27.2 C
Karnataka
April 17, 2025
ಪ್ರಕಟಣೆ

ಬಂಟರ ಸಂಘ ಮುಂಬಯಿ : ಎ. 18 ರಂದು ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ  ಅರೋಗ್ಯ ಉಪನ್ಯಾಸ



ಮುಂಬಯಿ, ಎ. 16 ; ಮಹಿಳಾ  ಆರೋಗ್ಯ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಹಾಗೂ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಎಪ್ರಿಲ್ 18 ರಂದು ಶುಕ್ರವಾರ  ಸಂಜೆ ಗಂಟೆ 3:00 ರಿಂದ  ಮೀರಾ ರೋಡ್ ಪೂರ್ವದ

ಹೋಟೆಲ್ ಬಾಲಾಜಿ ಇಂಟರ್ನ್ಯಾಷನಲ್ , ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿ ಹತ್ತಿರ , ಭಾರತಿ ಪಾರ್ಕ್ ,  ಮೀರಾ ರೋಡ್ (ಪೂ)  ಇಲ್ಲಿ ಜರಗಲಿದೆ.

ಈ ನಿಟ್ಟಿನಲ್ಲಿ ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಬಂಟರ ಆರೋಗ್ಯ ದೃಷ್ಟಿಯಿಂದ ವಿಶಿಷ್ಟ ಕಾರ್ಯಕ್ರಮ ಹಮ್ಮಿ ಕೊಂಡಿದೆ.  ಬಂಟರ ಸಂಘದ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಸ್ವರೂಪ್ ಹೆಗ್ಡೆ , ಪ್ರಾದೇಶಿಕ ಸಮಿತಿಯ ಆರೋಗ್ಯ ವಿಭಾಗದ ಕಾರ್ಯಾಧ್ಯಕ್ಷೆ  ಡಾ. ರಿಯಾ ಶೆಟ್ಟಿ  ಮತ್ತು ದೀಪಕ್ ಹಾಸ್ಪಿಟಲ್, ಮೀರಾರೋಡ್ ಇದರ ಎಂ.ಡಿ. ಡಾ. ಭಾಸ್ಕರ್ ಶೆಟ್ಟಿಯವರ  ಮಾರ್ಗದರ್ಶನದಲ್ಲಿ  , ಡಾ. ಎನ್. ಎ. ಹೆಗ್ಡೆ , ಡಾ. ಸತೀಶ್ ಶೆಟ್ಟಿ , ಡಾ. ಗೌರೀಶ್ ಶೆಟ್ಟಿ , ಡಾ. ಪ್ರಾರ್ಥಸ್ವಿನಿ ಶೆಟ್ಟಿಯವರ ವಿಶೇಷ ಸಹಕಾರ ಹಾಗೂ ಗಿರೀಶ್ ಶೆಟ್ಟಿ ತೆಳ್ಳಾರ್ ಇವರ ಸಂಪೂರ್ಣ ಬೆಂಬಲದೊಂದಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಹಿಳಾ  ಕ್ಯಾನ್ಸರ್ ರೋಗದ ಬಗ್ಗೆ  ಮಾರ್ಗದರ್ಶನವನ್ನು ಡಾ. ಪ್ರಾರ್ಥಸ್ವಿನಿ ಶೆಟ್ಟಿ ಹಾಗೂ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ  ಆರೋಗ್ಯ ವಿಭಾಗದ ಕಾರ್ಯಾಧ್ಯಕ್ಷೆ ಸೌಂದರ್ಯ ಹಾಗೂ ಚರ್ಮರೋಗ ತಜ್ಞರಾದ ಡಾ. ರಿಯಾ ಶೆಟ್ಟಿಯವರು ಮೊಡವೆ ಸಮಸ್ಯೆಯ ಬಗ್ಗೆ ಮತ್ತು ಚರ್ಮ ರೋಗಕ್ಕೆ ಸಂಬಂಧಿಸಿದ ಕಾಯಿಲೆ ಬಗ್ಗೆ ತಪಾಸಣೆ ಹಾಗೂ ಮುಂಜಾಗೃತ ಸಲಹೆ ಸೂಚನೆಗಳನ್ನು ನೀಡಲಿರವರು.  ಬಂಟ ಭಾಂದವರಿಗೆ ಈ ಶಿಬಿರವು ಮುಕ್ತವಾಗಿದ್ದು ಇದರ ಲಾಭವನ್ನು  ಪಡೆದು ಕೊಳ್ಳ ಬೇಕೆಂದು ಬಂಟರ ಸಂಘದ 

