
ಸಂಪತ್ತನ್ನು ಪುಣ್ಯ ಬರುವಂತೆ ಪರಿವರ್ತನೆ ಮಾಡಬೇಕು: ಕೊಂಡೆವೂರು ಸ್ವಾಮೀಜಿ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ : ನಾವು ಗಳಿಸಿದ ಸಂಪತ್ತು ಎಂದೂ ಸತ್ಕರ್ಮಕ್ಕೆ ಯುನಿಯೋಗವಾಗಬೇಕು. ನಮ್ಮ ಹಣ ಓಂ ಬೇರೆ ದೇಶಕ್ಕೆ ಹೋದಾಗ ಅದನ್ನು ಪರಿವರ್ತಿಸಲೇ ಬೇಕಾಗುತ್ತದೆ ಅದೇ ರೀತಿಯಲ್ಲಿ ನಮ್ಮ ಸಂಪತ್ತನ್ನು ದಾನ ಧರ್ಮ ಮೂಲಕ್ಬ ಬದಲಾಯಿಸಬೇಕಾಗುತ್ತದೆ.
ದೇಹ ಬಿಟ್ಟು ಹೋಗುವಾಗ ಸಂಪತ್ತನ್ನು ನಮ್ಮೊಂದಿಗೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಗಳಿಸಿದ ಸಂಪತ್ತನ್ನು ಪುಣ್ಯ ಬರುವಂತೆ ಪರಿವರ್ತನೆ ಮಾಡಬೇಕು. ಅದು ದಾನ ಧರ್ಮದ ಮೂಲಕ ಸಾಧ್ಯ ಎಂದು ಉಪ್ಪಳದ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು.

ಜೂ 22 ಸಂಜೆ ಧಾಣೆಯ ನವೋದಯ ಜೂನಿಯರ್ ಕಾಲೇಜಿನಲ್ಲಿ ನಡೆದ ಕೊಂಡೆವೂರು ಉಪ್ಪಳ
ಶ್ರೀ ನಿತ್ಯಾನಂದ ಯೋಗಾಶ್ರಮದ ಮುಂಬೈ ಸಮಿತಿ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ
ಶ್ರೀ ಯೋಗಾನಂದ ಸ್ವಾಮೀಜಿಯವರ ಭಕ್ತರಿಗೆ ಆಶೀರ್ವಚನ, ಫಲ-ಮಂತ್ರಾಕ್ಷತೆ ನೀಡಿ ಆಶೀರ್ವಚನ ಮಾಡಿದರು .
ನಮ್ಮ ಪರಿಸರದಲ್ಲಿರುವ ಬಡವರ ಸೇವೆ ಮಾಡಿದರೆ ಅದು ಬಹಳ ದೊಡ್ಡ ಸೇವೆ. ಅಂತವರ ಕಣ್ಣೀರೊರಸುವ ಕೆಲಸ ಮಾಡೋಣ. ಇದಕ್ಕಾಗಿ ನಮ್ಮ ಮಠದಲ್ಲಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಆಧಾರ ಈ ಐದು ಯೋಜನೆಗಳು ನಡೆಯುತ್ತಿದೆ . ಅದನ್ನು ಮುಂದುವರಿಸಲು ಭಕ್ತರು ಸಹಕಾರ ನೀಡಬೇಕು. ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು . ಧರ್ಮ ಎಂದರೆ ಏನು ಎಲ್ಲರ ಬಾಳಲ್ಲೂ ಒಳಿತು ಯನ್ನು ಕಾಣುವ ಬದುಕು ನಮ್ಮದಾಗಬೇಕು. ಪ್ರಾಣಿ ಪಕ್ಷಿಗಳನ್ನು ಪ್ರೀತಿಸಬೇಕುಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತೀಯಾ ಸಮಾಜ ಮುಂಬಯಿ ಮಾಜಿ ಅಧ್ಯಕ್ಷ ಮತ್ತು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಬೆಲ್ಚಾಡ ಅವರು ಸ್ವಾಮೀಜಿಯವರ ಬಗ್ಗೆ ಮಾತನಾಡುತ್ತಾ ಇತ್ತೀಚೆಗೆ ಕಟೀಲಿನಲ್ಲಿ ೫೦ ನೇ ಯಕ್ಷೋತ್ಸವ ನಡೆಸಿದ ಸಂದರ್ಭದಲ್ಲಿ ಇತ್ತೀಚೆಗೆ ಸ್ವಾಮೀಜಿ ದೂರದ ಪ್ರದೇಶದಲ್ಲಿ ಯಾವುದೇ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ನಾನು ವಿನಂತಿಸಿದಾಗ ಕಾರ್ಯಕ್ರಮದ ಮಧ್ಯೆ ನಮ್ಮ ಕಾರ್ಯಕ್ರಮಕ್ಕೆ ಬಂದು ಪುನಃ ಅಲ್ಲಿಗೆ ಹಿಂತಿರುಗಿದ್ದು ಭಕ್ತರ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತಿದೆ. ಸ್ವಾಮೀಜಿಯವರು ತಮ್ಮಲ್ಲಿ ಇದ್ದುದ್ದನ್ನು ಜನಸಾಮಾನ್ಯರ ಸೇವೆಗೆ ಉಪಯೋಗಿಸುತ್ತಿದ್ದು ಇವರ ವಿಶೇಷತೆ ಆಗಿದೆ್ ಎಂದರು.
ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ . ಸೇವಾ ಭಾರತಿಯ ಅಧ್ಯಕ್ಷರಾದ ಜಯ ಶೆಟ್ಟಿ ಯವರು ಮಾತನಾಡುತ್ತಾ ಕೊಂಡೆವೂರು ಸ್ವಾಮೀಜಿಯವರ ಆಶ್ರಮನೋಡಿ ನನಗೆ ಬಹಳ ಸಂತೋಷವಾಗಿದೆ. ಸಮಾಜ ಸೇವೆಯಲ್ಲಿ ಸ್ವಾಮೀಜಿಯವರು ವಿವಿಧ ರೀತಿಯಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದು ಕೊಂಡೆವೂರು ಸ್ವಾಮೀಜಿಯವರೊಂದಿಗೆ ನಾವೆಲ್ಲರೂ ಇರೋಣ. ಸಮಾಜವನ್ನು ಪ್ರೀತಿಸೋಣ. ಅಸಯಾಕರಿಗೆ ಸ್ಪಂದಿಸೋಣ ಎಂದರು.
ನಿತ್ಯಾನಂದ ಯೋಗಾಶ್ರಮ ಕೊಂಡೇವೂರು ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್ ರೈ, ಗೌರವ ಅಧ್ಯಕ್ಷ ಅಶೋಕ್ ಕೋಟ್ಯಾನ್, ನವೋದಯ ಕನ್ನಡ ಸಂಘ ಠಾಣೆ ಅಧ್ಯಕ್ಷ ಧಯಾನಂದ ಶೆಟ್ಟಿ ಏಳತ್ತೂರುಗುತ್ತು, ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸಾನ್ ನಗರ ಠಾಣೆ ಅಧ್ಯಕ್ಷ ಜಯರಾಮ ಪೂಜಾರಿ, ಗೌರವ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ನಿತ್ಯಾನಂದ ಸೇವಾ ಬಳಗ ಠಾಣೆ ಅಧ್ಯಕ್ಷ ರಘುನಾಥ ರೈ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಗಣೇಶಪುರಿ ಟ್ರಸ್ಟಿ ನ್ಯಾಯವಾದಿ ಸಂಧ್ಯಾ ಜಾಧವ್, ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮುಂಬಯಿ ಸಮಿತಿ ಕಾರ್ಯದರ್ಶಿ ಹರೀಶ್ ಚೇವಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕಲಾ ಜಗತ್ತು ಸಂಸ್ಥೆಯ ರೂವಾರಿ ವಿಜಯ್ ಕುಮಾರ್ ಶೆಟ್ಟ ಅವಧೂತ ನಿತ್ಯಾನಂದನ ಗುರುಗಳ ಸಿನಿಮಾ ಮಾಡುವ ಬಗ್ಗೆ ತಮ್ಮ ವಿಚಾರಗಳನ್ನು ಸಭೆಯಲ್ಲಿ ತಿಳಿಸಿದರು.
ರಘುವೀರ ಹೆಗ್ಡೆ ಧಾಣೆ ಇವರು ಕಾರ್ಯಕ್ರಮ ನಿರ್ವಹಿಸಿದರು.
ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಶ್ರೀಗಳಿಂದ ಮಂತ್ರಕ್ಷತೆಯನ್ನು ಪಡೆದರು.
—
B. Dinesh Kulal
Mob.: 9821868674
Show quoted text




