪೀಠ ವಾದ ಗೌರಮ್ಮ ದೇವಸ್ಥಾನ, ದುರ್ಗಾ ಮಂದಿರ, ಸತ್ಯನಾರಾಯಣ್  ತುಳಸಿ ಮಾನಸ ಮಂದಿರ್, ತ್ರಿದೇವ ಮಂದಿರ್, ಸಂಕಟ ಮೋಚನ ಮಂದಿರ್, ಬನಾರಸ್ ಹಿಂದೂ ಯೂನಿವೆರ್ಸಿಇಟಿ, ಬಿರ್ಲಾ ಟೆಂಪಲ್ ಸಂದರ್ಶನ್ ನೀಡಿದೆವು. ಕಾಶಿಯಿಂದ ರಾಮ ಜನ್ಮ ಬೂಮಿಗೆ ತೆರಳಿ ಅಯೋಧ್ಯಾ ರಾಮ ನ ದರ್ಶನ ಮಾಡಿದೆವು ಹಾಗು ಹನುಮಾನ್ ಗರ್ಹಿ, ಕಣಕ್ ಭವನ್, ಸರಯೂ ರಿವರ್ ಘಾಟ್, ದಶರಥ್ ಮಹಲ್, ನಾಗೇಶ್ವರ್ ನಾಥ್ ಟೆಂಪಲ್, ಸೀತಾ ಕಿ ರಸೋಯಿ, ಲತಾ ಮಂಗ್ಹ್ಯಾಶ್ ಚೌಕ್, ಮುಗಿಸಿ ಪ್ರಯಾಗ್ರಾಜ್ ಗೆ ತೆರಳಿ, ಪ್ರಯಾಗ್ರಾಜ್ ಪರಿಕ್ರಮ ಮುಗಿಸಿದೆವು, ನಾಗ್ ವಾಸುಕಿ ಟೆಂಪಲ್, ವಾಣಿ ಮಹದೇವ್ ಟೆಂಪಲ್, ಶ್ರೀ ಬಡೇ ಹನುಮಾನ್ ಮಂದಿರ್, ಶ್ರೀ ಅಷ್ಟ ದಾಸ್ ಮಧೇಶ್ವರಿ ಶಕ್ತಿ ಪೀಠ, ಹಾಗು ತ್ರಿವೇಣಿ ಸಂಗಮ್ ದರ್ಶನ ಮುಗಿಸಿ ಪುನೀತರಾದೆವು. 

ಭಾರತವು ಅನೇಕ ಧರ್ಮಗಳು ಮತ್ತು ಸಂಸ್ಕೃತಿಗಳ ಸಂಗಮವಾದ ದೇಶ. ಇಲ್ಲಿ ಇರುವ ಪವಿತ್ರ ಸ್ಥಳಗಳು ಆಧ್ಯಾತ್ಮಿಕ ಶಕ್ತಿ ಮತ್ತು ಧಾರ್ಮಿಕ ಪರಂಪರೆಯ ಕೇಂದ್ರಗಳಾಗಿವೆ.  ಯಾತ್ರೆ ಮಾನವ ಜೀವನದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಮೊದಲನೆಯದಾಗಿ, ಯಾತ್ರೆ ಆಧ್ಯಾತ್ಮಿಕ ಶಾಂತಿ ನೀಡುತ್ತದೆ. ದೈನಂದಿನ ಜೀವನದ ಒತ್ತಡಗಳಿಂದ ದೂರವಾಗಿ, ದೇವರ ಸ್ಮರಣೆ ಮತ್ತು ಪ್ರಾರ್ಥನೆಯ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಭಕ್ತರು ತಮ್ಮ ಪಾಪಗಳಿಂದ ವಿಮುಕ್ತಿ ಪಡೆಯಲು ಮತ್ತು ದೇವರ ಕೃಪೆ ಪಡೆಯಲು ಯಾತ್ರೆ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ.ಎರಡನೆಯದಾಗಿ, ಯಾತ್ರೆ ನೈತಿಕ ಮತ್ತು ಆತ್ಮಶುದ್ಧಿಗೆ ಸಹಾಯಕ. ಯಾತ್ರೆಯ ವೇಳೆ ಸಹನೆ, ಶಿಸ್ತು, ಸಹಾನುಭೂತಿ ಮತ್ತು ತ್ಯಾಗದ ಗುಣಗಳು ಬೆಳೆಯುತ್ತವೆ. ಇತರ ಯಾತ್ರಿಕರೊಂದಿಗೆ ಸಹಬಾಳ್ವೆ ನಡೆಸುವುದರಿಂದ ಮಾನವೀಯ ಮೌಲ್ಯಗಳು ಬಲವಾಗುತ್ತವೆ.ಮೂರನೆಯದಾಗಿ, ಯಾತ್ರೆ ಸಾಂಸ್ಕೃತಿಕ ಏಕತೆಯನ್ನು ಉತ್ತೇಜಿಸುತ್ತದೆ. ದೇಶದ ವಿಭಿನ್ನ ಭಾಗಗಳಿಂದ ಬಂದ ಜನರು ಒಂದೇ ಧಾರ್ಮಿಕ ಉದ್ದೇಶಕ್ಕಾಗಿ ಸೇರುವುದರಿಂದ ರಾಷ್ಟ್ರೀಯ ಏಕತೆ ಮತ್ತು ಸಹೋದರತ್ವ ಬೆಳೆಸುತ್ತದೆ. ವಿಭಿನ್ನ ಭಾಷೆ, ಉಡುಗೆ, ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಅವಕಾಶವೂ ಸಿಗುತ್ತದೆ.

ಕೊನೆಗೆ, ಪವಿತ್ರ ಸ್ಥಳಗಳ ಯಾತ್ರೆ ಪರಂಪರೆ ಮತ್ತು ಇತಿಹಾಸವನ್ನು ಅರಿಯಲು ಸಹಾಯ ಮಾಡುತ್ತದೆ. ದೇವಾಲಯಗಳು, ಮಠಗಳು ಮತ್ತು ಹರಿಯುವ ನಧಿಗಳು  ನಮ್ಮ ಸಂಸ್ಕೃತಿಯ ಜೀವಂತ ಸಾಕ್ಷಿಗಳಾಗಿವೆ.

 ಪವಿತ್ರ ಸ್ಥಳಗಳ ಯಾತ್ರೆ ಮಾನವನಿಗೆ ಆಧ್ಯಾತ್ಮಿಕ, ನೈತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಬಹುಮುಖ್ಯವಾದದ್ದು. ಇದು ಜೀವನಕ್ಕೆ ಹೊಸ ದೃಷ್ಟಿಕೋನ ಮತ್ತು ಶಾಂತಿಯನ್ನು ನೀಡುತ್ತದೆ ಎನ್ನುತ್ತಾರೆ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ಸಪಲ್ಯ ರು. ಈ ಪುಣ್ಯ ಯಾತ್ರೆಗೆ ಸಹಕರಿಸಿದ ಶನಿ ಮಹಾತ್ಮಾ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿ, ಶನಿ ಮಹಾತ್ಮಾ ಚಾರಿಟೇಬಲ್ ಸೊಸೈಟಿ ಅಧ್ಯಕ್ಶರಾದ ಶ್ರೀಯುತ ಇನ್ನ ಪ್ರಭಾಕರ್ ಶೆಟ್ಟಿ, ಯಾತ್ರೆಯ ಮೇಲ್ವಿಚಾಕರಾದ ಮಹೇಶ್ ಸಾಲಿಯಾನ್, ಹಾಗು ಜಟಾಯು – ಅಂಗದ- ಭರತ್- ಸುಗ್ರೀವ- ಜಾಂಬವಂತ – ವಿಭೀಷಣ ಪಂಗಡ ದ್ ಎಲ್ಲಾ ಮುಖಂಡರಿಗೆ, ಸಹಕರಿಸಿದ ಶ್ರೀಯುತ ದೀಪಕ್ ಕುಂದರ್ ಇವರಿಗೆ ಕ್ಷೇತ್ರ ಋಣಿಯಾಗಿದೆ.



Related posts

ಕಿಸನ್ ನಗರ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆ

Mumbai News Desk

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,

Mumbai News Desk

ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಆಷಾಢ ವೈಭವ ಮತ್ತು ಅಡುಗೆ ಸ್ಪರ್ಧೆ

Mumbai News Desk

ನೈನ್ ಹ್ಯಾಂಡ್ಸ್ ಫೌಂಡೇಶನ್ ಮುಂಬಯಿ: ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ

Mumbai News Desk

ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ (ಪ),  ವಾರ್ಷಿಕ ಮಹಾಪೂಜೆ, ಸಾಧಕರಿಗೆ ಸನ್ಮಾನ

Mumbai News Desk

ಮಾಟುಂಗಾ ಮುಂಬೈ ಕನ್ನಡ ಸಂಘದ ವತಿಯಿಂದ ದತ್ತಿ ಉಪನ್ಯಾಸಗಳ ಕಾರ್ಯಕ್ರಮ

Mumbai News Desk