
ಮುಂಬೈಯ ಹಿರಿಯ ಸಾಮಾಜಿಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ 2025-28ರ ಅವಧಿಗೆ ನಡೆದ ಆಡಳಿತ ಮಂಡಳಯ ಚುನಾವಣೆಯಲ್ಲಿ ವಿಶನ್-2030 ಪ್ಯಾನೆಲ್ ನ 24 ಅಭ್ಯರ್ಥಿಗಳು ಜಯಗಳಿಸಿ, ಮುಂದಿನ ಅವಧಿಗೆ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲಿರುವರು.
ಮಂಡಳಿಯ ನೂತನ ಆಡಳಿ ಮಂಡಳಿಯ ಸದಸ್ಯರ ಆಯ್ಕೆಗಾಗಿ ಜೂನ್ 29ರಂದು, ಅಂಧೇರಿ ಪಶ್ಚಿಮ ಮೊಗವೀರ ಭವನದಲ್ಲಿ ಚುನಾವಣೆ ನಡೆದಿದ್ದು, ಒಟ್ಟು 3055(ಮೂರು ಸಾವಿರದ ಐವತ್ತ ಐದು)ಸದಸ್ಯರು ಮತದಾನ ಮಾಡಿದ್ದರು. ಮತದಾನದ ಬಳಿಕ ಸಂಜೆ 6.30ಕ್ಕೆ ಮತ ಏಣಿಕೆ ಆರಂಭಗೊಂಡು, ಜೂನ್ 30ರ ಬೆಳಿಗ್ಗೆ 6 30 ಗಂಟೆಗೆ ಕೊನೆಗೊಂಡು, ವಿಶನ್-2030 ಬಣ ಜಯಭೇರಿ ಬಾರಿಸಿತು.
ಈ ಬಾರಿಯ ಚುನಾವಣೆಯಲ್ಲಿ ದಿವಂಗತ ಸದಾನಂದ ಕೋಟ್ಯಾನ್ ಅವರ ಗೌರವ ಸ್ಮರಣೆಯೊಂದಿಗೆ, ಮೊಗವೀರ ಸಮಾಜದ ಹೆಮ್ಮೆಯ ನಾಡೋಜ ಜಿ ಶಂಕರ್, ಸಮಾಜದ ಗಣ್ಯರುಗಳಾದ ವೇದ ಪ್ರಕಾಶ್ ಶ್ರೀಯಾನ್, ಸುರೇಶ್ ಕಾಂಚನ್, ಗೋಪಾಲ ಪುತ್ರನ್ ಇವರ ಸಂಪೂರ್ಣ ಬೆಂಬಲದ ‘ವಿಶನ್-2030″ ಪ್ಯಾನೆಲ್ ಮೀನಿನ ಚಿಹ್ನೆಯೊಂದಿಗೆ, ಹಾಗೂ ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿರುವ ಯು ಅರುಣ್ ಕುಮಾರ್ ಅವರ ” ನಮ್ಮ ಮೊಗವೀರ ಮಂಡಳಿ” ಬಣ ಹಣತೆ ಚಿಹ್ನೆಯೊಂದಿಗೆ, ತಲಾ 25 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಸಮಾಜ ಬಾಂಧವರಲ್ಲಿ ಕುತೂಹಲ ಮೂಡಿಸಿತ್ತು.
‘ವಿಶನ್-2030’ ಬಣದಲ್ಲಿ ವರದರಾಜ್ ಶ್ರೀಯಾನ್ ಒಬ್ಬರೇ ಚುನಾವಣೆಯಲ್ಲಿ ಪರಭವಗೊಂಡಿದ್ದು, ‘ನಮ್ಮ ಮೊಗವೀರ ಮಂಡಳಿ’ ಬಣದ ಎಚ್ ಅರುಣ್ ಕುಮಾರ್ 1560 ಮತ ಗಳಿಸಿ ಜಯ ಗಳಿಸಿದ ಏಕೈಕ ಅಭ್ಯರ್ಥಿಯಾಗಿದ್ದಾರೆ.
ವಿಶನ್-2030 ಬಣದ ಜಯಗಳಿಸಿದ ಅಭ್ಯರ್ಥಿಗಳು ಮತ್ತು ಅವರು ಗಳಿಸಿದ ಮತಗಳು
- ದಯಾವತಿ ಎಂ ಸುವರ್ಣ – 1753
- ಪ್ರೀತಿ ಎಚ್ ಶ್ರೀಯಾನ್ – 1687
- ದಿಲೀಪ್ ಕುಮಾರ್ ಮೂಲ್ಕಿ – 1666
- ಗಣೇಶ ಕೆ ಕಾಂಚನ್ – 1653
- ಹರೀಶ್ ಡಿ ಸುವರ್ಣ – 1645
- ದೇವರಾಜ್ ಕುಂದರ್ – 1644
- ದಾಮೋದರ ಬಿ ಪುತ್ರನ್ – 1635
- ಧರ್ಮೇಶ್ ಜಿ ಪುತ್ರನ್ – 1623
- ಕುಮಾರ್ ಮೆಂಡನ್ – 1618
- ಬಿ ಕೆ ಪ್ರಕಾಶ್ 7 1613
- ಹೇಮಲತಾ ಶಶಿಂದ್ರ – 1609
- ಕಿರಣ್ ಮೆಂಡನ್ – 1605
- ಪ್ರಜ್ವಲ್ ಸಾಲ್ಯಾನ್ – 1602
- ಚಂದ್ರಕಾಂತ್ ಸಾಲಿಯಾನ್ – 1600
- ಪ್ರಮೋದ್ ಕುಮಾರ್ – 1600
- ಚಂದ್ರಶೇಖರ್ ಕರ್ಕೇರ – 1599
- ಪ್ರಶಾಂತ್ ಎ ತಿಂಗಳಾಯ – 1599
- ಪುರುಷೋತ್ತಮ್ ಎಲ್ ಕರ್ಕೇರ – 1586
- ಮನ್ಮೋಹನ ಯ ಕರ್ಕೇರ – 1584
- ಮಹೇಂದ್ರ ಜಿ ಕುಂದರ್- 1583
- ರವಿರಾಜ್ ಎಚ್ ಕುಂದರ್ 1569
- ರಾಜೇಶ್ ಎಸ್ ಪುತ್ರನ್ – 1542
- ವಜ್ರಕಾಂತ್ ಕುಂದರ್ – 1530
- ಸಂತೋಷ್ ಬಿ ಕೋಟ್ಯಾನ್ – 1510.





