31 C
Mumbai
May 24, 2026
Mumbai News Kannada
ಸುದ್ದಿ

ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಶತ ಸಂವತ್ಸರೋತ್ಸಮ ಸಂಭ್ರಮದ ಮನವಿ ಪತ್ರ ಬಿಡುಗಡೆ .





ಶಾಲೆ, ಊರು, ಗುರುಗಳು ಋಣ ಮುಕ್ತರಾಗಬೇಕು: ಶಾಸಕ ಸುರೇಶ್ ಶೆಟ್ಟಿ ಗುರ್ಮೆ. 

ಚಿತ್ರ ವರದಿ : ದಿನೇಶ್ ಕುಲಾಲ್.

ಮುಂಬಯಿ :.ವಿದ್ಯಾವರ್ಧಕ ಸಂಘ (ರಿ.) ಶಿರ್ವ ಇದರ ಆಡಳಿತಕ್ಕೆ ಒಳಪಟ್ಟಿರುವ  ಸಹಸ್ರಾರು ಜನಕ್ಕೆ ವಿದ್ಯಾರ್ಜನೆ ಮಾಡಿದ ದೇಗುಲ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕುತ್ಯಾರು

ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ  ಶತ ಸಂವತ್ಸರೋತ್ಸವ ಸಂಭ್ರಮದ ಮನವಿ ಪತ್ರ ಬಿಡುಗಡೆ ಹಾಗೂ ಸಮಾಲೋಚನೆಯ ವಿಶೇಷ ಸಭೆ ಜುಲೈ 4ರಂದು ಶುಕ್ರವಾರ  ಹೊಟೇಲ್ ಮುಂಬೈ ಮೆಟ್ರೋ, ಮೊದಲನೆ ಮಹಡಿ, ಸಾಕಿನಾಕಾ ಜಂಕ್ಷನ್, ಸಾಕಿನಾಕಾ ಮೆಟ್ರೋ ಸ್ಟೇಶನಿನ ಹತ್ತಿರ ಇಲ್ಲಿ  ವಿದ್ಯಾದಾಯಿನಿ ಶಾಲೆಯನ್ನು ಮುನ್ನಡೆಸುತ್ತಿರುವ ವಿದ್ಯಾವರ್ಧಕ ಸಂಘ (ರಿ.) ಶಿರ್ವ ಇದರ ಅಧ್ಯಕ್ಷರಾಗಿರುವ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡುತ್ತಾ ಊರಿನ ಅಭಿವೃದ್ಧಿಗೆ ಪೂರಕವಾಗಿರುವ ಶಾಲೆ ಗೆ ನೂರು ವರ್ಷ ಸಂಭ್ರಮ ಎಂದರೆ ಅಲ್ಲಿ ವಿದ್ಯಾರ್ಥಿಗಳಾಗಿದ್ದರಿಗೆ ಮತ್ತು ಶಿಕ್ಷಕರಾಗಿ ಸೇವೆ ಮಾಡಿದ ಎಲ್ಲರಿಗೂ ಅಭಿಮಾನದ ಸಂಗತಿ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲರಿಗೂ ಋಣ ಸಂದಾಯ ಮಾಡುವ ಭಾಗ್ಯ ಒದಗಿ ಬಂದಿದೆ. ನಾವು ಎಷ್ಟು ಸಂಪಾದನೆ ಮಾಡಿದರರೂ, .ಎಷ್ಟು ಎತ್ತರಕ್ಕೆ ಬೆಳೆದರರೂ, ಊರು, ಶಾಲೆ, ಗುರುಗಳನ್ನು ಎಂದದೂ ಮರೆಯಬಾರದು. ಕನ್ನಡ ಮಾಧ್ಯಮದ ಈ ಶಾಲೆ ಅಭಿವೃದ್ಧಿಗೊಳ್ಳಲು ವಿದ್ಯಾರ್ಥಿಗಳೆಲ್ಲರೂ ಸಹಕಾರ ನೀಡಬೇಕು. ಇಂಥ  ಕೆಲಸಗಳಿಗೆ ಸಹಕಾರ ನೀಡಿದಾಗ ದೇವರ ಕೂಡ ಅನುಗ್ರಹವಿರುತ್ತದೆ. ಊರಿನ ಅಭಿವೃದ್ಧಿಗೆ ಪೂರಕವಾಗಿರುವ ಈ ಶಾಲೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಕಾಗಿದೆ. ನಮ್ಮ ಮನವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

   ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿದರಾಗಿದ್ದ ಶತ ಸಂವತ್ಸರೋತ್ಸವ ಸಮಿತಿಯ ಅಧ್ಯಕ್ಷರಾದ ವಿದ್ವಾನ್   ಕೆಂಜ ಶ್ರೀಧರ್ ತಂತ್ರಿ ಆಶೀರ್ವಚನದ ಮಾತುಗಳನಾಡುತ್ತಾ ಕುತ್ಯಾರು ಆಸು ಪಾಸಿನ ಗ್ರಾಮಗಳಿಗೆ ರಾಜಧಾನಿಯಾಗಿದೆ. ಈ ಗ್ರಾಮದ ನಾಗರಿಕನಾಗಿ ಶಾಲೆಯ ಅಭಿವೃದ್ಧಿಗೆ ಪೂರಕವಾಗುವ ನನ್ನ ಸೇವೆಗಳನ್ನು ಮಾಡಿದ್ದೇನೆ. ಮನುಷ್ಯನಿಗೆ ವಿದ್ಯೆ ಮುಖ್ಯವಾಗಿದೆ ಅಂತ ವಿದ್ಯೆ ನೀಡಿದ ದೇಗುಲಕ್ಕೆ ನೂರು ವರ್ಷ ಸಂಭ್ರಮದಲ್ಲಿ ಶಾಲೆಗೆ ಕಲಿತ ವಿದ್ಯಾರ್ಥಿಗಳು ಊರಿನ ಜನ ಮತ್ತು ಮುಂಬೈಯ ದಾನಿಗಳು ಸಹಕಾರ ನೀಡಬೇಕು ಎಂದರು. 

    ಅತಿಥಿಯಾಗಿ ಪಾಲ್ಗೊಂಡಿದ್ದ ವಿದ್ಯಾವರ್ಧಕ ಆಡಳಿತ ಮಂಡಳಿಯ ಸದಸ್ಯ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ  ಮಾತನಾಡಿ ಗ್ರಾಮಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಬಂದ ನಂತರ ಕನ್ನಡ ಮಾಧ್ಯಮದ ಶಾಲೆಗಳು ಬಹಳಷ್ಟು ಮುಚ್ಚಿಕೊಂಡಿದೆ.  ಆದರೆ ಈ ಶಾಲೆಗೆ ನೂರು ವರ್ಷ .ಇಲ್ಲಿ ಬಹಳಷ್ಟು ಜಾಗಗಳಿದೆ ಒಳ್ಳೆಯ ಯೋಜನೆಗಳ ರೂಪಿಸಿದ್ದೀರಿ. ಒಳ್ಳೆಯ ಕಾರ್ಯಕ್ಕೆ ವಿದ್ಯಾರ್ಥಿಗಳು ಮುಂಬೈಯ ದಾನಿಗಳು ಸಹಕಾರ ನೀಡುವ ಬೇಕು ಎಂದರು.