 ಮಹೇಶ್ ಎಸ್. ಶೆಟ್ಟಿ -(ಉಪಾಧ್ಯಕ್ಷರು) , ಡಾ. ಆರ್. ಕೆ. ಶೆಟ್ಟಿ -(ಗೌರವ ಪ್ರದಾನ ಕಾರ್ಯದರ್ಶಿ) , ಸಿಎ ರಮೇಶ್ ಬಿ. ಶೆಟ್ಟಿ -(ಗೌರವ ಕೋಶಾಧಿಕಾರಿ) ,  ಗಿರೀಶ್ ಆರ್. ಶೆಟ್ಟಿ ತೆಳ್ಳಾರ್ (ಜೊತೆ ಕಾರ್ಯದರ್ಶಿ) ,  ಶಶಿಧರ್ ಕೆ. ಶೆಟ್ಟಿ   (ಜೊತೆ ಕೋಶಾಧಿಕಾರಿ), ಶ್ರೀಮತಿ ಚಿತ್ರ ಆರ್. ಶೆಟ್ಟಿ(ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ) , ಸವಿನ್ ಜೆ. ಶೆಟ್ಟಿ(ಕಾರ್ಯಧ್ಯಕ್ಷ , ಯುವ ವಿಭಾಗ) ,   ಭಾಸ್ಕರ್ ಶೆಟ್ಟಿ ಖಾಂದೇಶ್ (ಸಮನ್ವಯಕರು , ಪಶ್ಚಿಮ ವಲಯ) .

ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು. ಸಂಚಾಲಕ : ಶಿವ ಪ್ರಸಾದ್ ಶೆಟ್ಟಿ, ಉಪ ಕಾರ್ಯಧ್ಯಕ್ಷ : ಅರವಿಂದ ಎ. ಶೆಟ್ಟಿ, ಕಾರ್ಯದರ್ಶಿ: ಬಾಬಾ ಪ್ರಸಾದ್ ಅರಸ ಕುತ್ಯಾರು , ಕೋಶಾಧಿಕಾರಿ: ಶಂಕರ್ ಶೆಟ್ಟಿ ಬೋಳ , ಜೊತೆ ಕಾರ್ಯದರ್ಶಿ: ರಮೇಶ್ ಶೆಟ್ಟಿ ಸಿದ್ದಕಟ್ಟೆ , ಜೊತೆ ಕೋಶಾಧಿಕಾರಿ: ಜಗದೀಶ್ ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ  ಶ್ರೀಮತಿ ವಸಂತಿ ಎಸ್. ಶೆಟ್ಟಿ , ಯುವ ವಿಭಾಗ ಕಾರ್ಯಧ್ಯಕ್ಷ

 ವರ್ಷಭ್ ಶೆಟ್ಟಿ , ಹಾಗೂ ಉಪ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗುತ್ತಿನಾರ್ ರವೀಂದ್ರ ಶೆಟ್ಟಿ (9004400481) , ಡಾ. ರಿಯಾ ಶೆಟ್ಟಿ ( 91670 17402) , ಬಾಬಾ ಪ್ರಸಾದ್ ಅರಸ ಕುತ್ಯಾರು (9819200707) , ವಸಂತಿ ಎಸ್. ಶೆಟ್ಟಿ (9892097549) , ಸುಮಂಗಳ ಕಣಾಂಜಾರ್ (9920931608) , ವರ್ಷಭ್ ಶೆಟ್ಟಿ (88799 66490) ಸಂಪರ್ಕಿಸ ಬಹುದಾಗಿದೆ.

—–

B. Dinesh Kulal

Mob.: 9821868674

Related posts

ಮದರ್ ಇಂಡಿಯಾ ಫ್ರೀ ನೈಟ್ ಹೈಸ್ಕೂಲ್ ನ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ವತಿಯಿಂದ ಸೆ. 14, 15ರಂದು ಗುರುವಂದನೆ ಮತ್ತು ತವರೂರು ಕಾಣಿಕೆ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ : ಫೆ 4 ರಂದು ವಸಯಿ-ದಾಹಣು ಪ್ರಾದೇಶಿಕ ಸಮಿತಿ ಇದರ ನೂತನ ಸಮಿತಿಯ ಪದಗ್ರಹಣ ಸಮಾರಂಭ

Mumbai News Desk

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk

ಜ. 28  ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ 

Mumbai News Desk

ಡಿ. 25 : ಶ್ರೀ ಅಯ್ಯಪ್ಪ ಸೇವಾ ಮಂಡಳಿ ಸಯನ್ – 36ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ

Mumbai News Desk