32 C
Mumbai
March 7, 2026
Mumbai News Kannada
Uncategorized

ಕುಲಾಲ ಸಂಘ ಮುಂಬಯಿ ಥಾಣೆ, ಕಶಾರ, ಖರ್ಜಾತ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಆಟಿದ ಒಂಜಿ ದಿನ.





     ದೊಂಬಿವಲಿಆ5.    ಕುಲಾಲ ಸಂಘ ಮುಂಬಯಿ ಠಾಣೆ, ಕಶಾರ , ಖರ್ಜತ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಆಟಿಯ ಒಂಜಿ ದಿನ ಕಾರ್ಯಕ್ರಮವನ್ನು ಆ 03 ರಂದು  ದೊಂಬಿವಲಿ ಅಜ್ದೇಪಾಡ ಅಯ್ಯಪ್ಪ ಮಂದಿರದ ಸಭಾಮಂಟಪದಲ್ಲಿ ಅಧ್ಯಕ್ಷರಾದ ರಘು ಮೂಲ್ಯ, ಗೌ ಅಧ್ಯಕ್ಷರಾದ ದೇವದಾಸ್ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರ ಬಂಜನ್, ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ  ಗಿರೀಶ್ ಸಾಲಿಯಾನ್, ಮುಖ್ಯ ಅತಿಥಿಯಾಗಿ ಬಿಲ್ಡಿಂಗ್ ಕಮಿಟಿ  ಉಪ ಕಾರ್ಯ ಧ್ಯಕ್ಷ ದಾನಿ ಸುನಿಲ್ ಸಾಲಿಯಾನ್, ಉದ್ಯಮಿ ಜಗದೀಶ್ ಬಂಜನ್, ಸ್ಥಳೀಯ ಸಮಿತಿಯ    ಕಾರ್ಯದ್ಯಕ್ಷರಾದ ಲಕ್ಷ್ಮಣ್ ಸಿ ಮೂಲ್ಯ ಇವರ ಉಪಸ್ಥಿತಿಯಲ್ಲಿ ದೇವರ ಪ್ರಾರ್ಥನೆಯೊಂದಿಗೆ ವೇದಿಕೆಯ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಅದ್ಯಕ್ಷರು ರಘು ಮೂಲ್ಯ ಮಾತಾಡುತ್ತಾ 95 ವರ್ಷದ ಇತಿಹಾಸದ  ಕುಲಾಲಸಂಘ .ಆರ್ಥಿಕ ಸಂಕಷ್ಟದ ಸಮಯದ ನಮ್ಮ ತುಳುನಾಡಿನ ಆಷಾಡ ಮಾಸದಲ್ಲಿ ಆಗಿರುವ ಕಷ್ಟ ಸುಖಗಳನ್ನು ಎತ್ತಿ ತೋರಿಸಲು ಮುಂಬಯಿ ಸಂಘ ಸಂಸ್ಥೆ ಗಳು ಪ್ರಯತ್ನ ಪಡುತ್ತಾ ಬಂದಿದೆ, ಹಾಗೇನ  ಕುಲಾಲ ಸಂಘದ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವರು ಆಟಿ ತಿಂಗಳ ಸಂಕಷ್ಟದ ದಿನಗಳನ್ನು ಈಗಿನ ಯುವ ಜನತೆಗೆ ನಾಟಕ ರೂಪದಲ್ಲಿ ಅಥವಾ ಭಾಷಣ ರೂಪದಲ್ಲಿ ತೋರಿಸ ಸತತ ಪ್ರಯತ್ನ ಪಡುತ್ತಾ ಬಂದಿದೆ.  ಸ್ಥಳೀಯ ಸಮಿತಿಯ ಪ್ರತಿಯೊಂದು ಕಾರ್ಯಕ್ರಮವೂ ನಮ್ಮ ಜಾತೀ ಬಂದವರನ್ನು ಒಟ್ಟು ಕೂಡಿಸುವಲ್ಲಿ ಈ ಸ್ಥಳೀಯ ಸಮಿತಿ ಯಶಸ್ವಿಯಾಗಿದೆ, ಎಂಬುದನ್ನು ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಪ್ರತಿಯೊಂದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿ ತೋರಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ಮಾತಾಡುತ್ತಾ  ಸ್ಥಳೀಯ ಸಮಿತಿಯು ಹಿಂದೆ ಆಟಿ ತಿಂಗಳಲ್ಲಿ ದಿನ ತೆಗೆಯಲು ಪಟ್ಟ ಪರಿಶ್ರಮದ ಬಗ್ಗೆ ನಾಟಕ ರೂಪದಲ್ಲಿ , ಈಗಿನ ಸಮಾಜದ ಬದುಕು ಹಾಗೂ ಹಿಂದಿನ ಹಿರಿಯರ ಹಳ್ಳಿಯ ಬದುಕಿನ ವಾಸ್ತವಿಕ ಆಚಾರ ವಿಚಾರಗಳು ಸಂಸ್ಕೃತಿ ಇಂದಿನ ಜನರಿಗೆ ತೋರಿಸಿ ಕೊಟ್ಟಿದ್ದಾರೆ.ಯುವಕರನ್ನು ಹಾಗೂ ಮಹಿಳೆಯರನ್ನು ಒಟ್ಟು ಕೂಡಿಸಿ ಕಾರ್ಯ ಕ್ರಮ ಮಾಡಿ ತೋರಿಸಿದ ಮಹಿಳಾ ವಿಭಾಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

  ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ  ಕಾರ್ಯ ಧ್ಯಕ್ಷ ಗಿರೀಶ್ ಸಾಲಿಯಾನ್ ಮಾತಾಡುತ್ತಾ ಹಿಂದಿನ ಕಾಲದಲ್ಲಿ ಆಷಾಡ ಮಾಸದಲ್ಲಿ ತಿನ್ನಲು ಬಾರಿ ಅಭಾವ ಇರುತ್ತದೆ ಅದಕ್ಕಾಗಿ ಊಟಕ್ಕೆ ಬೇಕಾಗಿರುವ ನೈಸರ್ಗಿಕ ತಿಂಡಿ ತಿನಿಸುಗಳನ್ನು ಮಳೆಗಾಲದ ಆಷಾಡ ತಿಂಗಳಿಗೆ ಶೇಖರಣೆ ಮಾಡಿ ಇಡುವಂತಹ ಸಮಯ. ಅದಕ್ಕಾಗಿ ನಾವು ಯಾವಾಗಲೂ ನೈಸರ್ಗಿಕ ಗಿಡಗಳನ್ನು ನೆಟ್ಟು ಭೂಮಿಯನ್ನು ಫಲವತ್ತಾಗಿ ಇಡಲು ಶ್ರಮ ಪಡಬೇಕು. ಈ ಸ್ಥಳೀಯ ಸಮಿತಿ ಸದಸ್ಯರು ಯುವ ವಿಭಾಗದವರು ಈ ಕಾರ್ಯಕ್ರಮ ಯಶಸ್ವಿಯಾಗಲು ತುಂಬಾ ಶ್ರಮ ಪಟ್ಟಿದ್ದಾರೆ. 

 ಮಂಗಳೂರಿನ ಕುಲಾಲ ಭವನ ನವೆಂಬರ ತಿಂಗಳಿನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ, ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ ಅದಕ್ಕಾಗಿ ಈ ಸ್ಥಳೀಯ ಸಮಿತಿಯಿಂದ ಇನ್ನಷ್ಟು ಡಿಪಾಸಿಟ್ ಹಣ ಕೊಟ್ಟು ನಿಮಗೆ ಯಾವಾಗ ಬೇಕೋ ಆಗ ವಾಪಸ್ ತೆಗೆಯಬಹುದು. ಎಂದು ಸಭೆಗೆ ವಿನಂತಿಸಿದರು.

     ದಾನಿ ಸುನಿಲ್ ಸಾಲಿಯಾನ್ ಇವತ್ತಿನ ಕಾರ್ಯಕ್ರಮ ಕಡಿಮೆ ವೆಚ್ಚದಲ್ಲಿ ಮಾಡಿದ ಕಾರ್ಯಕ್ರಮ  ಸ್ಥಳೀಯ  ನಮ್ಮ ಜನತೆಯ ಒಗ್ಗಟ್ಟನ್ನು ತೋರಿಸುತ್ತಿದೆ. ನಮ್ಮ ಮಹಿಳಾ ವಿಭಾಗದವರು ಶ್ರಮ ಪಟ್ಟು ತಯಾರು ಮಾಡಿದ ಊರಿನ ಸಂಸ್ಕೃತಿಯ ತಿಂಡಿ ತಿನಿಸುಗಳನ್ನು ಇಂದು ನಾವು ಒಟ್ಟಾಗಿ ಈ ಚಾವಡಿಯಲ್ಲಿ ತಿನ್ನಲು ನಮಗೆ ಸಿಗುವುದು ನಮ್ಮ ಭಾಗ್ಯ . ಯಾವುದೇ ಸಂಘ ಸಂಸ್ಥೆ ಯಶಸ್ವಿಯತ್ತ ತಲುಪುವಾಗ, ಅದೆಷ್ಟೋ ಊಹ ಪೋಹಗಳು ಬರುತ್ತಾ ಇರುತ್ತದೆ , ಅದನ್ನೆಲ್ಲ ಬದಿಗಿಟ್ಟು ನಮ್ಮ ಸಂಘದ ಬಗ್ಗೆ ಒಳ್ಳೆಯ ಜ್ಞಾನದತ್ತ ನಡೆಯೋಣ.

