July 22, 2026
Mumbai News Kannada
ಪ್ರಕಟಣೆ

ಸಾಫಲ್ಯ ಸೇವಾ ಸಂಘ ಮುಂಬೈ ೨೦೨೫-೨೬ ರ ಸಾಫಲ್ಯ ಭಾಗ್ಯ ಹಾಗು ವಿದ್ಯಾರ್ಥಿಗಳಿಗೆ ಸಹಾಯ ನಿಧಿಗೆ ಅರ್ಜಿ ಸ್ವೀಕಾರ.







   ಮುಂಬಯಿ ಜೂ10.  ಸಾಫಲ್ಯ ಸಂಘ ಮುಂಬೈ ಕಳೆದ ಸುಮಾರು ೮೪ ವರುಷಗಳಿಂದ ಬಡತನ ರೇಖೆಗಿಂತ ಕೆಳಗೆ ಉಳಿದ ಸಮಾಜ ಬಾಂಧವರನ್ನು, ವಿವಿಧ ಸಹಾಯ ಹಸ್ತದಿಂದ ಮೇಲೆಯೆತ್ತುವ ನಿರಂತರ ಪ್ರಯತ್ನ ಮಾಡುತ್ತಲೇ ಬರುತ್ತಿದೆ. ಸ್ವಾವಲಂಭಿಯಾಗಲು ಮಹಿಳೆಯರಿಗೆ ಉಚಿತ ಹೊಲಿಯುವ ಯಂತ್ರ, ನಾದಸ್ವರ ಹಾಗು ವಿದ್ಯಾಧಾನ ಯೋಜನೆಯ ಮುಖೇನ  ಬಡಬಗ್ಗ ವಿದ್ಯಾರ್ಥಿಗಳಿಗೆ ಸಂಪೂರ್ಣ ವರುಷದ ವಿದ್ಯಾಭ್ಯಾಸದ ವೆಚ್ಚ, ೧೦, ೧೨ ಮತ್ತು ೧೫ ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ  ವಿದ್ಯಾರ್ಥಿಗಳಿಗೆ ವಿಶೇಷ ಅನುದಾನ, ವಿದ್ಯಾರ್ಥಿಗಳಿಗೆ ಉಚಿತ ಗಣಕ ಯಂತ್ರ ಕಲಿಯಲು ಸಾಫಲ್ಯ ಶಿಕ್ಷಣ ಅಡಿಯಲ್ಲಿ ವಿಶೇಷ ಅನುಧಾನ ಹಾಗು ಸ್ಕಾಲರ್ಷಿಪ್ ಅನುಧಾನ ನೀಡಿ ಸಮಾಜದ ಏಳಿಗೆಗಾಗಿ ತನ್ನ ಶಕ್ತಿ ಮೀರಿ ಪ್ರಯತ್ತಿಸುತ್ತಿದೆ. 

