31 C
Mumbai
March 6, 2026
Mumbai News Kannada
ಮುಂಬಯಿ

 ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ  ಬಾಳ-ಕಾಟಿಪಳ್ಳ, ಮುಂಬೈ ಪ್ರವಾಸದ ಉದ್ಘಾಟನೆ, ಸನ್ಮಾನ





ಊರಿನ ನಾಟಕ, ಯಕ್ಷಗಾನ ತಂಡಗಳಿಗೆ ಮುಂಬೈಯ ಕಲಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ:
ಶಶಿಧರ ಕೆ   ಶೆಟ್ಟಿ ಇನ್ನಂಜೆ

ಕಲಾಪ್ರಕಾಶ ಪ್ರತಿಷ್ಠಾನ (ರಿ.) ಮುಂಬಯಿ
ಇವರ ಸಂಯೋಜನೆಯಲ್ಲಿ ಪ್ರಶಸ್ತಿ ವಿಜೇತ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ  ಬಾಳ-ಕಾಟಿಪಳ್ಳ ಕಲಾವಿದರು ಅಭಿನಯಿಸುವ  ಕಿತ್ತೂರುರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ  ಪೂರ್ಣಿಮಾ ಯತೀಶ್ ರೈ ನಿರ್ದೇಶನದ “ಶ್ರೀ ದೇವಿ ಮಹಾತ್ಮ ಯಕ್ಷಗಾನ ಪ್ರದರ್ಶನ ಜು 26 ರಂದು  ಹೊಟೇಲ್ ಗ್ಯಾಲಕ್ಸಿ ನಾಲಾಸೋಪಾರ (ಪ) ಇಲ್ಲಿ ನಡೆಯಿತು..

ಯಕ್ಷಗಾನದ ಮಧ್ಯಂತರದಲ್ಲಿ ತಂಡದ ನಿರ್ದೇಶಕಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಮೈಸಾಸುರ ಪಾತ್ರದಲ್ಲಿ ಸಂಭ್ರಮಿಸಿದ ಪೂರ್ಣಿಮಾ ಯತೀಶ್ ರೈ, ತೆಂಕುತಿಟ್ಟಿ ನ ಹಿರಿಯ ಚೆಂಡವಾದಕ ಸುಬ್ರಹ್ಮಣ್ಯ ಭಟ್ ದೇಲಂತ ಮಜಲು , ಹಾಗೂ ಕಟೀಲು ಮೇಳದ ಭಾಗವತ ಸತೀಶ್ ಬೊಂದೆಲ್  ಇವರನ್ನು ಸನ್ಮಾನಿಸಲಾಯಿತು.

    ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ   ತುಳುಕೂಟ ಫೌಂಡೇಶನ್, ನಾಲಾಸೋಪಾರ ಇದರ ಅಧ್ಯಕ್ಷ  ಶಶಿಧರ ಕೆ   ಶೆಟ್ಟಿ ಇನ್ನಂಜೆ ಮಾತನಾಡುತ್ತಾ ಕಲೆ ಮತ್ತು ಕಲಾವಿದರಿಗೆ ನಿರಂತರವಾಗಿ ಈ ಪರಿಸರದ ಎಲ್ಲಾ ಕಲಾಪೋಷಕರು ಸಹಕಾರವನ್ನು ನೀಡುತ್ತಾ ಬಂದವರು. ಪ್ರಕಾಶ್ ಶೆಟ್ಟಿ ಅವರು ಊರಿನಿಂದ ನಾಟಕ ಯಕ್ಷಗಾನ ತಂಡಗಳನ್ನು ಮುಂಬೈಗೆ ಬರಮಾಡಿಸಿ ಅವರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ..ಇಂತಹ ಸಂಘಟಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಸಾಯಿತಾಲೂಕಿನಲ್ಲಿ ಮೂರು ಯಕ್ಷಗಾನ ಶಿಬಿರಗಳಿಗದ್ದು, ಆ ಮೂಲಕ ಮಕ್ಕಳು ಮತ್ತು ಯಕ್ಷಗಾನ ಆಸಕ್ತರು ಯಕ್ಷಗಾನವನ್ನು ಅಭ್ಯಾಸ ಮಾಡುವ ಅವಕಾಶ ಲಭಿಸಿದೆ ಎಂದು ನುಡಿದರು .
ವೇದಿಕೆಯಲ್ಲಿ ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿ ( ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬಯಿ ವಸಯಿ ಡಹಣು ಪ್ರಾದೇಶಿಕ ಸಮಿತಿ ),  ಸುರೇಶ್ ಶೆಟ್ಟಿ ಕೊಪ್ಪ ( ಪಾಲುದಾರರು, ಹೋಟೆಲ್ ಲೇ ವಿವಾಂತ ವಿರಾರ್ )  ದೇವೇಂದ್ರ ಬಿ ಬುನ್ನನ್ ( ಅಧ್ಯಕ್ಷರು, ವಸಯಿ ಕರ್ನಾಟಕ ಸಂಘ )  ಸದಾಶಿವ ಎ ಕರ್ಕೇರ ( ಅಧ್ಯಕ್ಷರು, ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆ ) , ಓ. ಪಿ. ಪೂಜಾರಿ ( ಗೌ. ಪ್ರ. ಕಾರ್ಯದರ್ಶಿ, ಶ್ರೀ ಗುರುನಾರಾಯಣ ಸೇವಾ ಸಮಿತಿ ವಸಯಿ ) , ಕರುಣಾಕರ ಜಿ ಅಮೀನ್ ( ಕಾರ್ಯಾಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್ ವಸಯಿ ಸ್ಥಳೀಯ ಕಚೇರಿ ) , ಮೋಹನ್ ಬಿ ಶೆಟ್ಟಿ ( ಹೋಟೆಲ್ ಸರೋವರ್, ನಾಲಾಸೋಪಾರ )  ಜಗನ್ನಾಥ್ ಡಿ ಶೆಟ್ಟಿ ಪಳ್ಳಿ ( ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ ವಸಯಿ ಡಹಣು ಪ್ರಾದೇಶಿಕ ಸಮಿತಿ ) ದಯಾನಂದ್ ಬೊಂಟ್ರ ( ಉದ್ಯಮಿ, ಕಲಾ ಪೋಷಕರು ) ,  ಉಷಾ ಶ್ರೀಧರ ಶೆಟ್ಟಿ ( ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ, ವಸಯಿ ಕರ್ನಾಟಕ ಸಂಘ )  ಮೋಹಿನಿ ಸಂಜೀವ ಮಲ್ಪೆ ( ಮಾಜಿ ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ, ವಸಯಿ ಕರ್ನಾಟಕ ಸಂಘ ) ಸತೀಶ್ ಶೆಟ್ಟಿ ಅಡ್ವೆ ನಂದಿಕೂರು ( ರೋಯಲ್ ಮಾರ್ಕೆಟಿಂಗ್ ) ಉಪಸ್ಥಿತರಿದ್ದರು.

