32 C
Mumbai
March 7, 2026
Mumbai News Kannada
ಸುದ್ದಿ

ತುಂಬು ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು.





ಮಂಗಳೂರು ಜೂ16. ತುಂಬು ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಚಿಕ್ಕಪುತ್ತೂರಿನಲ್ಲಿ ಜೂ16ರ ರಾತ್ರಿ ನಡೆದಿದೆ.

ಮಂಗಳೂರಿನ ಸುರತ್ಕಲ್ ಮೂಲದ, ಚಿಕ್ಕಪುತ್ತೂರಿನ ನಿವಾಸಿ, ರೇಷ್ಮಾ (28) ಆತ್ಮಹತ್ಯೆ ಮಾಡಿಕೊಂಡವರು.ರೇಷ್ಮಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೂ. 15ರ ರಾತ್ರಿ ಮನೆಯಲ್ಲಿ ರೇಷ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಮೃತರು ಪತಿ ಚಿಂತನ್ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ನಿನ್ನೆ ರಾತ್ರಿ ಪತಿ ಇಲ್ಲದೇ ಇರುವಾಗ ರೇಶ್ಯಾ ಸಾವಿಗೆ ಶರಣಾಗಿದ್ದಾರೆ.
ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.



Related posts

ತುಳುರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದ ಜೋಡು ಜೀಟಿಗೆ, – ಒಂದೇ ದಿನ ಎರಡು ಮಹಾನಗರಿಯ ಭವ್ಯ ವೇದಿಕೆಯಲ್ಲಿ ನಾಟಕ ಪ್ರದರ್ಶನ

Mumbai News Desk

ಯಕ್ಷಗಾನ ವಿಶ್ವಗಾನವಾಗಿ ಮೆರಯಲಿ – ಶ್ರೀ ಶ್ರೀ ಶ್ರೀ ಸಚ್ವಿದಾಂನಂದ ಭಾರತಿ ಸ್ವಾಮೀಜಿ

Mumbai News Desk

ತೀಯಾ ಫ್ಯಾಮಿಲಿ ಯು.ಎ.ಇ.ಯ  ವತಿಯಿಂದ ಭಕ್ತಿ ಸಡಗರದ ದುರ್ಗಾ ಪೂಜೆ 

Mumbai News Desk

ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣರಿಗೆ ಅತ್ಯುತ್ತಮ ಬ್ಯಾಂಕ್ ಕಾರ್ಯಧ್ಯಕ್ಷ ಪ್ರಶಸ್ತಿ.

Mumbai News Desk

ಕರ್ನಿರೆ ಫೌಂಡೇಷನ್ ವತಿಯಿಂದ 27ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ,

Mumbai News Desk

ಮುಲ್ಕಿ ಬಪ್ಪನಾಡು ಕ್ಷೇತ್ರದ ಅನುವಂಶೀಯ ಮೊಕ್ತೇಸರ ಎಸ್. ಎಸ್. ಮನೋಹರ ಶೆಟ್ಟಿ ನಿಧನ.

Mumbai News Desk