32 C
Mumbai
March 7, 2026
Mumbai News Kannada
ಪ್ರಕಟಣೆ

 ಆ. 8 ರಂದು ಶ್ರೀ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗದಿಂದ ಶ್ರೀ ವರ ಮಹಾಲಕ್ಷ್ಮಿ ಪೂಜೆ





ಶ್ರೀ ರಜಕ ಸಂಘ ಮುಂಬಯಿಯ ಕೇಂದ್ರ ಸಮಿತಿ ಹಾಗೂ ಸಾಂಸ್ಕೃತಿಕ ವಿಭಾಗದ ಸಹಕಾರದಿಂದ, ಮಹಿಳಾ ವಿಭಾಗದ ಅಧ್ಯಕ್ಷೆ  ಶ್ರೀಮತಿ ಶುಭ ಡಿ ಗುಜರನ್ ರವರ ನೇತೃತ್ವದಲ್ಲಿ 5 ಪ್ರಾದೇಶಿಕ ವಲಯದ ಸಮಿತಿಗಳನ್ನೊಳಗೊಂಡು ನಡೆಯಲಿರುವ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ಅಗಸ್ಟ್ 8 ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಭಜನಾ ಸಂಕೀರ್ತನೆ ಹಾಗೂ ಸಾಮೂಹಿಕ ಗಾಯತ್ರಿ ಮಂತ್ರ ಪಠಣೆಯೊಂದಿಗೆ, ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೊನಿಯಲ್ಲಿರುವ ಪೇಜಾವರ ಮಠದ ಸಭಾಗೃಹದಲ್ಲಿ ಜರಗಲಿರುವುದು. 

ಈ ಸಂದರ್ಭದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿದ ದಂಪತಿಯರಿಗೆ ಅಭಿನಂದನಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. 

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗ ಬೇಕಾಗಿ ಆಡಳಿತ ಮಂಡಳಿಯ ಪರವಾಗಿ ಶ್ರೀ ರಜಕ ಸಂಘದ ಅಧ್ಯಕ್ಷ ಸಿ ಎ ವಿಜಯ್ ಕುಂದರ್, ಕಾರ್ಯದರ್ಶಿ ಸುಮಿತ್ರಾ ಪಲಿಮಾರ್ ರವರು ವಿನಂತಿಸಿರುವರು. 



Related posts

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿಯ ವತಿಯಿಂದ ಆ 15 ರಂದು ಹದಿನೆಂಟನೆಯ ವರ್ಷದ ಸಾಮೂಹಿಕ ಸತ್ಯನಾರಾಯಣ ಮಹಾ ಪೂಜೆ

Mumbai News Desk

ಆಗಸ್ಟ್ 10 ರಂದು ಡೊಂಬಿವಲಿಯಲ್ಲಿ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk

ಸೆ 15.ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ಶರನ್ನವರಾತ್ರಿ ಮಹೋತ್ಸವ ಆಚರಣೆ ನಿಮ್ಮಿತ್ತ ವಿಶೇಷ ಮಹಾಸಭೆ

Mumbai News Desk

ಫೆ. 08 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ನಾಲ್ಕನೇ ವರ್ಷದ ರಕ್ತದಾನ ಶಿಬಿರ.

Mumbai News Desk

ಮೇ10: ವೀರನಾರಾಯಣ ದೇವಸ್ಥಾನ ಮೇಲ್ಟಾವಣಿ ಉದ್ಘಾಟನೆ. ಯಕ್ಷಗಾನ.

Mumbai News Desk