ತಂಡದ ನಿರ್ದೇಶಕಿ  ಪೂರ್ಣಿಮಾ ಯತೀಶ್ ರೈ  ಮಾತನಾಡಿ  ಈ ನಗರದಲ್ಲಿ ಯಕ್ಷಗಾನವನ್ನು ಪ್ರದರ್ಶಿಸಲು ಅವಕಾಶ ಲಭಿಸಿದೆ. ಇದಕ್ಕೆ ಮುಖ್ಯವಾಗಿ ಮುಂಬೈಯ ದಾನಿಗಳು ಕಾರಣರಾಗಿದ್ದಾರೆ. ಅವರ ಕಲಾ ಪ್ರೋತ್ಸಾಹ ನಮಗೆ ಸ್ಪೂರ್ತಿಯಾಗಿದೆ ಎಂದು ನುಡಿದರು.

ಅತಿಥಿಗಳಿಗೆ ತಂಡದ ಮುಂಬೈ ಸಂಚಾಲಕರು ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್., ಮತ್ತು ಪೂರ್ಣಿಮಾ ರೈ ಗೌರವಿಸಿದರು 

ಪ್ರವೀಣ್ ಶೆಟ್ಟಿ ಕಣಂಜಾರ್, ಸುಪ್ರೀತ್ ಶೆಟ್ಟಿ ಸಹಕರಿಸಿದರು.

B. Dinesh Kulal

Mob.: 9821868674



Related posts

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ: 39ನೇ ವಾರ್ಷಿಕ ಮಹಾಸಭೆ

Mumbai News Desk

ಜ್ಞಾನ ವಿಕಾಸ ಮಂಡಳ ಕಲ್ವಾ, ಇದರ ಆಡಳಿತದ ನ್ಯೂ ಇಂಗ್ಲಿಷ ಸ್ಕೂಲ್ ಗೆ, ಎಸ್ ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಪಲಿತಾಂಶ.

Mumbai News Desk

ತುಳು ಸಂಘ, ಬೋರಿವಲಿ ವತಿಯಿಂದ ಆಟಿದ ಒಂಜಿ ಕೂಟ,

Mumbai News Desk

ಡೊಂಬಿವಲಿಯಲ್ಲಿ ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ ಸಂಭ್ರಮ: ಸಾಹಿತಿಗಳಾದ ಪ್ರಜ್ಞಾ ಮತ್ತಿಹಳ್ಳಿ ಹಾಗೂ ತೇಜಾವತಿ ಎಚ್.ಡಿ ಅವರಿಗೆ ಪ್ರತಿಷ್ಠಿತ ಸ್ಮಾರಕ ಪ್ರಶಸ್ತಿ ಪ್ರದಾನ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಭಜನೆ – ಕುಣಿತ ಭಜನ ಸ್ಪರ್ಧೆ

Mumbai News Desk