32 C
Mumbai
March 7, 2026
Mumbai News Kannada
ಸುದ್ದಿ

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದ) ಅಧ್ಯಕ್ಷ ವೈ. ಸುಕುಮಾರ್, ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ





ಕಾಪು ರಾಜೀವ ಭವನದಲ್ಲಿ  ಕಾಪು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ವೈ. ಸುಕುಮಾರ್ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಪದಗ್ರಹಣ ಪ್ರದಾನ ಕಾರ್ಯಕ್ರಮ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, “ಪಕ್ಷ ಕಟ್ಟಿ ಬೆಳೆಸುವ ಅವಕಾಶ. ಕಾರ್ಯಕರ್ತರ ಭಾವನೆಗಳನ್ನು ಅರ್ಥೈಸಿಕೊಂಡು ಸಂಘಟಿಸಬೇಕು ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಮಧ್ಯವರ್ತಿಗಳಿಲ್ಲದೆ ವ್ಯವಸ್ಥಿತವಾಗಿ ಗ್ಯಾರಂಟಿ ಭಾಗ್ಯಗಳನ್ನು ಜಾರಿಗೆ ತಂದಿದೆ. ವಾರ್ಷಿಕ 52 ಸಾವಿರ ಕೋಟಿ ನೀಡುವ ಈ ಯೋಜನೆ ದೇಶದಲ್ಲೇ ಪ್ರಥಮ. ಗ್ಯಾರಂಟಿ ಯೋಜನೆ ತಂದಾಗ ಸರಕಾರ ಒಂದು ವರ್ಷವೂ ಉಳಿಯುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಎರಡು ವರ್ಷ ಯಶಸ್ವೀಯಾಗಿ ಪೂರೈಸಿದೆ. ಅಭಿವೃದ್ಧಿ ಪರ್ವವೂ ಪ್ರಾರಂಭಗೊಂಡಿದೆ” ಎಂದರು. ಪಕ್ಷ ಇದ್ದರೆ ಮಾತ್ರ ನಾಯಕನಿರಲು ಸಾಧ್ಯ. ಗ್ರಾಮ ಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸುವುದು ನಮ್ಮ ಮೊದಲ ಗುರಿ ಎಂದು ಅಧ್ಯಕ್ಷ ವೈ. ಸುಕುಮಾರ್ ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ನಮ್ಮ ಪಕ್ಷ ಸಿದ್ಧಾಂತ ನೆಲೆಯ ಮೂಲಕ ಹೋಗ ಬೇಕು ನಮ್ಮ ಸಿದ್ಧಾಂತ ನಮ್ಮ ದೇಶದ ಸಂವಿದಾನ ಸಾಕಷ್ಟು ರೀತಿಯಲ್ಲಿ ಸಂವಿದಾನಕ್ಕೆ ದಕ್ಕೆ ಆಗುವ ಕೆಲಸಕಾರ್ಯ ಗಳು ಕೇಂದ್ರ ಸರಕಾರದ ಆಡಳಿತದ ಮುಖಾಂತರ ಮಾಡುತ್ತಿದೆ ಕಾಂಗ್ರೆಸ್ ಪಕ್ಷ ಭಾವನೆಗಳ ಮುಖಾಂತರ ಮತ ಯಾಚಿಸುವ ಕೆಲಸ ಮಾಡ್ದಿಲ್ಲ ಬದುಕು ಕಟ್ಟುವ ಕೆಲಸ ವನ್ನ ಮಾಡಿಕೊಂಡು ಬಂದಿದೆ ಎಂದರು.ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು,  ಕಾಪು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ನವೀನ್ ಎನ್ ಶೆಟ್ಟಿ, ವಿಶ್ವಾಸ್ ಅಮೀನ್, ನಾಗೇಶ್ ಉದ್ಯಾವರ, ಶಾಂತಲತಾ ಶೆಟ್ಟಿ, ಶರ್ಫುದ್ದೀನ್ ಶೇಖ್, ಗಂಗಾಧರ ಸುವರ್ಣ ಎರ್ಮಾಳು, ಮಹಾಬಲ ಕುಂದರ್,ದೀಪಕ್ ಏರ್ಮಾಲ್ ಪ್ರಶಾಂತ್ ಜತ್ತನ್ನ, ಹರೀಶ್ ಕಿಣಿ, ಗೀತಾ ವಾಗ್ಳೆ, ಶಿವಾಜಿ ಸುವರ್ಣ, ವೈ ಸುಧೀರ್ ಕುಮಾರ್, ರಮೇಶ್ ಕಾಂಚನ್, ನಿಯಾಝ್ ಪಡುಬಿದ್ರಿ, ಕಾಪು ದಿವಾಕರ ಶೆಟ್ಟಿ, ಸುಮಲತಾ ಸುವರ್ಣ, ಅಮೀರ್ ಕಾಪು  ಆಶಾ ಕಟಪಾಡಿ, ಜ್ಯೋತಿ ಮೆನನ್‌, ತಸ್ಲೀನ್‌ ಅರ್ಹಾ, ಗ್ಲಾಡಿಸ್‌ ಅಲ್ಮೇಡಾ, ಸುನೀಲ್ ಡಿ ಬಂಗೇರ, ಸುಲೋಚನಾ ಬಂಗೇರಾ, ರಮೀಝ್‌ ಹುಸೈನ್, ಪ್ರಭಾಕರ ಆಚಾರ್ಯ, ಶೇಖಬ್ಬ ಉಚ್ಚಿಲ, ಕಿಶೋರ್ ಏರ್ಮಾಳ್, ಪ್ರಶಾಂತ್ ಏರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.



Related posts

ಪ್ಯಾರಿಸ್ ಫ್ಯಾಶನ್ ವೇದಿಕೆಯಲ್ಲಿ ಮುಂಬೈಯ ಪ್ರಭಾ ಸುವರ್ಣ ಮಿಂಚಿನ ಸಂಚಲನ:

Mumbai News Desk

ಕರ್ನಿರೆ  ವಿಶ್ವನಾಥ ಶೆಟ್ಟಿ  ಪರಿವಾರ ದಿಂದ ಕರ್ನಿರೆ ಶ್ರೀ ವಿಷ್ಣು ಮೂರ್ತಿ ದೇವರ ಬಿಂಬಕ್ಕೆ ಚಿನ್ನ ಲೇಪಿತ  ಕವಚ ಸಮರ್ಪಣೆ,

Mumbai News Desk

ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರ  ವಸಯಿ. ಇವರಿಂದ ಕಜೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮ ಕಳಶದ ಪ್ರಯುಕ್ತ ಹರಿದಾಸರ ಕೀರ್ತನೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ   ಮುಖ್ಯಮಂತ್ರಿ  ದೇವೇಂದ್ರ ಫಡ್ನವಿಸ್  ಗೆ ಆಹ್ವಾನ

Mumbai News Desk

ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಬಿಲ್ಲವ ಸಮಾಜದ ಮುಖಂಡರಿಂದ ಅಭಿನಂದನೆ

Mumbai News Desk

ಜೆ. ಬಿ. ನಗರ : ಸುನಂದಾ ಕೇಶವ ಶ್ರೀಯಾನ್ ನಿಧನ

Mumbai News Desk