
ಕಲೆ ಕಲಾವಿದರಿಗೆ ಪ್ರೋತ್ಸಾ ನೀಡುವುದು ಅಗತ್ಯ ನಗರಸೇವಕ ಅರವಿಂದ್ ಶೆಟ್ಟಿ,
ಚಿತ್ರ ವರದಿ : ದಿನೇಶ್ ಕುಲಾಲ್,
ಭಾಯಂದರ್, ಆ.11- ಭಾಯಂದರ್ ಪೂರ್ವ ಧಾರ್ಮಿಕ ಸಂಸ್ಥೆ ಶ್ರೀ ಹನುಮಾನ್ ಭಜನಾ ಮಂಡಳಿ ಇದರ ಪ್ರಾಯೋಜಕತ್ವದಲ್ಲಿ, ಸಂಘಟಕ, ಕಲಾ ಪ್ರೋತ್ಸಾಹಕ ಸುಧಾಕರ್ ಎನ್ ಶೆಟ್ಟಿ ಬಿಯಾಳಿ ಮಂದಾರ್ತಿಯವರ ಮುಂದಾಳತ್ವದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.) ನಡೂರು, ಮಂದಾರ್ತಿ ಇವರಿಂದ ಆ.9 ರಂದು ಮುನ್ಸಿಪಲ್ ಹಾಲ್, ಭಾರತರತ್ನ ತೆಂಡೂಲ್ಕರ್ ಮೈದಾನದ ಹತ್ತಿರ, ಗುರುದ್ವಾರದ ಬಳಿ, ನವಘರ್ ರೋಡ್, ಭಾಯಂದರ್ ಪೂರ್ವ ಇಲ್ಲಿ ದಿ.ಕಾಳಿಂಗ ನಾವುಡ ವಿರಚಿತ ‘ನಾಗಶ್ರೀ’ ಎಂಬ ಪೌರಾಣಿಕ ಕಥಾಭಾಗವನ್ನು ಯಕ್ಷಗಾನ ರೂಪದಲ್ಲಿ ಆಡಿ ತೋರಿಸಿದರು.
ಯಕ್ಷಗಾನದ ಮಧ್ಯಂತರದಲ್ಲಿ ತಂಡದ ಶ್ರೀ ವೇಷಧಾರಿ ಯಕ್ಷಗಾನ ಕಲಾವಿದರಾದ ನಾಗರಾಜ್ ಪೂಜಾರಿ ದೇವಲಕುಂದ ಇವರನ್ನು ಸನ್ಮಾನಿಸಲಾಯಿತು,

ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹನುಮಾನ ಭಜನಾ ಮಂಡಳಿಯ ಗೌರವ ಅಧ್ಯಕ್ಷ ಮಾಜಿ ನಗರಸೇವಕ ಉದ್ಯಮಿ ಅರವಿಂದ ಎ ಶೆಟ್ಟಿ ಮಾತನಾಡುತ್ತಾ ಬಹಳ ವರ್ಷಗಳ ಹಿಂದೆ ಈ ಸಂಸ್ಥೆಯೊಂದಿಗೆ ನಾನು ಸೇರಿಕೊಂಡು ಧಾರ್ಮಿಕ ಸೇವೆ ಮಾಡಲು ಸಹಕಾರವಾಯಿತು ,ಇಲ್ಲಿಯ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಧಾರ್ಮಿಕ ಸಾಮಾಜಿಕ ಸೇವೆಗಳನ್ನು ಮಾಡುತ್ತ ಬಂದವರು, ಧಾರ್ಮಿಕ ಸೇವೆ ಯೊಂದಿಗೆ
ಸಾಮಾಜಿಕ ಸೇವೆಯನ್ನು ಕೂಡ ಭಜನಾ ಮಂಡಳಿ ಮಾಡುತ್ತಾ ಬಂದಿದೆ, ಯಕ್ಷಗಾನ ಕಲಾವಿದರಿಗೆ ಸಹಕಾರ ನೀಡಿದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ, ಕಲಾವಿದರು ಸಹ ನೀಡಿದಾಗ ಅವರು ಕಲಾ ಪ್ರಕಾರಗಳು ಮತ್ತಷ್ಟು ಸದೃಢ ಯಗಳು ಸಾಧ್ಯ ಎಂದು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ಮಂಡಳಿಯ ಅಧ್ಯಕ್ಷರಾಗಿರುವ ಜಯರಾಮ್ ಶೆಟ್ಟಿ ಅವರು ಮಾತನಾಡಿ ನಮ್ಮ ಸಂಸ್ಥೆಯ ಸಹಕಾರದಿಂದ ಸುಧಾಕರ್ ಶೆಟ್ಟಿ ಅವರು ಈ ಯಕ್ಷಗಾನವನ್ನು ಆಯೋಜಿಸಿ ಕಲೆ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸೇವೆಯನ್ನು ಮಾಡಿದ್ದಾರೆ, ಸುಮಾರು 30 ವರ್ಷಗಳಿಂದ ರಾತ್ರಿಯಿಂದ ಮುಂಜಾನೆವರೆಗೆ ಯಕ್ಷಗಾನವನ್ನು ನಡೆಸುತ್ತಾ ಬಂದಿದ್ದೇವೆ , ಧಾರ್ಮಿಕ ಸೇವೆಯೊಂದಿಗೆ ಕಲೆಯ ಆರಾಧನೆ ಕೂಡ ಮಾಡುತ್ತಾ ಬಂದಿದ್ದೇವೆ ಎಂದು ನೋಡಿದರು,
ಬಂ ಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯ ಅಧ್ಯಕ್ಷ ಗುತ್ತಿನರು ರವೀಂದ್ರ ಶೆಟ್ಟಿಯವರು ಮಾತನಾಡುತ್ತಾ ಮೀರಾ ಬೈಂದರ್ ಪ್ರದೇಶದ ಗೆಲ್ಲ ಜನ ಕಲೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದವರು ಪ್ರತಿ ರವಿವಾರ ಈ ಪರಿಸರದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ, ಜನರಿಗೆ ಒತ್ತಡಗಳಿದ್ದರೂ ಕೂಡ ಕಲೆಗೆ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ, ಕಳೆದ ವರ್ಷ ಈ ಕಾರ್ಯಕ್ರಮದಲ್ಲಿ ಬಡ ಕುಟುಂಬದ ಮದುವೆಗೆ ಸಹಕಾರ ನೀಡುತ್ತಿನೆ ಎನ್ನುವ ಮಾತನ್ನು ನೀಡಿ ಹೇಳಿದ್ದೇನು, ಅದನ್ನು ನವ ತರುಣ ಮಿತ್ರ ಮಂಡಳಿಯ ಮೂಲಕ ನಾವು ನಡೆಸಿದ್ದೇವೆ ಎರಡು ಕುಟುಂಬದ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದಕ್ಕೆ ನಾವು ಸಹಕಾರ ನೀಡಿದ್ದೇವೆ ಮುಂದೆಯೂ ಕೂಡ ತೊಂದರೆಯಲ್ಲಿದ್ದ ಕುಟುಂಬಗಳಿಗೆ ಮದುವೆಯ ಕಾರ್ಯಗಳಿಗೆ ಸಹಕಾರ ನೀಡುವ ಕೆಲಸವನ್ನು ಮಾಡುತ್ತೇವೆ ಎಂದು ನುಡಿದರು,
ಆಶೀರ್ವಚನದ ಮಾತುಗಳನ್ನಡಿದ ವೇದಮೂರ್ತಿ ರಾಧಾಕೃಷ್ಣ ಭಟ್ ದೇವರ ರೂಪಗಳನ್ನು ಯಕ್ಷಗಾನದ ಮೂಲಕ ನಾವು ನೋಡುತ್ತಾ ಬಂದಿದ್ದೇವೆ ಅರಿಂದ ನೀತಿ ಪಾಠಗಳು ನಮಗೆ ಲಭಿಸುತ್ತದೆ, ಯಕ್ಷಗಾನ ನೋಡಿದವರಿಗೂ ಮಾಡಿಸಿದವರಿಗು ದೇವರ ಅನುಗ್ರಹಿಸಲಿ ಎಂದರು,
ಮಣಿಕಂಠ ಸೇವಾ ಸಂಘದ ಗುರುಸ್ವಾಮಿ ಸಂತೋಷ್ ಗುರುಸ್ವಾಮಿ- ಮೂಡು ಮಾರ್ನಾಡ್, ಮಾತುಗಳನ್ನಾಡುತ್ತಾ ಯಕ್ಷಗಾನದಲ್ಲಿ ಜನಪ್ರಿಯತೆಯನ್ನು ಗಳಿಸಿದ ನಾಗಶ್ರೀ ಯಕ್ಷಗಾನ ಇದರಿಂದ ಬಹಳಷ್ಟು ಸಂದೇಶಗಳು ಸಮಾಜಕ್ಕೆ ತಲುಪಿದೆ, ನಮ್ಮ ಬದುಕಿನಲ್ಲಿ ಸಾಮಾಜಿಕ ಧಾರ್ಮಿಕ ಸೇವೆಗಳನ್ನು ಮಾಡುತ್ತಾ ಬದುಕನ್ನು ಪಾವನ ಪಡಿಸಬೇಕು ಎಂದು ನುಡಿದರು.
