32 C
Mumbai
March 7, 2026
Mumbai News Kannada
ಮುಂಬಯಿ

ಮಲಾಡ್ ಪೂರ್ವ ದ  ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಹೋತಭಾರ  ದೇವಸ್ಥಾನದ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗು ಶಿಕ್ಷಣದ ನೆರವು.





 

ವಿದ್ಯಾರ್ಜನೆಗೆ ಪ್ರೋತ್ಸಾಹ ಬದುಕನ್ನು ನಿರ್ಮಿಸುವ ಮೆಟ್ಟಲು –  ಪ್ರಭಾಕರ್ ಶೆಟ್ಟಿ ಇನ್ನಂಜೆ. 

ಚಿತ್ರ ವರದಿ ದಿನೇಶ್ ಕುಲಾಲ್ 

   ಮುಂಬಯಿ   ಮಲಾಡ್ ಪೂರ್ವ ದ ಕುರಾರ್ ವಿಲೇಜ್ ನ ಲಕ್ಷ್ಮಣ್  ನಗರದ ಶ್ರೀ ಶನೀಶ್ವರ ಮಹೋತಭಾರ  ದೇವಸ್ಥಾನದ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗು ಶಿಕ್ಷಣ ಕ್ಕೆ ಪೂರೈಕೆಯಾಗುವ  ಪರಿಕರವನ್ನು  ನೀಡುವ  ಸರಳ ಸಮಾರಂಭದಲ್ಲಿ ಶ್ರೀ ಶನಿ ಮಹಾತ್ಮಾ ಚಾರಿಟೇಬಲ್ ಸೊಸೈಟಿ ಯ ಅಧ್ಯಕ್ಷರಾದ  ಪ್ರಭಾಕರ್ ಶೆಟ್ಟಿ ಇನ್ನಂಜೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಿತ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಆಂಗ ಸಂಸ್ಥೆಯಾದ ಚಾರಿಟೇಬಲ್ ಸೊಸೈಟಿಯಿಂದ  ಕಳೆದ ಸುಮಾರು ೨೫ ವರುಷಗಳಿಂದ  ಈ ಮಲಾಡ್ ಕುರಾರ್ ಗ್ರಾಮದಲ್ಲಿ, ಬಡಬಗ್ಗ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗು ಶಿಕ್ಷಣ ಕ್ಕೆ ಪೂರೈಕೆಯಾಗುವ  ಪರಿಕರವನ್ನು  ನೀಡುತ್ತಾ ಬರುತ್ತಿದೇವೆ, ಇದರಿಂದ ಸುಮಾರು ೧೦೦೦ ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರುಷ  ಈ ಸಂಸ್ಥೆಯ ಮುಖೇನ ಸಹಾಯ ಪಡೆಯುತ್ತಿದ್ದಾರೆ.  ಸತತ ವಿದ್ಯಾರ್ಜನೆಯ ಪ್ರೋಸ್ತಾವ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಬುನಾದಿಯಾಗಲಿದೆ ಹಾಗು ತನ್ನ ಬದುಕನ್ನು ನಿರ್ಮಿಸುವ ಪ್ರಥಮ ಮೆಟ್ಟಲು   ಎಂದು ತಿಳಿಸಿದರು. 

    ಮುಖ್ಯ ಅತಿಥಿಯಾಗಿ ಆಗಮಿಸಿದ ಮುಂಬೈ ಫ್ರೆಂಡ್ಸ್ ಇದರ ಅದ್ಯಕ್ಶ    ಸತೀಶ್  ಶೆಟ್ಟಿ  ಅಜೆಕಾರ್  ಅವರು  ಮಾತಾಡುತ್ತ ಸಮಾಜ ಸೇವೆಯಿಂದ ಸಿಗುವ ಆ ಸಂತೃಪ್ತಿ, ಆನಂದ ಅದು ಬದುಕಿನ ಪುಟಕ್ಕೆ ನೀಡುವ ಅಮೃತ, 