  ಮತ್ತೊರ್ವ ಅತಿಥಿ  ಮುಂಬಯಿ ಬಂಟರ ಸಂಘದ ಎಸ್  ಎಮ್ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ಊರಿನ ದೇವಸ್ಥಾನಗಳು, ಶಾಲೆ ಅಭಿವೃದ್ಧಿ ಯಾಗಬೇಕಿದ್ದರೆ ಮುಂಬೈಯ ದಾನಿಗಳ ಸಹಕಾರ ನೀಡುತ್ತಾ ಬಂದಿದ್ದಾರೆ. ನೂರು ವರ್ಷದ ಸಂಭ್ರಮದಲ್ಲಿರುವ ಈ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸೇವ ನಿರತರಾಗಿರುವ ಪದಾಧಿಕಾರಿಗಳೆಲ್ಲರೂ ಮುಂಬೈಯಲ್ಲಿ ಬಂಟರ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿಕೊಂಡವರು. ಆದ್ದರಿಂದ ಈ ಶಾಲೆಯ ನೂರು ವರ್ಷದ ಸಂಭ್ರಮ ಉತ್ತಮ ರೀತಿಯಲ್ಲಿ ನಡೆಯುತ್ತದೆ ಅದಕ್ಕೆ ಆರ್ಥಿಕ ನೆರವು ಕೂಡ ದೊಡ್ಡ ಮಟ್ಟದಲ್ಲಿ ಸೇರಿಕೊಳ್ಳುತ್ತದೆ ಎಂದು ನುಡಿದರು..

  ‌ ಸಭೆಯ ಅಧ್ಯಕ್ಷತೆಯನ್ನು ವಹಿಸಿದ     ಮುಂಬಯಿ ವಲಯದ ಅಧ್ಯಕ್ಷರಾದ  ಸುರೇಶ್ ಶೆಟ್ಟಿ, ಕೆಂಜ ನಡಿಗುತ್ತು ಮಾತನಾಡುತ್ತಾ ವಿದ್ಯಾ ದಾನಕ್ಕಿಂತ ದೊಡ್ಡ ದಾನ ಇಲ್ಲ .ನಾವು ಹುಟ್ಟಿದ ಮನೆ, ಕಲಿತ ಶಾಲೆ ಅಭಿವೃದ್ಧಿಗೊಳ್ಳಲು  ಸಹಕಾರ ನೀಡಬೇಕು. ನಮ್ಮ ಊರಿನಲ್ಲಿ ದೇವಸ್ಥಾನ .ಶಾಲೆ ಇಲ್ಲದಿದ್ದರೆ ಆ ಊರಿಗೆ ಗೌರವಿರುವುದಿಲ್ಲ. ಆದ್ದರಿಂದ ನಮ್ಮ ಊರಿನ ಅಭಿವೃದ್ಧಿಗೆ ಪೂರಕವಾಗಿರುವ ಶಾಲೆಗೆ ನೂರು ವರ್ಷ ನಮಗೆಲ್ಲರಿಗೂ ಜವಾಬ್ದಾರಿ ಇದೆ ಈ ಶಾಲೆಯ ಅಭಿವೃದ್ಧಿಗೆ ದೇಣಿಗೆಯನ್ನು ನೀಡುವ ಮೂಲಕ ಸಹಕಾರ ನೀಡಬೇಕು. ನಮ್ಮ ಕುತ್ಹ್ಯಾರು ಸಣ್ಣ ಊರು ಇಲ್ಲಿಯ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದಂತೆ ನಾವೆಲ್ಲರೂ  ಶ್ರಮಿಸಬೇಕು. ಬಾರಿ ಸಂಖ್ಯೆಯಲ್ಲಿ ಸೇರಿರುವ ಮಹಿಳಾ ಹಳೆ ವಿದ್ಯಾರ್ಥಿಗಳಿಂದ ನಮ್ಮ ಸಂಘಟನೆಗೆ ಶಕ್ತಿ ತುಂಬಿದೆಎಂದು ನುಡಿದರು. 

ಸಂಘಟನಾ ಕಾರ್ಯದರ್ಶಿಗಳಾದ  ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ಶಾಲೆಯ ಕಾರ್ಯ ಚಟುವಟಿಕೆಗಳು ಮತ್ತು ಅಭಿವೃದ್ಧಿಯ ಕಾರ್ಯಗಳು ಬಗ್ಗೆ ಸಮಗ್ರವಾಗಿ ತಿಳಿಸಿದರು. 