ಈ ವರುಷ ಅಂದರೆ ೨೦೨೫-೨೬ ರಲ್ಲಿ  ಸಾಫಲ್ಯ ಭಾಗ್ಯ ಯೋಜನೆಯ ಮುಖೇನ ಅರ್ಹ ಮಹಿಳೆಯರಿಗೆ ಉಚಿತ ಚಕ್ಕಿ ಅಟ್ಟ ಮಾಡುವ ಯಂತ್ರವನ್ನು ನೀಡಲಾಗುವುದು ಹಾಗು ಸ್ವಂತ ಉದ್ಯೋಗಕ್ಕೆ ಪ್ರೇರಿಪಿಸಲಾಗುವುದು, ನಾದಸ್ವರ ಯೋಜನೆ, ವಿದ್ಯಾಧಾನ ಯೋಜನೆ, ಸಾಫಲ್ಯ ಗಣಕ ಯಂತ್ರ ಯೋಜನೆಯ  ಮೆಖೇನ ವಿದ್ಯಾರ್ಥಿಗಳಿಗೆ ವಿಶೇಷ ಅನುದಾನ ನೀಡಲಾಗುವುದು. ಈ ಎಲ್ಲ ಯೋಜನೆಯ ಪ್ರಯೋಜನ ಪಡೆಯಲು ಮತ್ತು ವಿದ್ಯಾರ್ಥಿಗಳಿಗೆ ಕೊಡುವ ಸ್ಕಾಲರ್ಷಿಪ್  ಪಡೆಯಲು ಅರ್ಹ ವ್ಯಕ್ತಿಗಳು  ತಾ ೧೦ ಜೂಲೈ ೨೦೨೫ ರ ಮೊದಲು ಸಂಘಕ್ಕೆ ಅರ್ಜಿ ನೀಡಬೇಕಾಗಿ ವಿನಂತಿಸುತ್ತಿದ್ದೇವೆ ಹಾಗು ಸಾಫಲ್ಯ  ಸಂಘದ ಪರವಾಗಿ ಅಧ್ಯಕ್ಷರಾದ  ಶ್ರೀನಿವಾಸ್ ಸಪಳಿಗ, ಉಪ ಅಧ್ಯಕ್ಷರಾದ ಕೃಷ್ಣ ಕುಮಾರ್ ಮತ್ತು ಜೀವನ್ ಸಿರಿಯನ್,  ಕಾರ್ಯದರ್ಶಿ  ಭಾಸ್ಕರ್ ಸಪಳಿಗ, ಜೊತೆ ಕಾರ್ಯದರ್ಶಿ  ಕಿರಣ್ ಕುಮಾರ್ ಸಪಳಿಗ, ರಾಜೇಶ್ ಪುತ್ರನ್, ಕೋಶಾಧಿಕಾರಿ  ಹೇಮಂತ್ ಸಪಳಿಗ, ಜೊತೆ ಕೋಶಾಧಿಕಾರಿ ಸತೀಶ್ ಕುಮಾರ್ ಕುಂದರ್,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಲಕ್ಷ್ಮಿ ಮೆಂಡನ್, ಯುವ ವಿಭಾಗದ ಕಾರ್ಯಾಧ್ಯಕ್ಷೆ ಕು. ಸಂಧ್ಯಾ ಪುತ್ರನ್ ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ಸಮಿತಿ, ಯುವ ವಿಭಾಗ ಸಮಿತಿ ವಿನಂತಿಸಿದ್ದಾರೆ. ನಾದಸ್ವರ ಹಾಗು ಸ್ಕಾಲರ್ಷಿಪ್ ಗಾಗಿ ಯೋಜನೆಗಾಗಿ ಅರ್ಹ ವ್ಯಕ್ತಿಗಳು ಇವರಿಗೆ ಸಂಪರ್ಕಿಸಬಹುದು;   ರತಿಕ ಸಾಫಲ್ಯ – ೯೮೨೦೭೧೬೦೪೨;  ಕು. ಸಂಧ್ಯಾ ಪುತ್ರನ್ -೯೯೨೦೯೪೫೪೩೬;  ಕಲಾ ಬಂಗೇರ -೯೮೧೯೧೭೭೬೭೩;  ಸರಿತಾ ಸುವರ್ಣ -೯೮೬೭೭೫೬೯೧೭; ಮತ್ತು ವಿದ್ಯಾಧಾನ ಯೋಜನೆ ಗಾಗಿ  ಹೇಮಂತ್ ಸಪಳಿಗ-9892738387; ಮತ್ತು ವಿದ್ಯಾರ್ಥಿ ಅನುಧಾನಕ್ಕೆ ಕು. ಐಶ್ವರ್ಯ -೮೩೬೯೮೧೮೧೪೭;  ದಿನೇಶ್ ಕಾಂಚನ್ – ೭೭೩೮೮೯೮೦೩೩ ಅವರನ್ನು ಮತ್ತು ಪ್ರದಾನ ಕಾರ್ಯದರ್ಶಿ  ಭಾಸ್ಕರ್ ಸಪಳಿಗ -೯೨೨೩೫೭೦೨೬೫ ಇವರನ್ನು ಸಂಪರ್ಕಿಸಬಹುದು. 

B. Dinesh Kulal

Mob.: 9821868674



Related posts

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ

Mumbai News Desk

ಎ. 6 ರಂದು ನಗರದ ಹೆಸರಾಂತ ಕನ್ನಡ ಮಾಸಿಕ ಛಾಯಾಕಿರಣ ಪತ್ರಿಕೆಯ ದಶಮಾನೋತ್ಸವ

Mumbai News Desk

ಹಿಂದೂ ಸಂಗಮ ಆಯೋಜನಾ ಸಮಿತಿ ಮೂಲ್ಕಿ : ಜ. 25ರಂದು “ಭವ್ಯ ಹಿಂದೂ ಸಂಗಮ”

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಫೆ. 6ರಂದು ವಾರ್ಷಿಕ ಉತ್ಸವ.

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ನ. 18ರಂದು ಉಡುಪಿಯಲ್ಲಿ ಸಮಾಲೋಚನೆ ಸಭೆ

Mumbai News Desk