July 22, 2026
Mumbai News Kannada
ಮುಂಬಯಿ

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ – ಪುಸ್ತಕ ಸಾಮಗ್ರಿ ವಿತರಣೆ







ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ SSC ಮತ್ತು HSC, ಯಲ್ಲಿ 90% ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಗೌರವ ಕಾರ್ಯಕ್ರಮ ದಿನಾಂಕ ಅಗಸ್ಟ್ 15ರಂದು ಮಂದಿರದ ಸಭಾಗ್ರಹದಲ್ಲಿ ಜರುಗಿತು.

ಮಂದಿರದ ಅಧ್ಯಕ್ಷರಾದ ರಾಜೇಶ್ ಜೆ,ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ
ಮುಖ್ಯ ಅತಿಥಿಗಳಾಗಿ ರವೀಂದ್ರ ವೈ ಶೆಟ್ಟಿ (ಸಂಚಾಲಕರು ಬಂಟರ ಸಂಘ ಪ್ರಾದೇಶಿಕ ಸಮಿತಿ ಬಿವಂಡಿ ಟು ಬದ್ಲಾಪುರ್),
ದಯಾನಂದ ವಿ ಶೆಟ್ಟಿ (ಹೋಟೆಲ್ ಉದ್ಯಮಿ), ಸದಾಶಿವ ಡಿ ಶೆಟ್ಟಿ (ಉದ್ಯಮಿ), ಸುಬೋಧ್ ಭಂಡಾರಿ (ಕಾರ್ಯಾಧ್ಯಕ್ಷರು ಬಂಟರ ಸಂಘ ಪ್ರಾದೇಶಿಕ ಸಮಿತಿ ಬಿವಂಡಿ ಟು ಬದ್ಲಾಪುರ್),
ಹಾಗೂ ದೇವಸ್ಥಾನದ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಸಂತೋಷ್ ಎಚ್ ಶೆಟ್ಟಿ ಉಪಸ್ಥಿತರಿದ್ದರು.

ಆಶಾ ನಾಯಕ್ ರವರ ಪ್ರಾರ್ಥನೆಯೊಂದಿಗೆ ವೇದಿಕೆಯ ಗಣ್ಯರು ಮತ್ತು ಪದಾಧಿಕಾರಿಗಳಿಂದ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಇದ್ದ ಗಣ್ಯರು ಸಂದರ್ಭೋಚಿತವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ರವೀಂದ್ರ ವೈ ಶೆಟ್ಟಿ ಮಾತನಾಡುತ್ತ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮತ್ತು ಎಲ್ಲ ಪದಾಧಿಕಾರಿಗಳಿಂದ ಉತ್ತಮ ಕೆಲಸ ನಡೆಯುತ್ತಿದೆ, ಮುಂದೆಯೂ ಸಹ ಇವರಿಂದ ಇನ್ನೂ ಉತ್ತಮ ಕೆಲಸ ನಡೆಯಲಿ ಎಂದರು.
ಅತಿಥಿ ಸುಬೋಧ್ ಭಂಡಾರಿ ಮಾತನಾಡುತ್ತಾ
ನಾನು ಸಹ ಇಲ್ಲಿ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ನಾಗಿ ಕೆಲಸ ಮಾಡಿದ್ದೇನೆ, ಈಗ ಇವರು ಅದನ್ನು ಉತ್ತಮ ರೀತಿಯಲ್ಲಿ ಮುಂದುವರಿಸುತ್ತಿದ್ದಾರೆ ಎಂದರು.
ಅತಿಥಿ ದಿಲೀಪ್ ಗಾಯಕ್ವಾಡ್ ಮಾತನಾಡುತ್ತಾ
ಇಲ್ಲಿ ಯಾವುದೇ ಜಾತಿ ಧರ್ಮ ಭಾಷೆ ಇಲ್ಲದೆ ಕೆಲಸ ಮತ್ತು ಮರಾಠಿ ಭಾಷೆ, ಸಂಸ್ಕೃತಿಗೆ ಅನುಗುಣವಾಗಿ ಕೆಲಸ ನಡೆಯುತ್ತಿದೆ ಎಂದರು.

ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮಾತನಾಡುತ್ತಾ
ಸುಮಾರು 137 ಮಕ್ಕಳಿಗೆ ಪುಸ್ತಕ ವಿತರಣೆ, ಮತ್ತು 9 ಮಕ್ಕಳಿಗೆ HSC ಮತ್ತು SSC ಯಲ್ಲಿ 90 ಶೇಕಡಾ ಕ್ಕಿಂತ ಅಧಿಕ ಅಂಕ ಪಡೆದವರಿಗೆ ಗೌರವ ಧನ, ಸ್ಮರಣಿಕೆ ನೀಡಿ ಗೌರವಿಸುತ್ತಿದ್ದೇವೆ. ಟ್ರಸ್ಟಿ ಚಂದ್ರಹಾಸ ಶೆಟ್ಟಿ ಅವರಿಂದ ನಾವು ಮೊದಲಿಂದಲೂ ದೇವ‌ಸ್ಥಾನದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುತ್ತಿದ್ದೇವೆ. ಈ ಸಲ ನಮ್ಮ ಮಂದಿರದ ಹಿರಿಯ ಸದಸ್ಯರಾದ ಪದ್ಮನಾಭ ಶೆಟ್ಟಿ ಅವರಿಂದ, ಅವರ ಧರ್ಮಪತ್ನಿ ಯಾದ ದಿವಂಗತ ಉಮಾ ಪದ್ಮನಾಭ ಶೆಟ್ಟಿ ಅವರ ಸ್ಮರಣಾರ್ಥ SSC ಯಲ್ಲಿ ಇಬ್ಬರು ಮತ್ತು HSC ಯಲ್ಲಿ ಒಬ್ಬರಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನ ನೀಡಿಕೆ ನಡೆದಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಅಧ್ಯಕ್ಷರಾದ ರಾಜೇಶ್ ಜೆ ಶೆಟ್ಟಿ,
ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷರಾದ ಸಂತೋಷ್ ಎಚ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ರವೀಂದ್ರ ವೈ ಶೆಟ್ಟಿ, ದಯಾನಂದ ವಿ ಶೆಟ್ಟಿ, ಸದಾಶಿವ ಡಿ ಶೆಟ್ಟಿ, ಸುಬೋಧ್ ಭಂಡಾರಿ, ಉಲ್ಲಾಸ್ ನಗರ ಶಿವಸೇನಾ ಉಪ ಶಹರ್ ಪ್ರಮುಖ ದಿಲಿಪ್ ಗಾಯಕ್ವಾಡ್, ನಗರ ಸೇವಿಕ ಜ್ಯೋತಿ ದಿಲಿಪ್ ಗಾಯಕ್ವಾಡ್, ಟ್ರಸ್ಟಿ ಚಂದ್ರಹಾಸ ಶೆಟ್ಟಿ, ಕನ್ವೀನರ್ ಕರುಣಾಕರ ಶೆಟ್ಟಿ, ಉಪಾಧ್ಯಕ್ಷರಾದ ಯುವರಾಜ್ ಪೂಜಾರಿ, ಗೌರವ ಕಾರ್ಯದರ್ಶಿ ಜಗದೀಶ ಶೆಟ್ಟಿ ಬೇಳಂಜೆ, ಜೊತೆ ಕೋಶಾಧಿಕಾರಿ ಸದಾನಂದ ಸಾಲ್ಯಾನ್, ವಸಂತ್ ಶೆಟ್ಟಿ ಜೊತೆ ಕಾರ್ಯದರ್ಶಿ ಪ್ರೇಮ್ ಕುಮಾರ್ ರೈ, ಮಹಿಳಾ ವಿಭಾಗದ ಕಾರ್ಯದಕ್ಷೆ ಜ್ಯೋತಿ ಸುದಾನಂದ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಬಂಗೇರಾ ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಜಗದೀಶ ಶೆಟ್ಟಿ ಬೇಳಂಜೆ ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.



Related posts

9 ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಶಹಡ್ ಬಿರ್ಲಾಗೇಟ್ 63 ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಕರ್ನಾಟಕ ಸಂಘ ಡೊಂಬಿವಲಿಯ ಮಂಜುನಾಥ ಮಹಾವಿದ್ಯಾಲಯದಲ್ಲಿ ಜ್ಞಾನದ ಹೊಸ ಪರ್ವ ಆರಂಭ: ಕಲಾ ಮತ್ತು ವಿಜ್ಞಾನ ಪದವಿಪೂರ್ವ ವಿಭಾಗಗಳಿಗೆ ವಿಧ್ಯುಕ್ತ ಚಾಲನೆ

Mumbai News Desk

ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜ್ ಐರೋಲಿ: ವಿದ್ಯಾರ್ಥಿಗಳಿಗೆ  ಲೀಡರ್ಶಿಪ್ ಬಗ್ಗೆ ಉಪನ್ಯಾಸ. 

Mumbai News Desk

ಗೋಕುಲದಲ್ಲಿ ಅತ್ಯಂತ ಸಂಭ್ರಮದಿಂದ ವೈಭವೀಕರಿಸಿದ  “ಪುರುಷರ ಮಹಾ ದಿನ” – ಪ್ರತಿಭಾ ಪ್ರದರ್ಶನ”

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk