July 23, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕಿನ ಬೈಕುಲ್ಲಾ ಶಾಖೆಯಲ್ಲಿ 49ನೇ ಸಂಸ್ಥಾಪನಾ ದಿನಾಚರಣೆ: ಯಶಸ್ವಿ ಆಚರಣೆ







ಮುಂಬೈ, : ಮುಂಬೈನ ಬೈಕುಲ್ಲಾ ಶಾಖೆಯಲ್ಲಿ ಭಾರತ್ ಬ್ಯಾಂಕ್ ತನ್ನ 49ನೇ ಸಂಸ್ಥಾಪನಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರು, ಹಿತೈಷಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

​ಶಾಖೆಯ ಮುಖ್ಯ ಪ್ರಬಂಧಕರಾದ ಅಕ್ಷಯ್ ಆರ್. ಅಮೀನ್ ಅವರು ಎಲ್ಲರನ್ನೂ ಸ್ವಾಗತಿಸಿ, ಬ್ಯಾಂಕಿನ ವ್ಯವಹಾರಿಕ ಬೆಳವಣಿಗೆಗಳು ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

​ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಾಜಿ ಮುಖ್ಯ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ಆರ್. ಅಮೀನ್ ಭಾಗವಹಿಸಿದ್ದರು. ಹಾಗೆಯೇ, ಗ್ರಾಹಕರಾದ ಮಹೇಂದ್ರ ಶಿಂಧೆ, ಸಂತೋಷ್ ಸುವರ್ಣ, ಮತ್ತು ಗಣೇಶ್ ಗುಪ್ತ ಸೇರಿದಂತೆ ಅನೇಕ ಗ್ರಾಹಕರು ಆಗಮಿಸಿ ಶುಭ ಹಾರೈಸಿದರು.

​ಬ್ಯಾಂಕಿನ ಉಪಪ್ರಬಂಧಕಿ ತಿಲಕಾ ಆರ್. ಕುಂದರ್, ಅಧಿಕಾರಿ ಚೇತನ್ ಡಿ. ಕೆಲ್ಜಿ ಮತ್ತು ಸಿಬ್ಬಂದಿಗಳಾದ ತನ್ವಿ ಯು. ಪೂಜಾರಿ, ಚಿನ್ಮಯ್ ವಿ. ಪೂಜಾರಿ, ಮತ್ತು ಕಾರ್ತಿಕ್ ಎಲ್. ಪೂಜಾರಿ ಕೂಡ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

​ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಈ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.



Related posts

ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಭಕ್ತಿ-ಸಂಭ್ರಮದ ಪರಾಕಾಷ್ಠೆ

Mumbai News Desk

ಬೋರಿವಲಿ ಪೂರ್ವ ನ್ಯಾನ್ಸಿ ಕಾಂಪ್ಲೆಕ್ಸ್: ಶ್ರೀ ಜಗದೀಶ್ವರಿ ಮಂದಿರದಲ್ಲಿ ದೃಢ ಕಲಶಾಭಿಷೇಕ ಸಂಪನ್ನ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಹರೀಶ್ ಜಿ ಅಮೀನ್ ಆಯ್ಕೆ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk

ಸಾಲಿಯಾನ್ ಮೂಲಸ್ಥಾನ ಸಭಾ (ಎರ್ಮಾಳು ಬಡಾ) ಮುಂಬೈ ಶಾಖೆಯ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಬಾಲಾಜಿ ಕೋ-ಆಪರೇಟಿವ್ ಸೊಸೈಟಿಯ 36ನೇ ವಾರ್ಷಿಕ ಮಹಾಸಭೆ

Mumbai News Desk