32 C
Mumbai
March 7, 2026
Mumbai News Kannada
ತುಳುನಾಡು

ಯುವವಾಹಿನಿ ಮೂಲ್ಕಿ ಆಟಿಡೊಂಜಿ ದಿನ :ಹಿಂದಿನ ಆಟಿಯ ದಿನಗಳನ್ನು ನೆನಪು ಮಾಡುವ ಕಾರ್ಯಕ್ರಮ





ನಮ್ಮ ಹಿರಿಯರ ಕಾಲದ ಸಂಸ್ಕಾರ, ಸಂಸ್ಕೃತಿ ಹಾಗೂ ವಿಧಿ,ನಿಯಮಗಳನ್ನು ನೆನಪು ಮಾಡಿ ಜನರಿಗೆ ಹೇಳಿಕೊಂಡು ಮುಂದುವರಿದರೆ ಒಳ್ಳೆಯದೆಂದು ಆಟಿಯ ಒಂದು ದಿನದ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮಂಗಳೂರು ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ ಹೇಳಿದರು. ಅವರು ಯುವವಾಹಿನಿ ಮೂಲ್ಕಿ ಘಟಕದ ಅಶ್ರಯದಲ್ಲಿ ನಡೆದ 23ನೇ ವರ್ಷದ ಆಟಿಡೊಂಜಿ ದಿನ
ಕಾರ್ಯಕ್ರಮದಲ್ಲಿ ಆಟಿಯ ತಮ್ಮನ, ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.


ಪುತ್ತೂರು ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಆಟಿ ತಿಂಗಳನ್ನು ಯಾವ ರೀತಿಯಲ್ಲಿ ಕಳೆಯುತಿದ್ದರು ಎಂಬ ಬಗ್ಗೆ
ಮಾತನಾಡುತ್ತಾ ಪ್ರಕೃತಿಯಲ್ಲಿ ಸಿಗುವಂತಹ ಗೆಡ್ಡೆ ಗೆಣಸುಗಳನ್ನು ತಿಂದು ಹಾಗೂ ಗಿಡಮೂಲಿಕೆಯ ಮದ್ದುಗಳನ್ನು
ಸೇವಿಸಿ ನೆಮ್ಮದಿಯಲ್ಲಿ ಬದುಕುತ್ತಿದ್ದರು ಎಂದು ಹೇಳಿದರು
ಮುಖ್ಯ ಅತಿಥಿಯಾಗಿ ಭಾಷಣಕಾರರಾಗಿ ಜಾನಪದ ವಿದ್ವಾಂಸ ದಿನೇಶ್ ಸುವರ್ಣ ರಾಯಿ ಮಾತನಾಡುತ್ತಾ ತುಳುವರು ಆಟಿ ತಿಂಗಳನ್ನು ಧಾರ್ಮಿಕ ವಿಧಿ ವಿಧಾನಗಳಿಗೆ ಅನುಸಾರವಾಗಿ ಬಹಳ ಕಷ್ಟದ
ದಿನಗಳನ್ನು ಆ ಕಾಲದಲ್ಲಿ ಯಾವ ರೀತಿಯಲ್ಲಿ ಕಳೆಯುತ್ತಿದ್ದರು ಹಾಗೂ ಆಟಿ ತಿಂಗಳ ಬಗ್ಗೆ ಬೇರೆಬೇರೆ ಗಾದೆಗಳನ್ನು ಬಿಡಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಚಿತ್ರ ನಟ ಹಾಗೂ ನಿರ್ಮಾಪಕ ಶೋಧನ್ ಶೆಟ್ಟಿ
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್
ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿನಯ ಕುಮಾರ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ಕೂಟದ ತಮೇರಿಯಾಗಿ ಮಾತನಾಡಿದರು. ನಿದೇರ್ಶಕಿ ಶಕೀಲಾ ಹರೀಂದ್ರ ಸುವರ್ಣ, ಕಾರ್ಯದರ್ಶಿ
ಪ್ರೇರಣಾ ಹಾಗೂ ಕೋಶಾಧಿಕಾರಿ ಪ್ರತ್ವಿಕ್ ಡಿ. ಕೋಟ್ಯಾನ್ ವೇದಿಕೆಯಲ್ಲಿದ್ದರು.
ಮಾಜಿ ಅಧ್ಯಕ್ಷ ವಿಜಯ ಕುಮಾರ್ ಕುಬೆವೂರು ಪ್ರಾಸ್ತಾವಿಸಿ ಉದಯ ಅಮೀನ್ ಮಟ್ಟು ನಿರೂಪಿಸಿದರು.



Related posts

ಉಡುಪಿ : ಪರ್ಯಾಯ ಆಚರಣೆಯ ಅಂಗವಾಗಿ ನಡೆದ ಧಾನ್ಯ ಮುಹೂರ್ತ

Mumbai News Desk

ಮುಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ 153 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಗೆಯ ಮೊತ್ತ ವಿತರಣೆ

Mumbai News Desk

ಕುಂಬಳೆ ಮುಂಡಪಳ್ಳ  ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಐತಿಹಾಸಿಕ ಕಲ್ಯಾಣೋತ್ಸವದಲ್ಲಿ, ಮಹಾದಾನಿಗೆ ಸನ್ಮಾನ, ಸಹಸ್ರಾರು ಭಕ್ತರು ಭಾಗಿ,

Mumbai News Desk

ಹರಿಶ್ಚಂದ್ರ ಪಿ. ಸಾಲ್ಯಾನ್‌ ನುಡಿಮುತ್ತು ಕೃತಿ ಬಿಡುಗಡೆ ಸಮಾರಂಭ

Mumbai News Desk

ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Mumbai News Desk

ಮುಲ್ಕಿ : ಸಾಧಕರ ಅರಸು ಕಂಬಳ ಪ್ರಶಸ್ತಿ 2025 ಪ್ರಕಟ – ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ

Mumbai News Desk