 ಮತ್ತೊಮ್ಮೆ ನಮ್ಮ ಊರಿನಲ್ಲಿ ಒಟ್ಟಾಗುವ ಸುಸಂದರ್ಭ ನವಂಬರ್ ತಿಂಗಳಲ್ಲಿ ಬರಲಿದೆ. ಅದು ನಮ್ಮ ಕುಲಾಲಭವನದ ಲೋಕಾರ್ಪಣೆಯು ಬಹಳ ವಿಜೃಂಭಣೆಯಿಂದ ಜರಗಲಿದೆ.2 ದಿನದ ಕಾರ್ಯಕ್ರಮದಲ್ಲಿ ಎಲ್ಲರೂ ಒಗ್ಗಟಾಗಿ ಮುಂಬಯಿoದ ಮಂಗಳೂರಿಗೆ ಪ್ರಯಾಣಿಸೋಣ .

   ಮಹಿಳಾ ವಿಭಾಗದ   ಕಾರ್ಯಾಧ್ಯಕ್ಸೆ ಸುಚಿತ ಬಂಜನ್ ನಮ್ಮ ಮಹಿಳಾ ವಿಭಾಗದವರು ಪ್ರತಿಯೊಂದು ಕಾರ್ಯಕ್ರಮವನ್ನು ಎಲ್ಲರೂ ಒಟ್ಟಾಗಿ ಯಶಸ್ವಿಯಾಗಿ ನಡೆಯಲು ಅವರ ದಿಟ್ಟ ಯೋಜನೆ. ಇಂದು ಸ್ವಲ್ಪ ಸಮಯದಲ್ಲಿ ನಾಟಕವನ್ನು ಒಳ್ಳೆಯ ರೀತಿಯಲ್ಲಿ ಮಾಡಿದ್ದಾರೆ. ಹಾಗೂ ಹಳ್ಳಿಯ ಹಿರಿಯರ ಕಷ್ಟ ಅವರ ಸಂಸ್ಕಾರ ಸಂಸ್ಕೃತಿಯನ್ನು ತಿಳಿಸುತ್ತಾ, ಹಿಂದಿನ ಕಾಲದಲ್ಲಿ ಹುಲ್ಲು ಮತ್ತು ಮಣ್ಣಿನ ಗೋಡೆಯ ನಿರ್ಮಿತ ಮನೆ . ಇವತ್ತಿನ ಹುಲ್ಲಿನಲ್ಲಿ ಮಾಡಿದ ಹೊದಿಕೆಯ ವೇದಿಕೆ. ಹಿಂದಿನ ಕಾಲದ ತಿನಿಸುಗಳು ದೇಹಕ್ಕೆ ಶಕ್ತಿವರ್ಧಕ ಹಾಗೂ ತಂಪನ್ನು ಮಾಡುವಂಥದ್ದು. ಹಿರಿಯರು ಅನುಭವಿಸಿದ ನಾವು ನೋಡಿದ ಅಂದಿನ ಕಷ್ಟದ ಕಾಲವನ್ನು ಜನತೆಗೆ ತೋರಿಸುವುದೇ ನಮ್ಮ ಕರ್ತವ್ಯ.ನಮ್ಮ ಈ ಸ್ಥಳೀಯ ಸಮಿತಿಯಲ್ಲಿ ಎಲ್ಲರೂ ಒಗ್ಗಟಾಗಿಇದ್ದು, ಸ್ನೇಹ ಶೀಲರಾಗಿ ಸಮಾಜ ಸೇವೆಯಲ್ಲಿ ಸದಾ ಸಹಕಾರ ಮಾಡುವವರು. ಪ್ರತಿಯೊಂದು ಸ್ಥಳೀಯ ಸಮಿತಿಯ ಸದಸ್ಯರು ಹೆಚ್ಚು ಹೆಚ್ಚು ಜನರನ್ನು ಸೇರಿಸುವ ಪ್ರಯತ್ನದತ್ತ ನಡೆಯಬೇಕು.

    ಉದ್ಯಮಿ ದಾನಿಗಳಾದ ಮೆಗ್ಸಾನ್ ಸುನಿಲ್ ರಾಜು ಸಾಲಿಯಾನ್, ಅಂಬರನಾಥ್ ಜೈ ದೀಪ್ ಕನ್ಸ್ಟ್ರಕ್ಷನ್ ಮಾಲೀಕರಾದ ಜಗದೀಶ್ ರಾಮ ಬಂಜನ್ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತ್ತು. ಇವರ ಕಿರುಪರಿಚಯವನ್ನು ಆಶಾ ಕೆ ಮೂಲ್ಯ, ಸುಂದರಿ ಬಂಗೇರ ಯಾಚಿಸಿದರು.

 ಅಯ್ಯಾ ಪ್ಯಾಕರ್ಸ್ & ಮೂವರ್ಸ್ ಮಾಲೀಕರಾದ ಥಾಣೆಯ ಅಶೋಕ್ ರಾಜು ಮೂಲ್ಯ ಇವರ ಕಿರು ಪರಿಚಯವನ್ನು ಸುಗಂಧಿ ಎಸ್ ಮೂಲ್ಯ ಓದಿದರು.

ಆಟಿ ತಿಂಗಳ ಮಹತ್ವವನ್ನು ಉಮಾವತಿ ಸಾಲಿಯಾನ್  ತಿಳಿಸಿದರು 

   ಅಂದಿನ ವಿಶೇಷತೆ ಎಲ್ಲರನ್ನು ಮನರಂಜಿಸಿದ ಆಟಿ ಕಳೆಂಜ ಪಾತ್ರಧಾರಿಯಾಗಿ ಬೇಬಿ ಹರಿಯಪ್ಪ ಮೂಲ್ಯ ಮತ್ತು ತನ್ಮಯ ಲಕ್ಷ್ಮಣ ಮೂಲ್ಯ ಹಾಗೂ ಯಕ್ಷಗಾನ ಕಲಾವಿದರಾದ, ಸ್ತ್ರೀ ವೇಷದಾರಿಯಲ್ಲಿ ಪ್ರಖ್ಯಾತರಾಗಿ ಪ್ರಶಸ್ತಿ ಪಡೆದ ಗಣೇಶ್ ಶೆಟ್ಟಿ ಯವರು ಬರೆದು ನಿರ್ದೇಶಿಸಿದ ನಾಟಕ ರೂಪದಲ್ಲಿ ತೋರಿಸಿದ ಆಟಿದ ದಿನ ಮಹಿಳಾ ವಿಭಾಗದವರಿಂದ ಸಭಿಕರ ಮೆಚ್ಚುಗೆ ಪಡೆಯಿತ್ತು.

      ಸ್ವಾಗತ ಭಾಷಣವನ್ನು ಪ್ರಾಸ್ತಾವಿಕವಾಗಿ   ಸ್ಥಳಿಯ  ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಶಲ ಜಿ ಬಂಗೇರ ಮಾಡಿದರೆ,

 . ಪೂಜಾ ನೃತ್ಯವನ್ನು ಕುಮಾರಿ ಚಿನ್ಮಯ ಮೂಲ್ಯ ,ನೃತ್ಯವನ್ನು ಲಕ್ಷ್ ಮತ್ತೆ ನೀಶಾನ್,

ಪ್ರೇಮ ಮೂಲ್ಯ ಮತ್ತು ಶಾಂತಾ ರವರು ಪ್ರಾರ್ಥನೆ ಮತ್ತು ಸಂಗೀತವನ್ನು ಸೊಗಸಾಗಿ ಹಾಡಿ ತೋರಿಸಿದರು. ಮಹಿಳಾ ವಿಭಾಗದವರಿಂದ ಸಮೂಹ ಗೀತೆ ,ಬಂದ ಸಭಿಕರಿಗೆ ಗೌರವಾರ್ಪಣೆಯ ಹೆಸರನ್ನು ಕವಿತಾ ಮೂಲ್ಯ ಯಾಚಿಸಿದರು.

