32 C
Mumbai
March 7, 2026
Mumbai News Kannada
ತುಳುನಾಡು

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಮೂಲ್ಕಿ : ಆಗಸ್ಟ್ 17ರಂದು ಮೂಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆ





ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಅಧಿದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆಯ ಚಿಂತನ ಕಾರ್ಯ ಯಶಸ್ವಿಯಾಗಿ ಸಂಪನ್ನವಾಗಿದ್ದು, ಈ ಚಿಂತನೆಯಲ್ಲಿ ಪ್ರಸ್ತಾಪಗೊಂಡ ಧಾರ್ಮಿಕ ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳ ಆಧಾರವಾಗಿ ಮುನ್ನಡೆಸಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಚಿಂತನೆ ನಡೆಸುವ ಉದ್ದೇಶದಿಂದ. ಮುಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆ ಕರೆಯಲಾಗಿದೆ.

ದಿನಾಂಕ: 17/08/2025 – ಆದಿತ್ಯವಾರ
🕓 ಸಮಯ: ಸಂಜೆ 4.00 ಗಂಟೆಗೆ
📍 ಸ್ಥಳ: ಜ್ಞಾನ ಮಂದಿರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಲ್ಕಿ

ಈ ಸಮಾಲೋಚನ ಸಭೆಯಲ್ಲಿ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಸರ್ವ ಭಕ್ತವೃಂದ,
ಸರ್ವ ಸಮಾಜದ ಗೌರವಾನ್ವಿತ ಗುರಿಕಾರರು ಹಾಗೂ ಪ್ರತಿನಿಧಿಗಳು
ಗುತ್ತು, ಬರ್ಕೆ, ಭಾವ ಮನೆತನದ ಪ್ರತಿನಿಧಿಗಳು
ದೇವಸ್ಥಾನ ಹಾಗೂ ದೈವಸ್ಥಾನಗಳ ಆಡಳಿತ ಮಂಡಳಿ,ಸಮಿತಿಯ ಸದಸ್ಯರು ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ ಮುಂದಿನ ದಿನಗಳಲ್ಲಿ ಜರುಗಬೇಕಾದ ಧಾರ್ಮಿಕ ಕಾರ್ಯಕ್ರಮಗಳು, ಜೀರ್ಣೋದ್ಧಾರ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪ್ರಣಾಳಿಕೆ ರೂಪಿಸುವ ನಿಟ್ಟಿನಲ್ಲಿ ಭಕ್ತ ಸಮುದಾಯದ ಚಿಂತನೆ, ಸಲಹೆ ಹಾಗೂ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಮುಂದಡಿ ಇಡಲು ಚಿಂತಿಸಲಾಗಿದೆ.

ಆದ್ದರಿಂದ, ಮೇಲ್ಕಂಡ ಎಲ್ಲಾ ಭಕ್ತಮಿತ್ರರು ಹಾಗೂ ಗೌರವಾನ್ವಿತರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ಸೇವೆಯಲ್ಲಿ ಕೈಜೋಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಕ್ಷೇತ್ರ ಬಪ್ಪನಾಡು ಇದರ ಆಡಳಿತ ಮಂಡಳಿ, ಅರ್ಚಕ ವೃಂದ, ಭಕ್ತ ವೃಂದದ ವಿನಂತಿ.



Related posts

ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ  ಪ್ರಶಾಂತ್ ಶೆಟ್ಟಿ  ಮಂಡೇಡಿ ಆಯ್ಕೆ 

Mumbai News Desk

ಮುದ್ರಾಡಿ ಪ್ರೌಢಶಾಲೆ: ಉತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗೌರವ , ನಿವೃತ್ತ ಮುಖ್ಯ ಶಿಕ್ಷಕಿಗೆ ಸಮ್ಮಾನ

Mumbai News Desk

ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ “ಮೂಲ್ಕಿಯ ಕೀರ್ತಿಶೇಷ ಸಾಧಕರು” ಕೃತಿ ಬಿಡುಗಡೆ ಸಮಾರಂಭ

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಇಂದಿನಿಂದ ಮಾ. 5ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Mumbai News Desk

ಮೂಲ್ಕಿ ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ಕುಬೇವೂರು ಶ್ರೀ ಜಾರಂದಾಯ ದೇವಸ್ಥಾನದ ಅರ್ಚಕ ಶೇಖರ್ ಪೂಜಾರಿ ಅವರಿಗೆ ಗೌರವ

Mumbai News Desk

ಮೂಲ್ಕಿ: “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ

Mumbai News Desk