September 6, 2026
Mumbai News Kannada
ಪ್ರಕಟಣೆ

ಮೇ10: ವೀರನಾರಾಯಣ ದೇವಸ್ಥಾನ ಮೇಲ್ಟಾವಣಿ ಉದ್ಘಾಟನೆ. ಯಕ್ಷಗಾನ.





    ಮಂಗಳೂರು :ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ  1ಕೋಟಿ. ರೂಪಾಯಿಯ ಮೇಲ್ಟಾವಣಿಯ ಉದ್ಘಾಟನಾ ಸಮಾರಂಭವು ಮೇ 10ರಂದು ಸಂಜೆ 5ಕ್ಕೆ ನಡೆಯಲಿದೆ. ಶ್ರೀಧಾಮ ಮಾಣಿಲ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಪ್ರೇಮಾ ನಂದ ಕುಲಾಲ್ ಕೋಡಿಕಲ್ ಅಧ್ಯಕ್ಷತೆ ವಹಿಸಲಿದ್ದಾರೆ.

    ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್,    ಶಾಸಕ ಡಿ. ವೇದವ್ಯಾಸ ಕಾಮತ್, ಮುಂಬಯಿನ ರೈಮಂಡ್ ಮಾಗ್ಲನ್ ಟೈಲರ್ಸ್  ಸುನಿಲ್ ಆರ್. ಸಾಲ್ಯಾನ್, ಉದ್ಯಮಿ ಹಾಗೂ ಯೋಗ ತರಬೇತುದಾರೆ ಡಾ.ಸುರೇಖಾ ರತನ್ ಕುಲಾಲ್, ಮುಂಬಯಿ ಅಯ್ಯ ಪ್ಯಾಕರ್ಸ್ ಮೂವರ್ಸ್‌ನ ಆಡಳಿತ ನಿರ್ದೇಶಕ ಅಶೋಕ್ ಮೂಲ್ಯ, ಪುತ್ತೂರು ಕುಂಬಾರರ ಗುಡಿ ಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ, ಬೆಂಗಳೂರು ಕುಲಾಲ ಸಂಘ ಅಧ್ಯಕ್ಷ ದಿವಾಕರ ಮೂಲ್ಯ, ವಿ.ಕೆ. ಫರ್ನಿಚರ್ಸ್ ಎಲೆಕ್ಟೋನಿಕ್ಸ್ ಮಾಲೀಕ ವಿಠಲ ಕುಲಾಲ್ ಪಾಲ್ಗೊಳ್ಳಲಿದ್ದಾರೆ..

ಮಧ್ಯಾಹ್ನ 3.30ರಿಂದ 5ರ ವರೆಗ ದೇವರಗುಡ್ಡೆ ಶ್ರೀ ಅಗಸ್ತೇಶ್ವರ ಕುಣಿತ ಭಜನಾ ತಂಡ, ಪೊಳಲಿಯವರಿಂದ ಕುಣಿತ ಭಜನೆ ಶ್ರೀ ಕ್ಷೇತ್ರದ ರಾಜಾಂಗಣದಲ್ಲಿ ನಡೆಯಲಿದೆ. ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ರಾತ್ರಿ 7ರಿಂದ ದೇವಳದ ರಾಜಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ  ನಡೆಳಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗ ಬೇಕುಗಿ  ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೋಕ್ತಸರ ಕೆ.ಸುಂದರ್ ಕುಲಾಲ್ ಶಕ್ತಿನಗರ, ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಾಮೋದರ ಎ., ಶ್ರೀವೀರನಾರಾಯಣ ಮಾತೃ ಮಂಡಳಿ ಅಧ್ಯಕ್ಷೆ ಪಾರ್ವತಿ ಶೇಖರ್ ಶಕ್ತಿನಗರ, ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕಿರಣ್ ಅಟ್ಟೂರು ಮತ್ತಿತರರು  ವಿನಂತಿಸಿಕೊಂಡಿದ್ದಾರೆ.

B. Dinesh Kulal

Mob.: 9821868674



Related posts

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ಮಾ.9ರಂದ 41 ನೇ ಮಹಾಸಭೆ, ಸಾಧಕರಿಗೆ ಸನ್ಮಾನ! ಮಾಜಿ ಅಧ್ಯಕ್ಷರುಗಳಿಗೆ ಗೌರವ!

Mumbai News Desk

ಮಾ. 24: ಮಹಿಳಾ ದಿನಾಚರಣೆ ಅಂಗವಾಗಿ ಸ್ಟೇಫೈನ್ (Stay Fine) ಸೂಪರ್‌ಮಾರ್ಟ್‌ನಿಂದ ‘ನಾರಿ ಶಕ್ತಿ’ ಸನ್ಮಾನ ಮತ್ತು ಹಳದಿ-ಕುಂಕುಮ ಸಮಾರಂಭ, ಮಹಿಳೆಯರಿಗೆ ಆಕರ್ಷಕ ಉಡುಗೊರೆ

Mumbai News Desk

ಸೆ. 27, ಭಾಯಂದರ್ ಪೂರ್ವ: ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆ

Mumbai News Desk

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk