
ಕಳೆದ 12 ದಶಕಗಳಿಗೂ ಅಧಿಕ ಸಮಯದಿಂದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದು, ಮುಂಬೈ ಕನ್ನಡಿಗರು ಮಾತ್ರವಲ್ಲದೇ ಕನ್ನಡೇತರರ ಮೆಚ್ಚುಗೆಗೆ ಪಾತ್ರವಾಗಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದು, ಇದೇ ಆಗಸ್ಟ್ 9ರಂದು 124ನೇ ವರ್ಷಕ್ಕೆ ಪಾದರ್ಪಣೆ ಮಾಡಿರುತ್ತದೆ . ಈ ಸಂದರ್ಭದಲ್ಲಿ ಅದೇ ದಿನ ಸಂಜೆ ಗಂಟೆ 6ಕ್ಕೆ ನ್ಯೂ ಪನ್ವೆಲ್ ಖಾಂದಾ ಕಾಲನಿಯಲ್ಲಿ ರುವ ಮಂಡಳಿಯ ನವಿ ಮುಂಬೈ ಶಾಖೆಯಲ್ಲಿ ಸಂಸ್ಥಾಪನಾ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ನವಿ ಮುಂಬೈ ಘಂನ್ಸೋಲಿ ಶ್ರೀ ಮುಕಾಂಬಿಕಕಾ ದೇವಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಟ್ಟಿ ಎ ಕುಂದರ್ ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.

ಆರಂಭದಲ್ಲಿ ಪ್ರಾರ್ಥನೆಗೈದ ಬಳಿಕ ನೆರೆದ ಸದಸ್ಯರು ಜೊತೆಯಾಗಿ ಈ ಸಂದರ್ಭಕ್ಕಾಗಿ ವಿಶೇಷವಾಗಿ ತಯಾರಿಸಲಾದ ಕೇಕನ್ನು ಕತ್ತರಿಸುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾದ ಕುಟ್ಟಿ ಕುಂದರ್ ಅವರು 123 ವರ್ಷಗಳ ಹಿನ್ನೆಲೆಯನ್ನು ಹೊಂದಿರುವ ನಮ್ಮೆಲ್ಲರ ಹೆಮ್ಮೆಯ ಈ ಸಂಸ್ಥೆಯು ಇನ್ನಷ್ಟು ಪ್ರಗತಿಯನ್ನು ಸಾಗುತ್ತಾ ಮುಂದುವರಿಯಲಿ ಎಂದು ನುಡಿದು, ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಅವರ ಕುಟುಂಬಸ್ತ ರಿಗೆ ಅಮ್ಮ ಮೂಕಾಂಬಿಕೆ ಸದಾ ಸುಖ, ಶಾಂತಿ,ಸಮೃದ್ಧಿಯನ್ನು ನೀಡಲಿ ಎಂದು ಹರಸಿದರು.

ಶಾಖೆಯ ಉಪಾಧ್ಯಕ್ಷರಾದ ನಾರಾಯಣ ಕೋಟ್ಯಾನ್ ಮಾತನಾಡಿ ಮುಂಬೈಯಲ್ಲಿ ಮೊಗವೀರರು ಸಂಘಟನೆಯಲ್ಲಿ ಇತರ ಎಲ್ಲ ಜಾತಿಯವರಿಗಿಂತಲೂ ಮುಂದಿರುವರೆಂದು, ಮುಂಬೈಯಲ್ಲಿ ಮಂಡಳಿಗಿಂತ ಮೊದಲು ಆರಂಭಗೊಂಡ ಗುಡ್ಡೆ ಕೊಪ್ಲ ಮೊಗವೀರ ಗ್ರಾಮ ಸಭೆ ಮತ್ತು ಪಡುಬಿದ್ರಿ ಮೊಗವೀರ ಗ್ರಾಮ ಸಭೆಯ ಉದಾರಣೆಯನ್ನು ನೀಡಿದರು. ಅವರು ಮುಂದುವರೆಯುತ್ತಾ ಎಲ್ಲ ಸದಸ್ಯರು ಶಾಖೆಯ ವತಿಯಿಂದ ಸಮಯ ಸಮಯಕ್ಕೆ ಜರಗಿಸಲಾಗುತ್ತಿರುವ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸಬೇಕೆಂದು ಕೇಳಿಕೊಂಡರು
ಬಳಿಕ ಮಾತನಾಡಿದ ಶಾಖೆಯ ಸಲಹೆಗಾರರಾದ ಸೋಮನಾಥ್ ಎಸ್ ಕರ್ಕೇರರವರು ಮೊಗವೀರ ವ್ಯವಸ್ಥಾಪಕ ಮಂಡಳಿಯು ನಡೆದು ಬಂದ ದಾರಿಯತ್ತ ಬೆಳಕು ಚೆಲ್ಲುತ್ತ, ನಮ್ಮ ಹಿರಿಯರು ಮಂಡಳಿಯನ್ನು ಆರಂಭಿಸಲು ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗಲು ಪಟ್ಟ ಪರಿಶ್ರಮದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಖೆಯ ಮಹಿಳಾ ವಿಭಾಗದ ಅಧ್ಯಕ್ಷೆ ಜಾನಕಿ ಬಂಗೇರರು ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಆರಂಭಿಸಲಾದ ಮೊಗವೀರ ಗಾಡ್ಸ್ ನ ಮಹಿಳಾ ವಿಭಾಗಕ್ಕೆ ಆಯ್ಕೆಗೊಂಡ ಶಾಖೆಯ ಸದಸ್ಯೆ ಗೀತ ಗರುಡ್ ಇವರನ್ನು ಹಾರ್ಥಿಕವಾಗಿ ಅಭಿನಂದಿಸಲಾಯಿತು. ಮೊದಲಿಗೆ ಶಾಖೆಯ ಕಾರ್ಯದರ್ಶಿ ಶೇಖರ್ ಮೈಂದನ್ ಎಲ್ಲರನ್ನು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆಗೈದರು ಲಘು ಉಪಹಾರ ಕಾರ್ಯಕ್ರಮ ಕೊನೆಗೊಂಡಿತು.
ವರದಿ : ಸೋಮನಾಥ್ ಎಸ್ ಕರ್ಕೇರ
ಫೋನ್ : 9818321186




