32 C
Mumbai
March 7, 2026
Mumbai News Kannada
ಮುಂಬಯಿ

ರೇ ರೋಡ್ ಶ್ರೀ ಅಯ್ಯಪ್ಪ  ಭಕ್ತ ವೃಂದದ ಮಂದಿರದ ವರ್ಧಂತ್ಯೋತ್ಸವ.





ಬದುಕಿನಲ್ಲಿ ಯಾವುದೇ ಕಷ್ಟಗಳು ಎದುರಾದರೂ  ಆಧರ್ಮದಲ್ಲಿ ನಡೆಯಬಾರದು: ಸತೀಶ್ ಗುರುಸ್ವಾಮಿ

ಚಿತ್ರ ವರದಿ ದಿನೇಶ್ ಕುಲಾಲ್ 

ಮುಂಬಯಿ, ಜು. 18  ; ರೇ ರೋಡ್.

ದಾರುಖಾನ ಹೊಟೇಲ್ ಉಡುಪಿಯಲ್ಲಿ ಸತೀಶ್ ಗುರುಸ್ವಾಮಿಯವರು ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡಿರುವಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ

 ಮಂದಿರದ ವರ್ಧಂತ್ಯೋತ್ಸವನ್ನು ಸತೀಶ್ ಗುರುಸ್ವಾಮಿಯವರ ಮಹಾಪೂಜೆಯನ್ನು ನಡೆಸಿದರು..

ಬೆಳಗ್ಗೆ ಮಹಾಪೂಜೆ ನಡೆದ ನಂತರ ಅಪ್ಪಾಜಿ ಬೀಡು ವರ್ಲಿಯ ಮಹಿಳಾ ಮಂಡಳಿ ಹಾಗೂ ರೇ  ರೋಡ್ ಭಕ್ಕ ವೃಂದ ಇವರಿಂದ ಭಜನ ಸಂಕೀರ್ತನೆ ನಂತರ ಮಹಾ ಮಂಗಳಾರತಿ ಜರುಗಿತು. ದಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ  ಅಪ್ಪಾಜಿ ಬೀಡು ಗುರುಸ್ವಾಮಿ ರಮೇಶ್ ಗುರುಸ್ವಾಮಿ ಸಹಕರಿಸಿದರು.

ಮಹಾ ಪೂಜೆಯನ್ನು ನಡೆಸಿದ ಸತೀಶ್ ಗುರುಸ್ವಾಮಿಯವರು ಬಳಿಕ   ಮಾರ್ಗದರ್ಶನದ ಮಾತನಾಡುತ್ತಾ  ಬದುಕಿನಲ್ಲಿ ಯಾವುದೇ ಕಷ್ಟಗಳು ಎದುರಾದರೂ ಕೂಡ ಆಧರ್ಮದಲ್ಲಿ ನಡೆಯಬಾರದು. ಭಗವಂತನ ಮೇಲೆ ವಿಶ್ವಾಸವನ್ನಿಟ್ಟು ಬದುಕು ಮುನ್ನಡೆಸಬೇಕು ಎಂದು ನುಡಿದರು.

ಅನ್ನದಾನ ಸೇವೆ ನೀಡಿದ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಶೆಟ್ಟಿ , ಮತ್ತು ಹರೀಶ್ ಶೆಟ್ಟಿ ಯವರಿಗೆ, ಹೂವಿನ ಸೇವೆ ನೀಡಿದ ವಿಶ್ವನಾಥ್ ಶೆಟ್ಟಿ , ಮಂದಿರಕ್ಕೆ ಸ್ಥಳಾವಕಾಶ ನೀಡಿದ ರೇ ರೋಡ್ ಹೋಟೆಲ್ ಉಡುಪಿ ಮಾಲಿಕರಾದ ಶುಭನಂದ ಶೆಟ್ಟಿಯವರನ್ನು ಹಾಗೂ ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಸಿದ ಸರ್ವ ಭಕ್ತರಿಗೆ ರೇ ರೋಡ್ ಸ್ವಾಮಿ ಅಯ್ಯಪ್ಪ ಭಕ್ತ ವೃಂದದ ಸತೀಶ್ ಗುರುಸ್ವಾಮಿ , ಗೌರವ ಅಧ್ಯಕ್ಷ ಮಂಜುನಾಥ ಶೆಟ್ಟಿ , ಅಧ್ಯಕ್ಷ ಕಿಶೋರ್ ಶೆಟ್ಟಿ ಕಟಪಾಡಿ, ಸಂಚಾಲಕ ಜಗನ್ನಾಥ ಶೆಟ್ಟಿ,  ಉಪಾಧ್ಯಕ್ಷ ಬೆಳಪು ಪ್ರದೀಪ್ ಶೆಟ್ಟಿ,  ಕಾರ್ಯದರ್ಶಿ ಶಿಬರೂರು ಗುತ್ತು ಸುರೇಶ್ ಶೆಟ್ಟಿ ,  ಕೋಶಾಧಿಕಾರಿ ರವಿ ಮೂಳೂರು , ಜೊತೆ ಕಾರ್ಯದರ್ಶಿ ಸುಕೇಶ್ ಸ್ವಾಮಿ, ಜೊತೆ ಕೋಶಾಧಿಕಾರಿ  ರೂಪೇಶ್ ಸಾಣೂರು  ಹಾಗೂ ಮಂಜುನಾಥ ಗುರುಸ್ವಾಮಿ ಸೋಮೇಶ್ವರ, ಜಯ ಗುರುಸ್ವಾಮಿ ಅಡ್ವೆ  ಹಾಗೂ ಕಮಿಟಿ ಸದಸ್ಯರು ಉಪಸ್ಥಿತರಿದ್ದ ಎಲ್ಲಾ ಭಕ್ತರಿಗೆ  ಕೃತಜ್ಞತೆ ಸಲ್ಲಿಸಿದರು.

B. Dinesh Kulal

Mob.: 9821868674



Related posts

ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತ ಸಮಿತಿಯ ಚುನಾವಣೆ – ಜಯಶಾಲಿಯಾದ “ವಿಶನ್-2030” ಪ್ಯಾನೇಲ್

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ (ರಿ ) ಮಹಿಳಾ ವಿಭಾಗದ ವತಿಯಿಂದ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮಕ್ಕೆ ಭೇಟಿ

Mumbai News Desk

ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿ ವತಿಯಿಂದ ಧಾರಾವಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾಲಯದ ಕನ್ನಡ ಮಾಧ್ಯಮದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ ಪುರಂದರದಾಸರ ಭಜನಾ ಸ್ಪರ್ಧೆ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಅಜ್ದೇಗಾಂವ್, ಡೊಂಬಿವಲಿ – 35 ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ.

Mumbai News Desk