
ಮಂಡಳಿಯ ಧಾರ್ಮಿಕ, ಕಲಾ ಸೇವೆ ಅಭಿನಂದನೀಯ – ಆನಂದ ಶೆಟ್ಟಿ ಎಕ್ಕಾರು
ಚಿತ್ರ : ಧನಂಜಯ್ ಪೂಜಾರಿ, ವರದಿ : ಇನ್ನಂಜೆ ಜಯರಾಮ್
ಶಬರಿ ಅಯ್ಯಪ್ಪ ಭಜನಾ ಮಂಡಳಿ ಒಳ್ಳೋಳೆ ಕಾರ್ಯಕ್ರಮವನ್ನು ನೀಡುತ್ತಿದೆ ಇಷ್ಟೊಂದು ಸಭಿಕರನ್ನು ಕಂಡಾಗ ತುಂಬಾ ಆನಂದವಾಗುತ್ತಿದೆ, ಈ ಮಂಡಳಿಯ ಮುಖಾಂತರ ಕಲೆ, ಕಲಾವಿದರಿಗೆ ಬಹಳ ಸಹಕಾರವನ್ನು ಕೊಡುತ್ತಿದ್ದಾರೆ. ದಿನೇಶ್ ಮೊಗವೀರ ಮತ್ತು ಅವರ ಪದಾಧಿಕಾರಿಗಳು ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಇವರು ತುಂಬ ಒಳ್ಳೆಯ ಮನಸ್ಸಿನವರು, ಅವರಿಗೆ ದೇವರ ಆಶೀರ್ವಾದ ಸದಾ ಇದೆ. ನೀವು ಎಲ್ಲರೂ ಈಗೆ ಒಳ್ಳೆ ಒಳ್ಳೆಯ ಕಾರ್ಯಕ್ರಮ ಮಾಡುತ್ತ ಇರಿ, ಯಕ್ಷಗಾನಕ್ಕೆ, ಕಲೆಗೆ ಪ್ರೋತ್ಸಾಹ ಕೊಡುತ್ತಾ ಇರಿ, ನಿಮಗೆ ಎಲ್ಲರಿಗೂ ದೈವ ದೇವರುಗಳು ಆಯುಷ್ಯ ಆರೋಗ್ಯ ಸಕಲ ಸಂಪತ್ತು ಒದಗಿಸಲಿ, ಸಂಸ್ಥೆಯ ಧಾರ್ಮಿಕ, ಕಲಾ ಸೇವೆ ಅಭಿನಂದನೀಯ ಎಂದು ಬಂಟರ ಸಂಘ ಡೊಂಬಿವಲಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಆನಂದ ಶೆಟ್ಟಿ ಎಕ್ಕಾರು ಅವರು ಆಗಸ್ಟ್ 10ರಂದು, ಭಾನುವಾರ ಸಂಜೆ ಜನ ಗಣ ಮನ ಸ್ಕೂಲ್, ನೆಮಾಡೆ ಗಲ್ಲಿ, ಜೂನಾ ಡೊಂಬಿವಲಿ ಇಲ್ಲಿ, ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ (ಪ.)ಇವರ ವ್ಯವಸ್ಥಾಪಕತ್ವ ಹಾಗೂ ಸಂಯೋಜನೆಯಲ್ಲಿ ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ‘ಚತುರ್ಜನ್ಮಮೋಕ್ಷ’ ಎಂಬ ಪೌರಾಣಿಕ ಪ್ರಸಂಗದ ಮಧ್ಯಂತರದಲ್ಲಿ ನಡೆದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ, ಡೊಂಬಿವಲಿಯ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ ಭಟ್ ಕಾನಂಗಿ ಶುಭ ಆಶೀರ್ವಚನ ನೀಡುತ್ತ ಯಕ್ಷಗಾನ ಉಳಿಯಬೇಕು, ಯಕ್ಷಗಾನ ಬೆಳೆಯಬೇಕು ಎಂಬ ಒಂದೇ ಒಂದು ಉದ್ದೇಶ ದಿಂದ ನಾವೆಲ್ಲ ನಮ್ಮ ಅಳಿಲು ಸೇವೆ ಎಂಬ ರೂಪದಲ್ಲಿ ಇವತ್ತು ಯಕ್ಷಗಾನ ಹಮ್ಮಿಕೊಂಡಿದ್ದೇವೆ. ಇದಕ್ಕೆ ನಮಗೆಲ್ಲರಿಗೂ ನಿಮಗೆ ದೇವರ ಆಶೀರ್ವಾದ ಇರಲಿ, ತಮಗೆಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂದು ಆಶೀರ್ವದಿಸಿದರು.

