
ವಸಯಿ, ಜು. 15- ವ್ಯಾಟ್ ಮತ್ತು ಅಬಕಾರಿ ಪರವಾನಗಿ ತೆರಿಗೆಯಲ್ಲಿ ಹೆಚ್ಚಳ ಹಾಗೂ ಉದ್ಯಮದಲ್ಲಿ ಆಗುವ ವ್ಯತಿರಿಕ್ತ ಪರಿಣಾಮವನ್ನು ಸರಕಾರದ ಗಮನಕ್ಕೆ ತರಲಿಕ್ಕೆ ಇಂಡಿಯನ್ ಹೋಟೆಲ್ಸ್ ಆ್ಯಂಡ್ ರೆಸ್ಟೋರೆಂಟ್ ಎಸೋಸಿಯೇಶನ್ (ಆಹಾರ್) ಮಹಾರಾಷ್ಟ್ರದಾದ್ಯಂತ ಜು. 14ರ ಸೋಮವಾರ ಒಂದು ದಿನದ ಬಂದ್ಗೆ ಕರೆ ನೀಡಿದ್ದು . ಇದಕ್ಕೆ ಬೆಂಬಲಿತವಾಗಿ ವಸಯ ತಾಲೂಕು ಹೋಟೆಲ್ ಎಸೋಸಿಯೇಶನ್ . ಸದಸ್ಯರು ಜಮಾಯಿಸಿ ತಮ್ಮ ವಿರೋಧವನ್ನು ಘೋಷಣೆಗಳೊಂದಿಗೆ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಪರಿಸರದ ಎಲ್ಲಾ ಬಾರ್ ಮತ್ತು ಪರ್ಮಿಟ್ ರೂಮ್ ಗಳನ್ನು ಬಂದ್ ಮಾಡಿದ್ದು, ಒಂದೇ ವರ್ಷದ ಅವಧಿಯಲ್ಲಿ ಮೂರನೆಯ ಬಾರಿಗೆ ತೆರಿಗೆ ಹೆಚ್ಚಳದಿಂದ ಹೋಟೆಲ್ ಉದ್ಯಮದ ಮೇಲೆ ಉಂಟಾಗುವ ಅತೀ ಹಿನ್ನಡೆ ಇತ್ಯಾದಿ. ಕುರಿತು ಪ್ರತಿಭಟನಾ ರೂಪದಲ್ಲಿ ಒಂದು ದಿನದ ಬಂದ್ ಆಚರಿಸಲಾಯಿತು.
ವಸಾಯಿ ತಾಲೂಕನ ಹೋಟೆಲ್ ಎಸೋಸಿಯೇಶನ್ ಅಧ್ಯಕ್ಷ ಪ್ರೀತಂ ಸಿಂಗ್. ಉಪಾಧ್ಯಕ್ಷ ಭರತ್ ಪಾಂಡು ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಸದಸ್ಯರು ವಸಯಿ ಜಿಲ್ಲಾಧಿಕಾರಿ ಮನವಿಯನ್ನು ನೀಡಿದರು.