ಮಾನವ ಸೇವಾ ಸಂಘದ ಅಧ್ಯಕ್ಷರಾದ ಡಾ ಹರೀಶ್ ಶೆಟ್ಟಿ ಅವರು ಮಾತನಾಡಿ ಈ ನಗರಕ್ಕೆ ಬಂದ ಊರಿನ ಕಲಾವಿದರು ಬರಿ ಕೈಯಲ್ಲಿ ಹೋಗೋದು ಕಡಿಮೆ ಅವರಿಗೆ ನಮ್ಮವರು ಬೇರೆ ಬೇರೆ ರೀತಿಯ ಸಹಕಾರವನ್ನು ನೀಡಿ ಪ್ರೋತ್ಸಾಹಿಸುತ್ತಾರೆ ಈ ತಂಡದ ಕಲಾವಿದರಿಗೂ ನಮ್ಮ ಸಹಕಾರ ನೀಡುವುದು ಅಗತ್ಯ ಎಂದು ನುಡಿದರು,
ಉದ್ಯಮಿ, ಸಂಘಟಕ, ಭಾರತೀಯ ಜನತಾ ಪಕ್ಷದ ನಾಯಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಗುತ್ತು ಮಾತನಾಡುತ್ತಾ ಈ ಪರಿಸರದಲ್ಲಿ ಬಹಳಷ್ಟು ಜಾತಿಯ ಸಂಘಟನೆಗಳಿದೆ ಆದರೆಧಾರ್ಮಿಕ ಸೇವೆಯನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವ ಹನುಮಾನ್ ಭಜನ ಮಂಡಳಿಯವರು ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿರಂತರವಾಗಿ ಮುಂಬೈಯ ತಂಡಕ್ಕೆ ಸಹಕಾರವನ್ನುನೀಡಿ ದೆ,ಆದರೆ ಈ ಬಾರಿ ಊರಿನ ಯಕ್ಷಗಾನ ತಂಡಕ್ಕೆ ಅವಕಾಶವನ್ನು ನೀಡಿ ಉತ್ತಮ ಸೇವೆ ಸೇವಾ ಕಾರ್ಯವನ್ನು ಮಾಡಿದ್ದಾರೆ ಎಂದು ನುಡಿದರು,
ವೇದಿಕೆಯಲ್ಲಿ ಬಂಟರ ಸಂಘದ ಜೊತೆ ಕಾರ್ಯದರ್ಶಿ, ಗಿರೀಶ್ ಶೆಟ್ಟಿ ತೆಳ್ಳಾರ್
ನವ ತರುಣ ಮಿತ್ರ ಮಂಡಳಿಯ ಅಧ್ಯಕ್ಷ ಯೋಗೇಶ್ ಗಾಣಿಗ,ಸಂತೋಷ್ ಶೆಟ್ಟಿ ( ಎಲ್ಐಸಿ), ಸೀತಾರಾಮ ಶೆಟ್ಟಿ ಅಮಾವಾಸ್ಯೆ ಬೈಲು, ಕಾರ್ಯದರ್ಶಿ ಶ್ರೀ ನಿತ್ಯಾನಂದ ಸೇವಾ ಸಂಸ್ಥಾ – ಮೀರಾ – ಭಾಯಂದರ್ , ಹನುಮಾನ್ ಭಜರ ಮಂಡಳಿಯ ಗೌರವ ಕಾರ್ಯದರ್ಶಿ ಅಶೋಕ್ ಕೋಟ್ಯಾನ್, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಕಲತ್ತೂರು
ಅನಿಲ್ ಕುಕ್ಯಾನ್, ಮಾಧವ ಆರ್ ಶೆಟ್ಟಿ, ,ಗುನಪಾಲ್ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷ ಶೆಟ್ಟಿ, ಲಕ್ಷ್ಮಣ್
ಸುವರ್ಣ. ಮತ್ತಿತರ ಉಪಸ್ಥಿತಿಯಲ್ಲಿ ,ಇದರು,

ಈ ಸಂದರ್ಭದಲ್ಲಿ ಯಕ್ಷಗಾನದ ಸಂಘಟಕ ಸುಧಾಕರ್ ಶೆಟ್ಟಿ ಬಿಯಾಳಿ ಮಂದಾರ್ತಿ ಯವರನ್ನು ವೇದಿಕೆ ಗಣ್ಯರು ಸನ್ಮಾನಿಸಿದರು
ಕಾರ್ಯಕ್ರಮವನ್ನು ಸಂಘಟಕ ಬಾಬಾ ಪ್ರಸಾದ್ ಅರಸ ನಿರೂಪಿಸಿ ವಂದಿಸಿದರು. ಅತಿಥಿ ಗಣ್ಯರಿಗೆ ಯಕ್ಷಗಾನದ ಸಂಘಟಕ ಸುಧಾಕರ್ ಶೆಟ್ಟಿ ಬಿಯಾಳಿ, ಮಂದಾರ್ತಿಯವರ ಗೌರವಿಸಿದರು,