ಕಲಿ ಶ್ರೇಷ್ಠನಾದ, ಛಾಯಾನಂದನ ಈ ಭವ್ಯ ದೇಗುಲದಲ್ಲಿ ಧಾರ್ಮಿಕ ಹಾಗು ಶಿಕ್ಷಣಕ್ಕೆ ನೀಡುವ  ಪ್ರೋತ್ಸಾ ಹ ಮತ್ತು ಸಮಾಜಕ್ಕೆ ಪೂರಕವಾದ ಕೆಲಸ ಮಾಡುವುದು ನಿಜವಾಗಿಯೂ ಪ್ರಶಂಸನೀಯವಾದುದು , ಈ ಕಾರ್ಯಕ್ರಮಕ್ಕೆ ನಮ್ಮ ಮುಂಬೈ ಫ್ರೆಂಡ್ಸ್ ಸಮಿತಿಯವರನ್ನು ಕರೆದು ನಮಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿದ  ಸಮಿತಿಯ ಎಲ್ಲಾ ಕಾರ್ಯಕಾರಿ ಸದ್ಯಸರಿಗೆ ನನ್ನ ಅಭಿನಂದನೆಗಳು ಹಾಗು ಮುಂದಿನ ದಿನದಲ್ಲಿ ಇಂತಹ  ಉತ್ತಮ ಕಾರ್ಯಕ್ಕೆ ನಮ್ಮ ಮುಂಬೈ ಫ್ರೆಂಡ್ಸ್ ನಿಮ್ಮೊಟ್ಟಿಗೆ  ಸ್ಪಂದಿಸುವ ಭರವಸೆ ಯನ್ನು  ಇತ್ತರು. 

    ಕಾರ್ಯಕ್ರಮದಲ್ಲಿ, ಗಂಗಾವಳಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಯ ಡೈರೆಕ್ಟರ್  ಉದಯ ಮೊಗವೀರ, ಫೈನ್ ಆರ್ಟ್ಸ್ ಜೆವೆಲ್ಲರ್ಸ್ ಮಾಲಕ  ನರೇಶ್ ಚೌಧುರಿ, ಮಲಾಡ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮತ್ತು ಮುನ್ಸಿಪಲ್ ಕಾರ್ಪೋರೇಶನ್ ನ ಬಿ ಜೆ ಪಿ ಯ ಗ್ರೂಪ್ ಲೀಡರ್ ಮತ್ತು ಕಾರ್ಪೊರೇಟರ್ಯದ ವಿನೋದ್ ಮಿಶ್ರ, ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷ  ಶ್ರೀನಿವಾಸ್ ಸಪಲ್ಯ , ಹಿರಿಯರಾದ  ನಾರಾಯಣ್ ಶೆಟ್ಟಿ . ಜಗನಾಥ್ ಸಾಲಿಯಾನ್ ಹಾಗು ಮುಂಬೈ ಫ್ರೆಂಡ್ಸ್  ಸಮಿತಿಯ  ಸದ್ಯಸರಾದ  ಕೇಶವ್ ಶೆಟ್ಟಿ, ವಿನಯ್ ಶೆಟ್ಟಿ,  ನಯನ ಶೆಟ್ಟಿ, ಕ್ರಾಂತಿ ಶೆಟ್ಟಿ, ರೋಹನ್ ಶೆಟ್ಟಿ , ಕಿರಣ್ ಹೆಜಮಾಡಿ, ಅಭಿಷೇಕ್ ಶೆಟ್ಟಿ , ಪ್ರತಿಕ್ಷ ಶೆಟ್ಟಿ ಮತ್ತು  ಪ್ರಮೋದ್  ಭಾಗವಹಿಸಿದರು. 

