32 C
Mumbai
March 7, 2026
Mumbai News Kannada
ಸುದ್ದಿ

ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ, ಸಾಧನೆಗೆ ಪ್ರೇರಣೆ : ದೇವಿಪ್ರಸಾದ್ ಶೆಟ್ಟಿ ಬೆಳಪು.





ಮುಲ್ಕಿ : ಬೆಳಪು ಎಂಬ ಗ್ರಾಮೀಣ ಭಾಗದಿಂದ ಬೆಳೆದ ತನಗೆ ವಿಶ್ವಮಟ್ಟದಲ್ಲಿ ವಾಸ್ತುತಜ್ಞರಾಗಿ ಮನ್ನಣೆ ಪಡೆದಿರುವ ಪರಮಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ ನನ್ನ ಬದುಕಿನ ಸಾಧನೆಗೆ ಮೂಲ ಪ್ರೇರಣೆಯಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ನೀಡಿದವರು. ಅಚಲ ನಂಬಿಕೆಯೊಂದಿಗೆ ಸಮಾಜದ ಸ್ಪಂದನೆಯ ಜೊತೆಗೆ ನಾಯಕತ್ವದ ಔದಾರ್ಯತೆಯ ಹಿನ್ನೆಲೆಯನ್ನು ತಿಳಿಹೇಳಿರುವುದರಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದು ಕರ್ನಾಟಕ ರಾಜ್ಯ ಹಾಲು ಮಹಾಮಂಡಲ ನಿಯಮಿತ ಬೆಂಗಳೂರು (ಕೆ.ಎಂ.ಎಫ್) ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.
ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಕರ್ನಾಟಕ ರಾಜ್ಯ ಹಾಲು ಮಹಾಮಂಡಲ ನಿಯಮಿತ ಬೆಂಗಳೂರು (ಕೆ.ಎಂ.ಎಫ್) ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದ ವಿಶೇಷವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಆಶ್ರಮದ ವತಿಯಿಂದ ತಿರುಪತಿಯ ವಿಶೇಷ ಶೇಷವಸ್ತ್ರ, ಸನ್ಮಾನ ಫಲಕ ಹಾಗೂ ಸ್ಮರಣಿಕೆಯೊಂದಿಗೆ ಗಣ್ಯರ ಸಮ್ಮುಖದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಸನ್ಮಾನಿಸಿದರು.
ಆಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್, ರಾಹುಲ್ ಸಿ. ಭಟ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ , ಭದ್ರತಾ ಅಧಿಕಾರಿಗಳಾದ ಪ್ರೇಮ್ ಕುಮಾರ್, ಶಿವರಾಜ್ ಕೆ, ಮೋಹನ್ ಕುಮಾರ್,ದೇವರಾಜ್ ಯಡಗೆ ಮತ್ತಿತರರು ಉಪಸ್ಥಿತರಿದ್ದರು
ಪುನೀತ್ ಕೃಷ್ಣ ಸ್ವಾಗತಿಸಿ ನಿರೂಪಿಸಿದರು.

ಸಮಯ ಮತ್ತು ಸಹನೆಯ ಪಾಠ : ಶ್ರೀ ಚಂದ್ರಶೇಖರ ಸ್ವಾಮೀಜಿ
ಪ್ರತಿಯೊಂದು ಸಾಧಕನ ಪರಿಶ್ರಮದ ಸಾಧನೆಯ ಹಿಂದೆ ಸಮಯ ಮತ್ತು ಸಹನೆಯ ಪಾಠ ಇರುತ್ತದೆ. ಬೆಳಪುವಿನ ಗ್ರಾಮೀಣ ಭಾಗದ ಪ್ರತಿಭೆಯಾಗಿ ಶಿಕ್ಷಣ ಜೀವನದಲ್ಲಿಯೇ ಉತ್ತಮ ನಾಯಕತ್ವಗುಣ ವಿಶೇಷತೆಯನ್ನು ಮೈಗೂಡಿಸಿಕೊಂಡಿರುವ ಐಕಳಬಾವ ಡಾ,ದೇವಿಪ್ರಸಾದ್ ಶೆಟ್ಟಿ ಅವರು ಸಹಕಾರ ಮತ್ತು ತುಳುನಾಡ ಜನಪದ ಕ್ಷೇತ್ರದಲ್ಲಿ ಉತ್ತಮ ಸಂಘಟನಾತ್ಮಕ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಪ್ರಯತ್ನಿಸುವಾಗ ಮತ್ತು ಅದಕ್ಕೆ ಅವಕಾಶ ನೀಡಿದಾಗ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ ಅದು ನಮಗೆ ಒಳಿತನ್ನೇ ಮಾಡುತ್ತದೆ. ಇದು ಜೀವನದ ಯಶಸ್ಸಿನ ಸೂತ್ರ
.

/# ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಅಂತಾರಾಷ್ಟ್ರಿಯ ವಾಸ್ತು ತಜ್ಞರು. ಅಧ್ಯಾತ್ಮಿಕ ವಿಶ್ವ ಗುರು..



Related posts

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉದಯ ಎಸ್. ಶೆಟ್ಟಿ

Mumbai News Desk

ಪತ್ರಕರ್ತರ ಸಂಘದಿಂದ ಐಕಳ ಹರೀಶ್ ಶೆಟ್ಟಿ ಅವರಿಗೆ ಗೌರವ

Mumbai News Desk

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ ಕುಮಾರಿ ಜಾನ್ವಿ ರಾಜೇಶ್ ಕುಲಾಲ್ ರವರಿಗೆ 87%_ಅಂಕ

Mumbai News Desk

ಕುಂಬಳೆ : ಡಿವೈಎಫ್ಐ ಪ್ರ‌ಮುಖ ನಾಯಕಿ, ಯುವ ನ್ಯಾಯವಾದಿ ರಂಜಿತಾ ಆತ್ಮಹತ್ಯೆಗೆ ಶರಣು

Mumbai News Desk

ದುಬೈನಲ್ಲಿ 21 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದ ತೀಯಾ ಸಮಾಜ ಫ್ಯಾಮಿಲಿ.

Mumbai News Desk

ಕರ್ನಿರೆ ಫೌಂಡೇಷನ್ ವತಿಯಿಂದ 27ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ,

Mumbai News Desk