 ಶತಮಾನೋತ್ಸವ ಸಮಿತಿ ಸಂಚಾಲಕರದ ಕಿಶೋರ್ ಕುಮಾರ್ ಕುತ್ಯಾರು ಸ್ವಾಗತಿಸಿದರು.  ಮುಂಬೈ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ಯಾರು ಧನ್ಯವಾದ ನೀಡಿದರು.   ಕಾಂತಿ ಶೆಟ್ಟಿ ಕುತ್ಯಾರು ಮಾಗಂದಡಿ ಪ್ರಾರ್ಥನೆ ಮಾಡಿದರು. 

ಸಭೆಯಲ್ಲಿ ಮುಂಬೈ ವಲಯದ ಉಪಾಧ್ಯಕ್ಷ   ಸತ್ಯಹಾಸ ಶೆಟ್ಟಿ , ಸದಾಶಿವ ಶೆಟ್ಟಿ (M.D adroit corporate services pvt ltd.)ಕಿಶೋರ್ ಕುಮಾರ್ ಪಟೇಲರಮನೆ. ರವೀಂದ್ರ ಶೆಟ್ಟಿ ದೊಂಬಿವಲಿ, . ಚಿತ್ತರಂಜನ್ ಶೆಟ್ಟಿ, ರಮೇಶ್ ರೈ, ರತ್ನಾಕರ್ ಶೆಟ್ಟಿ ಅಗರ್ ದಂಡೆ.ವಿಶ್ವನಾಥ ಭಂಡಾರಿ, ವಾಸುದೇವ ಬಂಜನ್,  ವಿವೇಕ ಕಿಣಿ, ಅಶೋಕ್ ಕುಲಾಲ್ ಪಡುಮನೆ. ನ್ಯಾಯವಾದಿ ಆರ್ ಜಿ ಶೆಟ್ಟಿ, ಶಿವಾನಂದ ಆಚಾರ್ಯ,  ದಾಮೋದರ ಶೆಟ್ಟಿ ಮೀರಾ ರೋಡ್ , ರಘುನಾಥ ಪೂಜಾರಿ, ಸುರೇಶ್ ಶೆಟ್ಟಿ ಮಾಗಂದಡಿ , ದಿನೇಶ್ ಆಚಾರ್ಯ, ಮತ್ತಿದ್ದರೂ ಉಪಸ್ಥಿತರಿದ್ದರು.


ಶಾಲೆಯಲ್ಲಿ   ಸೌಲಭ್ಯಗಳು ಕಡಿಮೆಯಾದಾಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ: ಸಿ ಎ ಶಂಕರ್ ಬಿ. ಶೆಟ್ಟಿ

  ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಂಬೈ ವಲಯದ   ಗೌರವಾಧ್ಯಕ್ಷರಾದ ಸಿಎ ಶಂಕರ್ ಬಿ. ಶೆಟ್ಟಿ ಮಾತನಾಡುತ್ತಾ ನಾನು ಕುತ್ಯರಿನ ಈ ಶಾಲೆಯಲ್ಲಿ ಕಲಿತಿಲ್ಲ ಆದರೂ ನನ್ನನ್ನು ಬಹಳ ಗೌರವದಿಂದ ಸನ್ಮಾನಿಸಿದ ಶಾಲೆ ಇದಾಗಿದೆ. ಊರಿನ ದೇವಸ್ಥಾನಗಳು. ದೈವಸ್ಥಾನಗಳಿಗೆ  ದಾನಗಳು ಬಹಳಷ್ಟು ಬರುತ್ತದೆ .ಶಿಕ್ಷಣಕ್ಕೆ ಮಹತ್ವವಾದ ದಾನವನ್ನು ನೀಡುವ ಜನ ಕಡಿಮೆ. ಊರಿನ ದೇವಸ್ಥಾನಗಳು ಅಭಿವೃದ್ಧಿಗಳು ಬೇಕು ಅದರೊಟ್ಟಿಗೆ ಶಾಲೆಯ ಅಭಿವೃದ್ಧಿ ಕೂಡ ಮುಖ್ಯವಾಗಿದೆ. ಈ ದೇಶ ಬಲಿಷ್ಠವಾಗ ಬೇಕಿದ್ದರೆ ಶಿಕ್ಷಣದಿಂದ ಮಾತ್ರ ಸಾಧ್ಯ.. ನೂರು ವರ್ಷಗಳಿಂದ ಈ ಶಾಲೆಯ ಯನ್ನು ಒಳ್ಳೆ ರೀತಿಯಲ್ಲಿ ಮುನ್ನಡೆಸಿದ್ದಾರೆ. ಈಗ ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂಬೈಯಲ್ಲಿ ಅಥವಾ ದೇಶ ವಿದೇಶಗಳಲ್ಲಿ ಉತ್ತಮ ವ್ಯಕ್ತಿಗಳಾಗಿ ಉದ್ಯಮಿಗಳಾಗಿ ಬೆಳೆದಿದ್ದಾರೆ.  ಶಾಲೆ ಉಳಿವಿಗೆ ಮತ್ತು ಅಭಿವೃದ್ಧಿಗೆ ನಾವೆಲ್ಲರೂ  ಶಕ್ತಿ ಮೀರಿ ನಮ್ಮ ಸಹಕಾರವನ್ನು ನೀಡಬೇಕು. ಶಾಲೆಯಲ್ಲಿ ಒಳ್ಳೆ ರೀತಿಯ ಸೌಲಭ್ಯಗಳು ಶಿಕ್ಷಕರು ಮತ್ತು ಬಸ್ಸಿನ ವ್ಯವಸ್ಥೆಗಳು ಮತ್ತಿತರ ಅಗತ್ಯವಾಗಿರುವ ಸೇವೆಗಳಿದ್ದಾಗ ವಿದ್ಯಾರ್ಥಿಗಳು ಬಹಳಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಇಂಥ ಯೋಜನೆಗಳು ಆಗಬೇಕಾದರೆ ನಾವೆಲ್ಲರೂ ಅದಕ್ಕೆ ಕೈಜೋಡಿಸಬೇಕು ಎಂದರು.


B. Dinesh Kulal

Mob.: 9821868674



Related posts

ಭಾರತ್ ಬ್ಯಾಂಕ್‌ ನ ಗೋರೆಗಾಂವ್ ಶಾಖೆಯ ಗಣೇಶ್ ಪೂಜಾರಿ ಸೇವಾ ನಿವೃತ್ತಿ

Mumbai News Desk

ಮುಂಬೈ ಮೇಯರ್ ಪಟ್ಟ ಅಲಂಕರಿಸಿದ್ದ ಮೊದಲ ಬಿಜೆಪಿ ನಾಯಕ ಕನ್ನಡಿಗ ಡಾ. ಪ್ರಭಾಕರ್ ಪೈ

Mumbai News Desk

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ1981-82 ಸಾಲಿನ ಹಳೆವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ, ಉಪನ್ಯಾಸಕರಿಗೆ ಸನ್ಮಾನ

Mumbai News Desk

ಕರ್ನಿರೆ ಫೌಂಡೇಷನ್ ವತಿಯಿಂದ 27ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ,

Mumbai News Desk

ಸಾಕ್ಷಿ ಚಂದ್ರಹಾಸ ಬೆಳ್ಚಡ ಇವರಿಗೆ ಆಸ್ಟ್ರೇಲಿಯಾದಿಂದ ವಿಶಿಷ್ಟ ಸಾಧನೆಯೊಂದಿಗೆ ನಗರ ಯೋಜನೆ ಮತ್ತು ಪರಿಸರದಲ್ಲಿ ಸ್ನಾತಕೋತ್ತರ ಪದವಿ

Mumbai News Desk

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಎನ್ಐಎ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಆರೋಪಿ ಶಾರೀಕ್

Mumbai News Desk