32 C
Mumbai
March 7, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ ; ಮೀರಾ  – ಭಾಯಂದರ್ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ





 *ಯೋಗ ಒಂದು ದಿನಕ್ಕೆ ಸೀಮಿತವಾಗದಿರಲಿ – ಗಿರೀಶ್ ಶೆಟ್ಟಿ ತೆಳ್ಳಾರು

   ಮೀರಾ ರೋಡ್  ಜೂ. 21.ಯೋಗವು ಕೇವಲ ವ್ಯಾಯಾಮವಲ್ಲ, ಬದಲಾಗಿ ಜೀವನಶೈಲಿ. ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ, ನಾವು ನಮ್ಮ ದೇಹ, ಮನಸ್ಸು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು, ಯೋಗವು ಒಂದು ದಿನಕ್ಕೆ ಸೀಮಿತವಾಗದೆ , ನಿತ್ಯ ಜೀವನದ ಅಂಗವಾಗ ಬೇಕು ಎಂದು ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು ಹೇಳಿದರು.

ಅವರು ಜೂ.21 ರಂದು ಮೀರಾ ರೋಡ್ ಹೋಟೆಲ್ ಬಾಲಾಜಿ ಸಭಾಗೃಹದಲ್ಲಿ ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ವತಿಯಿಂದ ಜರಗಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಯೋಗವು ವ್ಯಕ್ತಿಯನ್ನು ತನ್ನೊಳಗೆ ಮತ್ತು ದೈವಿಕತೆಯೊಂದಿಗೆ ಒಂದುಗೂಡಿಸಲು ಸಹಾಯ ಮಾಡುವ ಅಭ್ಯಾಸಗಳ ಒಂದು ವ್ಯವಸ್ಥೆಯಾಗಿದೆ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ನೀಡುತ್ತದೆ. ಇಂತಹ  ಕಾರ್ಯಕ್ರಮಗಳು ನಿರಂತರ ನಡೆಯುತ್ತಿರ ಬೇಕು, ಎಲ್ಲರಿಗೂ ಪ್ರೇರಣೆಯಾಗ ಬೇಕು ಎಂದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಮಾತನಾಡಿ ಯೋಗವು ನಮಗೆ ಸಾಮರಸ್ಯದಿಂದ ಬದುಕಲು, ಜಾಗರೂಕರಾಗಿರಲು ಮತ್ತು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಸುತ್ತದೆ. ಯೋಗವನ್ನು ಅಭ್ಯಾಸ ಮಾಡುವ ಮೂಲಕ ನಾವು ಪರಿಸರವನ್ನು ರಕ್ಷಿಸಬಹುದು ಮತ್ತು ನಮ್ಮ ಸ್ವಂತ ಆರೋಗ್ಯವನ್ನು ಸುಧಾರಿಸಬಹುದು  ಎಂದರು.

ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶಾಲ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಇದರ ಎಂಡಿ ಭಾಸ್ಕರ್ ಶೆಟ್ಟಿ ಕಾಶಿ ಮೀರಾ,  ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಯೋಗದ ಬಗ್ಗೆ ಮಾಹಿತಿ ನೀಡಿದ  ಯೋಗ ಗುರು ಸಂದ್ಯಾ ಶೆಟ್ಟಿ ಮಾತನಾಡಿ ಐದು ಸಾವಿರ ವರ್ಷಗಳ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿದ್ದ ಯೋಗ ಇಂದು ಜಗತ್ತಿನಾದ್ಯಂತ ಆಚರಣೆ ಮಾಡುತ್ತಿರುವುದು ಕಂಡುಬರುತ್ತದೆ ಇದು ನಮಗೆ ಬಹಳ ಹೆಮ್ಮೆಯ ವಿಷಯ.  ಪರಿಸರ ಮಾಲಿನ್ಯದಿಂದ ನಮ್ಮ ಆರೋಗ್ಯದಲ್ಲಿ ಏರು ಪೇರು ಆಗುತ್ತದೆ. ಈ ಯಾಂತ್ರಿಕ ಬದುಕಿನಲ್ಲಿ ಯೋಗ ಅಭ್ಯಾಸದಿಂದ   ಆರೋಗ್ಯ ಕಾಪಾಡಲು ಸಾದ್ಯತೆ ಇದೆ . ಯೋಗದಿಂದ ಹೇಗೆ ಆರೋಗ್ಯ ಕಾಪಾಡಿಕೊಳ್ಳ ಬಹುದೆಂದು ಮಾಹಿತಿ ಹಾಗೂ  ಯೋಗ ಅಭ್ಯಾಸದ ತರಬೇತಿ ನೀಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಗಣ್ಯರನ್ನು ಸ್ವಾಗತಿಸಿ , ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು ಹಾಗೂ  ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಗುಣ ಶೆಟ್ಟಿ , ಅಮಿತಾ ಕೆ. ಶೆಟ್ಟಿ , ಮೀರಾ ರೋಡ್ ಬಂಟ್ಸ್  ಪೋರಾಂ  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಖವಾಣಿ ಶೆಟ್ಟಿ , ಮೀರಾ -;ದಹಾಣು ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತ ಶೆಟ್ಟಿ , ಸಮಾಜ ಸೇವಕ ಸಂಪತ್ತ್ ಶೆಟ್ಟಿ ಪಂಜದ ಗುತ್ತು ,  ರವೀಂದ್ರ ಶೆಟ್ಟಿ ದೇರಳ ಕಟ್ಟೆ , ರಾಜೇಶ್ ಶೆಟ್ಟಿ , ರಾಜೇಶ್ ಶೆಟ್ಟಿ ಕಾಪು , ಉದಯ ಶೆಟ್ಟಿ ಪೆಲತ್ತೂರು , ದಾಮೋದರ ಶೆಟ್ಟಿ,  ರಾಜೇಶ್ ಎಸ್. ಶೆಟ್ಟಿ , ಅಭಿಜಿತ್ ಶೆಟ್ಟಿ,  ಆಶಾಲತ ಶೆಟ್ಟಿಯವರನ್ನು ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಸಂಚಾಲಕ ಶಿವ ಪ್ರಸಾದ್ ಶೆಟ್ಟಿ ಮಾಣಿಗುತ್ತು , ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು , ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ,  ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ : ಸುಜಾತ ಪಿ. ಶೆಟ್ಟಿ, ಕಾರ್ಯದರ್ಶಿ : ಸುಮಂಗಳ ಕಣಜಾರ್ ,ಕೋಶಾಧಿಕಾರಿ : ವಂದನ ಶೆಟ್ಟಿ, ಜೊತೆ ಕಾರ್ಯದರ್ಶಿ : ಶಿಲ್ಪ ಶೆಟ್ಟಿ ,ಜೊತೆ ಕೋಶಾಧಿಕಾರಿ : ಅಶ್ವಿನಿ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ಭಜನೆ ಸಮಿತಿಯ ವಸಂತಿ ಎ. ಶೆಟ್ಟಿ ಪ್ರಾರ್ಥನೆ ಗೈದರು, ಕಾರ್ಯಕ್ರಮವನ್ನು ಚಿತ್ರನಟ , ರಂಗ ನಿರ್ದೇಶಕ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿದರು, ಮಹಿಳಾ ಸಮಿತಿಯ ಕಾರ್ಯದರ್ಶಿ ಸುಮಂಗಳ ಕಣಂಜಾರು ಧನ್ಯವಾದ ನೀಡಿದರು.

B. Dinesh Kulal

Mob.: 9821868674

Show quoted text



Related posts

ನವಿ ಮುಂಬೈ ವಿಮಾನ ನಿಲ್ದಾಣ : ಡಿಸೆಂಬರ್ 25 ರಿಂದ ಕಾರ್ಯಾಚರಣೆ ಆರಂಭ

Mumbai News Desk

ಜ್ಞಾನ ವಿಕಾಸ ಮಂಡಳ ಕಲ್ವಾ, ಇದರ ಆಡಳಿತದ ನ್ಯೂ ಇಂಗ್ಲಿಷ ಸ್ಕೂಲ್ ಗೆ, ಎಸ್ ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಪಲಿತಾಂಶ.

Mumbai News Desk

ಮರಾಠ ಕೋಟಾ ಬೇಡಿಕೆಗೆ ಸರ್ಕಾರದ ಒಪ್ಪಿಗೆ, ಪ್ರತಿಭಟನೆ ಅಂತ್ಯ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರದ ಅಧ್ಯಕ್ಷರಾಗಿ ಶ್ರೀ ಇಂದುಶೇಖರ್ ಸುವರ್ಣ ಪುನರಾಯ್ಕೆ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ – 170 ನೇ ಗುರು ಜಯಂತಿ ಆಚರಣೆ – 2024

Mumbai News Desk

ಸಯನ್ ಮಕರ ಜ್ಯೋತಿ ಫೌಂಡೇಶನ್ ವತಿಯಿಂದ  ನೋಟ್ ಬುಕ್ ವಿತರಣೆ, ಅಭಿನಂದನಾ ಕಾರ್ಯಕ್ರಮ,

Mumbai News Desk