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಯಕ್ಷಗಾನದ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯನ್ನು ನೀಡಿದ ಅನಿಲ್ ಭಟ್ ಭಯಂದರ್ ಅವರನ್ನು ಗೌರವಿಸಲಾಯಿತು
—–
ಕಲಾವಿದರಿಗೆ ಬದುಕು ಕಟ್ಟಲು ಸಹಕರಿಸುವ ಮಾಡುವುದ ಅಗತ್ಯ :ಗಿರೀಶ್ ಶೆಟ್ಟಿ ತೆಳ್ಳಾರ್,
ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡುತ್ತಾ
ವೀರ ಭಂದರ್ ಪರಿಸರದಲ್ಲಿ ಬಹಳಷ್ಟು ನಾಟಕ ಯಕ್ಷಗಾನ ತಂಡ ಆಗಮಿಸಿ ಕಲಾ ಅಭಿಮಾನಿಗಳನ್ನು ಮನರಂಜಿಸುತ್ತದೆ ,ಆದರೆ ಅವರಿಗೆ ಬದುಕಿನಲ್ಲಿ ಕಷ್ಟದಲ್ಲಿರುವವರಿದ್ದಾರೆ ಅವರಿಗೆ ಆರ್ಥಿಕ ನೆರವು ನೀಡುವ ಕೆಲಸ ಅಗತ್ಯವಿದೆ. ವೇದಿಕೆಯಲ್ಲಿ ಅತಿಥಿಗಳಾಗಿ ಕುಳಿತು ಕೊಳ್ಳುವುದು ಮುಖ್ಯವಲ್ಲ, ಕಲಾವಿದನ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುವ ಮೂಲಕ ಕಲಾ ಪೋಷಕರು ಸಹಕಾರ ನೀಡಬೇಕು ಅಂಥವರಿಗೆ ದೇವರು ಕೂಡ ಅನುಗ್ರಹಿಸುತ್ತಾನೆ ಎಂದು ನುಡಿದರು,
——-
ಸನ್ಮಾನಿತರ ನುಡಿ
ತಂಡದ ಶ್ರೀ ವೇಷಧಾರಿ ನಾಗರಾಜ್ ಪೂಜಾರಿ ದೇವಲಕುಂದ ಸನ್ಮಾನವನ್ನು ಸ್ವೀಕರಿಸುತ್ತ ಬಹಳ ಕಷ್ಟದ ಸಂದರ್ಭ ದಲ್ಲಿ ನನಗೆ ಯಕ್ಷಗಾನದ ಭಾಗವತರು ಕಲಾವಿದರು ಪ್ರೋತ್ಸಾಹವನ್ನು ನೀಡಿದವರು ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರು ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ, ಕಷ್ಟದ ದಿನಗಳನ್ನು ಅನುಭವಿಸುತ್ತಿರುವ ನನಗೆ ಆರ್ಥಿಕ ನೆರವಿನ ಅಗತ್ಯವಿದೆ, ರಾಜರಾಗಿ ಯಕ್ಷಗಾನದಲ್ಲಿ ರಾತ್ರಿ ಮೆರೆದರೆ ದಿನದಲ್ಲಿ ಅನುಭವಿಸಲಾಗದಂತ ಕಷ್ಟಗಳು ಕಲಾವಿದನ ಬದುಕಿನಲ್ಲಿದೆ ಅಂತ ಕಷ್ಟದ ಕಲಾವಿದರ ಸಾಲಿನಲ್ಲಿ ನಾನು ಕೂಡ ಸೇರಿಕೊಂಡವನು ನನ್ನ ಬದುಕಿಗೆ ಆಶ್ರಯವಾಗಲು ಸುಧಾಕರ್ ಶೆಟ್ಟಿ ಅವರ ಮೂಲಕ ತಾಯಾತ್ತ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ನುಡಿದರು.
B. Dinesh Kulal
Mob.: 9821868674
Show quoted text




