July 23, 2026
Mumbai News Kannada
ಸುದ್ದಿ

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉದಯ ಎಸ್. ಶೆಟ್ಟಿ







ಮುಂಬಯಿ : ವೈಟ್ ಲಿಫ್ಟರ್ ನಲ್ಲಿ ದೇಶ ವಿದೇಶಗಳಲ್ಲಿ ವಿವಿದೆಡೆ ಮಿಂಚುತ್ತಿರುವ, ಖ್ಯಾತ ವೈಟ್ ಲಿಫ್ಟರ್, ಏಷ್ಯನ್ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಕಮಿಟಿ ಯ ಸದಸ್ಯ ಮುಂಬಯಿಯ ಉದಯ ಎಸ್. ಶೆಟ್ಟಿ ಯವರನ್ನು ಭಾರತದಿಂದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಾಗಿ ಕತಾರ್ ದೋಹಾಕ್ಕೆ ಆಹ್ವಾನಿಸಲಾಗಿದೆ. ಉದಯ ಎಸ್. ಶೆಟ್ಟಿ ಯವರು ಮೂಲತ ಉಡುಪಿ ಕಟಪಾಡಿ ಸಮೀಪದ ಮಣಿಪುರದವರು.

ಹಲವಾರು ವರ್ಷಗಳಿಂದ ಭಾರತೀಯ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ, ಇವರು ಭಾರತದಲ್ಲಿ ವೇಟ್‌ಲಿಫ್ಟಿಂಗ್ ಕ್ರೀಡೆಯನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು ದೇಶದಲ್ಲಿ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಸಮುದಾಯದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ.
ಪೋಲೆಂಡ್‌ನ ಕ್ರಾಕೋವ್ ನಲ್ಲಿ ನಡೆದ ಮಾಸ್ಟರ್ಸ್ ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉದಯ ಎಸ್ ಶೆಟ್ಟಿ ಯವರು ತನ್ನ ತಂಡದ 7 ಮಂದಿ ವೈಟ್ ಲಿಪ್ಟರ್ಸ್ ನೊಂದಿಗೆ ಭಾರತವನ್ನು ಪ್ರತಿನಿಧಿಕರಿಸಿದ್ದಾರೆ. 1994 ರಿಂದ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ನ ಅತ್ಯುತ್ತಮ ರೆಫ್ರಿಗಳಲ್ಲಿ ಒಬ್ಬರು. ಹಲವು ದಶಕದಿಂದಲೂ ಉತ್ತಮ ಸಂಘಟಕ ಹಾಗೂ ತಂಡದ ಉತ್ತಮ ಟೀಮ್ ಲೀಡರ್ ಆಗಿ ಇವರು ಗುರುತಿಸಲ್ಪಟ್ಟಿದ್ದಾರೆ. ರಾಷ್ಟ್ರೀಯ ದಾಖಲೆಯೊಂದಿಗೆ ಹಲವು ವರ್ಷಗಳ ರಾಷ್ಟ್ರೀಯ ಚಾಂಪಿಯನ್ ಆಗಿದ್ದು ಮಹಾರಾಷ್ಟ್ರ ಸರಕಾರವು ಇವರಿಗೆ ಛತ್ರಪತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಮೇರಿಕಾದ ಲಾಸ್ ವೇಗಾಸ್ ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತದ ತಂಡವನ್ನು ಪ್ರತಿನಿಧೀಕರಿಸಿದ್ದಾರೆ. ಪ್ಯಾರೀಸ್ ನಲ್ಲಿ ನಡೆದ ಒಲಿಂಪಿಕ್ಸನಲ್ಲಿ ಬಾಗವಹಿಸಿದ್ದಾರೆ. ಇವರು ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಲಿಫ್ಟಿಂಗ್ ಫೆಡರೇಶನ್‌ನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದಾರೆ.



Related posts

ಕೇಂದ್ರ ಬಜೆಟ್ 2026 : ವಿಕಸಿತ ಭಾರತ – 2047ಕ್ಕೆ ಭದ್ರ ಬುನಾದಿ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ, ಪೂರ್ವಭಾವಿ ಸಭೆ

Mumbai News Desk

ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

Mumbai News Desk

ಬಾಲಿವುಡ್ ನ ಹಿರಿಯ ದಿಗ್ಗಜ ನಟ ಧರ್ಮೇಂದ್ರ ಇನ್ನಿಲ್ಲ, ‘ಹೀಮ್ಯಾನ್’ ಕಳೆದುಕೊಂಡ ಭಾರತೀಯ ಚಿತ್ರರಂಗ

Mumbai News Desk

ಲಂಡನ್ ವಿಶ್ವ ಶೃಂಗಸಭೆಯಲ್ಲಿ ಐಕಾನಿಕ್ ಮಹಿಳಾ ವಿಶ್ವ ನಾಯಕಿ” ಪ್ರಶಸ್ತಿಗೆ ಡಾ. ವಿಜೇತಾ ಎಸ್. ಶೆಟ್ಟಿಆಯ್ಕೆ.

Mumbai News Desk

ಮೋಹನ್ ಬಿ. ಎಂ. ನಿಧನ

Mumbai News Desk