ಕೆ ಡಿ ಎಂ ಸಿ ಯ ಮಾಜಿ ನಗರ ಸೇವೆಕರಾದ ವಿಶ್ವನಾಥ್ ರಾಣೆ ಮಾತನಾಡುತ್ತಾ ಈ ಮಂಡಲವು ಈ ಪರಿಸರದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಇವತ್ತಿನ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ. ನನಗೆ ಕನ್ನಡ ಬರುವುದಿಲ್ಲ ಆದರೂ ಈಗ ಕನ್ನಡ ಕಲಿಯಬೇಕು, ನಿಮ್ಮ ಕಾರ್ಯಕ್ರಮ ನೋಡಲಿಕ್ಕಾದರೂ ಕನ್ನಡ ಕಲಿಯಬೇಕು ಎಂದು ಅನಿಸುತ್ತಿದೆ, ನಿಮ್ಮೊಂದಿಗೆ ನಾವು ಯಾವಾಗಲೂ ಇದ್ದೇವೆ ಎಂದರು.

ಕಲಾಸಂಘಟಕ, ಕಲಾಪೋಷಕ ಹಾಗೂ ಹೋಟೆಲ್ ಉದ್ಯಮಿ, ಶ್ರೀ ಆರ್ಡಿ ಉದಯ ಶೆಟ್ಟಿ, ಯಕ್ಷಗಾನ ಪ್ರದರ್ಶನಕ್ಕೆ ಸಹಕರಿಸಿದ ಜೆ ಎಂ ಎಫ್ ಮೂವೀಸ್ ನ ಪ್ರೊಡ್ಯೂಸರ್ ಜಾನಕಿ ರಾಜಕುಮಾರ್ ಕೊಲ್ಹೈ ಇವರನ್ನು ಪರಿವಾರ ಸಮೇತ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಆರ್ಡಿ ಉದಯ ಶೆಟ್ಟಿ ಅವರು ಮಾತನಾಡುತ್ತಾ ಶಬರಿ ಅಯ್ಯಪ್ಪ ಭಜನಾ ಮಂಡಳಿಯವರ ಸಂಭ್ರಮ ಸಡಗರದ ದಿನ ನನಗೆ ಸನ್ಮಾನ ಮಾಡಿದ್ದಕ್ಕೆ ಶಬರಿ ಅಯ್ಯಪ್ಪ ಮಂಡಳಿಯ ಎಲ್ಲಾ ಸದಸ್ಯರಿಗೂ ನಾನು ವಂದಿಸುತ್ತಿದ್ದೇನೆ. ಇವರ ಯಕ್ಷಗಾನ ಕಲಾ ಸೇವೆ ಹೇಗೆ ಮುಂದುವರಿಯಲಿ ಎಂದು ಶುಭಾ ಹಾರೈಸಿದರು.
ಜಾನಕಿ ರಾಜಕುಮಾರ್ ಕೊಲ್ಹೈ ಮಾತನಾಡುತ್ತಾ ಕರ್ನಾಟಕದ ಕಲೆ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸನ್ಮಾನಕ್ಕೆ ಧನ್ಯವಾದ ಹೇಳಿದರು.






ಈ ಸಂದರ್ಭದಲ್ಲಿ ಮುಂಬೈ ಕರಾವಳಿ ಕನ್ನಡಿಗರ ಬಳಗದ ಸದಸ್ಯರನ್ನು, ಮಾರಣಕಟ್ಟೆ ಮೇಳದ ಎಲ್ಲಾ ಕಲಾವಿದರ ಪರವಾಗಿ ಮೆನೇಜರ್ ಪ್ರಭಾಕರ್ ಶೆಟ್ಟಿ ಮಡಮಕ್ಕಿ ಅವರನ್ನು, ಮಾರಣಕಟ್ಟೆ ಮೇಳದ ಮುಂಬೈ ಸಂಚಾಲಕರಾದ ಸಿವಿಲ್ ರಮೇಶ್ ಶೆಟ್ಟಿಯವರನ್ನು ಗೌರವಿಸಲಾಯಿತು.