  ಅಂದು ಸಬಿಕರಿಗೆ, ಕಮಿಟಿ ಸದಸ್ಯರಿಗೆ , ಹಾಗೂ ಮಹಿಳಾ ವಿಭಾಗದ ತಿಂಡಿ ತಿನಿಸು ಮಾಡಿ ತಂದವರ ಹೆಸರಿಗೆ ಸುನಿಲ್ ಸಾಲಿಯಾನ್ ಮತ್ತು ದೇವಕಿ ಸಾಲಿಯಾನ್ ರವರು ಇಟ್ಟ ಲಕ್ಕಿ ಡಿಪ್ ವಿಜೇತರಾಗಿ , ಸುಂದರಿ ಮೂಲ್ಯ, ಉಮಾವತಿ ಸಾಲಿಯಾನ್,ದೇವಕಿ ಮೂಲ್ಯ ಕಲ್ಯಾಣ್ ಇವರಿಗೆ ಲಭಿಸಿತ್ತು.

    ಅಂದಿನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಡಿ ಐ ಮೂಲ್ಯ, ಅಮೂಲ್ಯ ತ್ರೈಮಾಸಿಕ ಪತ್ರಿಕೆಯ ಸಂಪಾದಕ ಆನಂದ ಬಿ ಮೂಲ್ಯ, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸದಾನಂದ ಕುಲಾಲ್ , ಕ್ಯಾಟರರ್ ಕೃಷ್ಣ ಬಂಗೇರ, ಮಹಿಳಾ ವಿಭಾಗದ ಕವಿತಾ ಹಾಂಡ,ನಯನ ಬಂಗೇರ ಲತಾ ಎಸ್ ಮೂಲ್ಯ CMM ಸ್ಥಳೀಯ ಸಮಿತಿಯ ಕಾರ್ಯಾದ್ಯಕ್ಷೆ ಇಂದಿರಾ ಬಂಜನ್, ಮೀರಾ ರೋಡ್ ವಿರಾರ್ ಕಾರ್ಯಾದ್ಯಕ್ಷೆ ರೇಣುಕಾ ಸಾಲಿಯಾನ್, ಉಪ ಕಾರ್ಯಾಧ್ಯಕ್ಷೆ ರಸಿಕ ಮೂಲ್ಯ .

ಉಪ ಕಾರ್ಯಾಧ್ಯಕ್ಷರು ಕುಶ ಕುಲಾಲ್ ,ದೀಪಕ್ ಮೂಲ್ಯ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರಿಯಪ್ಪ ಮೂಲ್ಯ, ಸುಧಾಕರ್ ಕುಲಾಲ್, ಯುವ ವಿಭಾಗದ ವತಿಯಿಂದ ನವಿ ಮುಂಬಯಿ ಕೋಶಾಧಿಕಾರಿ ಅಕ್ಷತ್ ಮೂಲ್ಯ , ಗುರು ಮೂಲ್ಯ, ತೇಜಸ್ ಮೂಲ್ಯ ಮುಂತಾದವರು ಉಪಸ್ತಿತರಿದ್ದರು.

  ಕಾರ್ಯಕ್ರಮದ ನಿರೂಪಣೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆಯನ್ನು ಸೊಗಸಾಗಿ ಗೀತಾ ದೀಪಕ್ ಮೂಲ್ಯ ಮಾಡಿದರು. ನಂತರ ಮನೆಯಲ್ಲಿ ಮಾಡಿ ತಯಾರಿಸಿದ ಊಟೋಪಚಾರದೊಂದಿಗೆ 

B. Dinesh Kulal

Mob.: 9821868674



Related posts

Facing Investigation, Ex-President Uribe Resigns From Senate in Colombia

admin

Bank Leumi, Azrieli Agree To Sell Credit Card Unit to Warburg Pincus

admin

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಕಲಶೋತ್ಸವ ನಿಮ್ಮಿತ್ತ, ನ. 7ರಂದು ಮುಂಬೈ ಸಮಿತಿ ಸಭೆ

Mumbai News Desk

What Is a ‘Shadow Ban,’ and Is Twitter Doing It to Republican Accounts?

admin

ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಲಲಿತಾ ಕನ್ನೆಗಂಟೆ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ

Chandrahas

House Republicans Mount a Long-Shot Bid to Impeach Rod Rosenstein

admin