    ದೇವಸ್ಥಾನದಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ತುಂಗಾ ಭಟ್ ದೇವರ ಪ್ರಾರ್ಥನೆ ಹಾಗು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 

, ಶನಿ ಮಹಾತ್ಮಾ ಪೂಜಾ ಸಮಿತಿಯ ಉಪ ಅಧ್ಯಕ್ಷರಾದ  ರಮೇಶ್ ಆಚಾರ್ಯ, ಕೋಶಾಧಿಕಾರಿ  ಹರೀಶ್ ಸಾಲಿಯಾನ್, ಮಹಿಳಾ ವ್ಹಿಭಾಗದ ಕಾರ್ಯಾಧ್ಯಕ್ಷೆ  ಶೀತಲ್ ಕೋಟ್ಯಾನ್, ಚಾರಿಟೇಬಲ್ ಸೊಸೈಟಿ ಯ ಕಾರ್ಯದರ್ಶಿ ಮಹೇಶ್ ಸಾಲಿಯಾನ್, ಹಾಗು ಮತ್ತಿತರ ಸದಸ್ಯರು  ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪರಿಸರದ ಸಾವಿರಕ್ಕೂ ಮಿಕ್ಕಿ ಎಲ್ಲಾ ಭಾಷೆಯ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಮತ್ತು ಶಾಲಾ ಪರಿಕರವನ್ನು ನೀಡಲಾಯಿತು.

ಪೂಜಾ ಸಮಿತಿಯ ಸದಸ್ಯರು ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಯುವಲ್ಲಿ ಸಹಕರಿಸಿದರು. 

———-

ದಾನಿಗಳ ನೆರವು ಧಾರ್ಮಿಕ ಕಾರ್ಯಕ್ಕೆ ಶಕ್ತಿ ತುಂಬಿದೆ :

ಶ್ರೀನಿವಾಸ ಸಾಪಲ್ಯ. 

ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅವರು ಅತಿಥಿಗಳನ್ನು ಗೌರವಿಸಿ ಪರಿಸರದ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ವೃದ್ಧಿಸುವಲ್ಲಿ ದೇವಸ್ಥಾನ ಪೂರಕವಾಗಿದೆ. ಭಕ್ತರು ಮತ್ತು ದಾನಿಗಳಿಂದ ಕ್ಷೇತ್ರದ ಎಲ್ಲಾ ಸೇವೆ ಕಾರ್ಯಗಳು ಎಲ್ಲಾ ಸೇವಾಕಾರಿಗಳು ಸಾಂಗವಾಗಿ ನಡೆದಂತಾಗುತ್ತಿದೆ. ಸಮಿತಿಯ ಸದಸ್ಯರ ಮತ್ತು ಹಿರಿಯರ ಸೇವಾ ಕಾರ್ಯಗಳು ಅವಿರತವಾಗಿದೆ. ಕ್ಷೇತ್ರದಲ್ಲಿ ಇನ್ನಷ್ಟು ಸಾಮಾಜಿಕ ಧಾರ್ಮಿಕ ಸೇವೆ ಕಾರ್ಯಗಳು ಮಾಡಲು ಭಕ್ತರು ಸಹಕರ ಅಗತ್ಯ ಎಂದರು

——

ಸತೀಶ್  ಶೆಟ್ಟಿ  ಅಜೆಕಾರ್  ದಂಪತಿ ಯನ್ನ ಗೌರವಿಸಲಾಯಿತು.

ಉದಯ ಮೊಗವೀರ ಅವರನ್ನು ಗೌರವಿಸಿದಾಗ.

B. Dinesh Kulal

Mob.: 9821868674



Related posts

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾರ್ಥನಾ ಪೂಜಾರಿಗೆ ಶೇ 94.40 ಅಂಕ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತ ಸಮಿತಿಯ ಚುನಾವಣೆ – ಜಯಶಾಲಿಯಾದ “ವಿಶನ್-2030” ಪ್ಯಾನೇಲ್

Mumbai News Desk

ಶ್ರೀ ರಾಮಚಂದ್ರಾಪುರ ಮಠದ ಮುಂಬೈ ವಲಯದಲ್ಲಿ “ರಾಮಾವತರಣ” ಗ್ರಂಥದ ಲೋಕಾರ್ಪಣೆ

Mumbai News Desk

ಕುಲಾಲ ಸಂಘ ಮುಂಬೈ ಮೀರಾರೋಡ್-ವಿರಾರ್ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣೆ.

Mumbai News Desk

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 

Mumbai News Desk