

ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಆಶೀರ್ವಾದದಿಂದ ಸದ್ಗುರು ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟ್ ಬಾಂದ್ರಾ ಇದರ ವಿರಾರ್, ಮೀರಾ ರೋಡ್, ವಸಾಯಿ,ಬೊರಿವಿಲಿ, ಗೋರೆಗಾಂಮ್, ದಾದರ್, ಭಾಂಡುಪ್ ಹಾಗೂ ದೊಂಬಿವಿಲಿ ಕನ್ನಡ ಉಪಾಸನಾ ಕೇಂದ್ರದ ಸದಸ್ಯರು ಜೂ.21ಮತ್ತು 22ರಂದು ರತ್ನಗಿರಿ ಯಲ್ಲಿರುವ ಅತುಲಿತ ಬಲಧಾಮ, ಅನಿರುದ್ಧ ಮಠ ಹಾಗೂ ಶ್ರೀ ದೇವಿ ಗಣಪತಿ ಫುಲೆ ಮಂದಿರಗಳಿಗೆ ಎರಡು ದಿವಸದ ಧಾರ್ಮಿಕ ಪ್ರವಾಸ ಕೈಗೊಂಡಿದ್ದರು. ಸುರೇಖಾ ಶೆಟ್ಟಿ, ಸುಜಾತಾ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಜನಾರ್ದನ ಪೂಜಾರಿ, ರೇಖಾ ಶೆಟ್ಟಿ ಹಾಗೂ ಸುಮತಿ ಪೂಜಾರಿಯವರು ಪ್ರವಾಸದ ಮುಂದಾಳತ್ವ ವಹಿಸಿದ್ದರು.