ಮೊಗವೀರ ಮಹಾಜನ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆಯ ಕಾರ್ಯಕರ್ತ ರನ್ನು , ಆರೂರು ಯಕ್ಷ ಕಲಾಭಿಮಾನಿ ಬಳಗದ ಸೀತಾರಾಮ್ ಶೆಟ್ಟಿ, ಭಜನೆ ಗುರು ಗೋಪಿನಾಥ್, ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ನ ಅನುಪಮಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಣ್ಯರುಗಳಾಗಿ ಪ್ರೀತಿ ಬ್ಯಾಂಕ್ವೆಟ್ ಹಾಲ್, ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಲಿ ಇದರ ಗೌ| ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಪೂಜಾರಿ,
ಕೆ ಡಿ ಎಂ ಸಿ ಯ ಮಾಜಿ ನಗರ ಸೇವೆಕರಾದ ವಿಶ್ವನಾಥ್ ರಾಣೆ, ಬಂಟರ ಸಂಘ, ಭಿವಂಡಿ-ಬದ್ಲಾಪುರ ಕಮಿಟಿಯ ಸಲಹೆಗಾರರು, ಮಾಜಿ ಅಧ್ಯಕ್ಷರು ಆದ ಶ್ರೀ ರವೀಂದ್ರ ವೈ. ಶೆಟ್ಟಿ , ಬಿಲ್ಲವರ ಅಸೋಶಿಯೇಷನ್, ಮುಂಬಯಿಯ ಕೋಶಾಧಿಕಾರಿ ಶ್ರೀ ರವಿ ಸನಿಲ್, ಮೊಗವೀರ ಮಹಾಜನ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆಯ ಅಧ್ಯಕ್ಷರಾದ ಶ್ರೀ ರಾಜು ಮೊಗವೀರ, ಹೊಟೇಲ್ ರಂಜಿತ್ ಪ್ಯಾಲೇಸ್, ಡೊಂಬಿವಲಿಯ ಶ್ರೀ ಗಣೇಶ್ ಶೆಟ್ಟಿ, ಜನ ಗಣ ಮನ ಶಾಲೆಯ ಕಾರ್ಯದರ್ಶಿ ಪ್ರೇರಣಾ ರಾಜಕುಮಾರ್ ಕೊಲ್ಹೈ, ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯ ಉಪಾಧ್ಯಕ್ಷರಾದ ಶ್ರೀ ದಿನೇಶ್ ಪೂಜಾರಿ, ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಕೋಟ್ಯಾನ್, ಜೈ ಭವಾನಿ ಶನೀಶ್ವರ ಮಂದಿರ, ಡೊಂಬಿವಲಿಯ ಅಧ್ಯಕ್ಷರಾದ ಶ್ರೀ ಸೂರಜ್ ಸಫಲಿಗ, ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆಯ ಕಾರ್ಯದರ್ಶಿ ಶ್ರೀ ಸಂತೋಷ್ ಪುತ್ರನ್, ಉದ್ಯಮಿ, ಕಲಾಪೋಷಕರು ಆದ ಶ್ರೀ ಶೇಖರ್ ಚಂದನ್, ಕಲಾ ಪೋಷಕಿ, ಡೊಂಬಿವಲಿ ಶ್ರೀಮತಿ ಸುಮತಿ ರಾಜು ಮೊಗವೀರ, ದಿವ್ಯಾ ಕೇಟರಿಂಗ್ ಸರ್ವಿಸ್, ದಿವಾದ ಶ್ರೀ ಸತೀಶ್ ಸುವರ್ಣ, ಕಲಾಪೋಷಕರಾದ ಶ್ರೀ ಜಯಕರ್ ಶೆಟ್ಟಿ, ಉಪಸ್ಥಿತರಿದ್ದರು.

ಮೇಳದ ಪರವಾಗಿ ಕಲಾಪೋಷಕ, ಸಂಘಟಕ, ಕಲಾವಿದ ಸೀತಾರಾಮ್ ಶೆಟ್ಟಿ ಆರೂರು, ಹಾಗೂ ಶಬರಿ ಅಯ್ಯಪ್ಪ ಭಜನಾ ಮಂಡಳಿಯ ರೂವಾರಿ ಉಪಾಧ್ಯಕ್ಷರಾದ ದಿನೇಶ್ ಮೊಗವೀರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದ ಮನಸ್ವಿ ಹಾಸ್ಪಿಟಲಿಟಿಯ ಸುನಿಲ್ ಕುಂದರ್, ಸುರೇಶ್ ಶೆಟ್ಟಿ ಶೃಂಗೇರಿ ಅವರನ್ನು ಗೌರವಿಸಲಾಯಿತು.
ಮಂಡಳಿಯ ಕಾರ್ಯದರ್ಶಿ ವಾಸು ಮೊಗವೀರ ಸನ್ಮಾನಿತರ ಪರಿಚಯ ಮಾಡಿ ಧನ್ಯವಾದ ಸಮರ್ಪಿಸಿದರು. ರಾಘವೇಂದ್ರ ಬಾಗ್ವಡಿ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಭಿಮಾನಿಗಳು,ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.




